ಯುಪಿಎಗೆ ಸಂಪುಟ ವಿಸ್ತರಣೆ; ನಿರೀಕ್ಷೆಯಲ್ಲಿ ಖರ್ಗೆ

ಮೊದಲ ಕಂತಿನಲ್ಲಿ ಅವಕಾಶ ತಪ್ಪಿಸಿಕೊಂಡ ಕರ್ನಾಟಕದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ ಎಚ್ ಮುನಿಯಪ್ಪ ಅವರು ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಖರ್ಗೆ ಅನುಯಾಯಿಗಳು ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದು, ಪಕ್ಷದ ಪ್ರಮುಖರೊಡನೆ ಮಾತುಕತೆ ನಡೆಸಿದ್ದಾರೆ. 6 ಬಾರಿ ಸಂಸದರಾಗಿ ಆಯ್ಕೆ ಆಗಿರುವ ಮುನಿಯಪ್ಪ ಅವರು ಈ ಬಾರಿ ಸಂಪುಟ ದರ್ಜೆಗೆ ಏರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಘಟಾನುಘಟಿಗೆ ಸ್ಥಾನ: ಉತ್ತರ ಪ್ರದೇಶದ ಮುಖಂಡ ಸಲ್ಮಾನ್ ಖುರ್ಷೀದ್, ಕಾಶ್ಮೀರದ ಫಾರುಖ್ ಅಬ್ದುಲ್ಲಾ, ಮಹಾರಾಷ್ಟ್ರದ ವಿಲಾಸ್ ಮುತ್ತೆಮ್ ವಾರ್, ಮುಕುಲ್ ವಾಸ್ನಿಕ್, ಜ್ಯೋತಿರಾದಿತ್ಯಾ ಸಿಂಧ್ಯಾ, ಜಿತಿನ್ ಪ್ರಸಾದ್, ಸಚಿನ್ ಪೈಲೆಟ್, ತೃಣಮೂಲ ಕಾಂಗ್ರೆಸ್ ನ 6 ಜನ, ಡಿಎಂಕೆಯ ಮೂವರಿಗೆ ಕ್ಯಾಬಿನೆಟ್ ದರ್ಜೆ ಸಿಗುವ ಸಂಭವವಿದೆ. ಕಿಶೋರ್ ಚಂದ್ರ ದೇವ್ ಮುಂದಿನ ಸ್ಪೀಕರ್ ಆಗುವ ಸಾಧ್ಯತೆಯಿದೆ.
ಈ ಮಧ್ಯೆ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರ ಮಗ ಅಳಗಿರಿಗೆ ಕೆಮಿಕಲ್ ಹಾಗೂ ರಸಗೊಬ್ಬರ ಖಾತೆ, ದಯಾನಿಧಿ ಮಾರನ್ ಗೆ ಐಟಿ, ಎ ರಾಜಾ ಗೆ ಜವಳಿ ಖಾತೆ ಸಿಗುವ ಸಂಭವವಿದೆ. ಕರುಣಾನಿಧಿ ಅವರ ಮಗಳು ಕನ್ನಿಮೋಳಿಗೆ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಖಾತೆ ಸಿಗಲಿದ್ದು, ಸಚಿವ ಸ್ಥಾನ ವಂಚಿತ ಟೆಆರ್ ಬಾಲು ಅವರನ್ನು ಉಪಸಭಾಪತಿ ಮಾಡುವ ಸಾಧ್ಯತೆಯಿದೆ. ಡಿಎಂಕೆ ಗೆ ಸಿಗುವ ಸ್ಥಾನಗಳು ಕೊನೆಕ್ಷಣದಲ್ಲಿ ಬದಲಾಗುವ ಸಾಧ್ಯತೆಗಳಿವೆ.
(ದಟ್ಸ್ ಕನ್ನಡವಾರ್ತೆ)












Click it and Unblock the Notifications