ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2009 ರ ಲೋಕಸಭೆ ಸ್ವಾರಸ್ಯಕರ ಸಂಗತಿಗಳು

By Staff
|
Google Oneindia Kannada News

ಬೆಂಗಳೂರು, ಮೇ. 19 : 2009 ಚುನಾವಣೆಯ ಕೆಲವೊಂದು ಸ್ವಾರಸ್ಯಕರ ಅಂಶಗಳು ಹೀಗಿವೆ. ಆಯ್ಕೆಯಾಗಿರುವ 28 ಸಂಸದರಲ್ಲಿ 9 ಮಂದಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ಇದೆ. ಇದರಲ್ಲಿ ಬಿಜೆಪಿಯ 6, ಜನತಾದಳದ 2 ಮತ್ತು ಕಾಂಗ್ರೆಸ್ ಪಕ್ಷದ 1 ಸಂಸದರಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿದ್ದ ಕ್ರಿಮಿನಲ್ ಸಂಸದರ ಸಂಖ್ಯೆ 4 ಆಗಿತ್ತು.

28 ಸಂಸದರ ಪೈಕಿ 25 ಸಂಸದರು ಕೊಟ್ಯಾಧಿಪತಿಗಳು. ಒಂದು ಕೋಟಿಗಿಂತ ಕಮ್ಮಿ ಆಸ್ತಿಯಿರುವ (ಆಯೋಗಕ್ಕೆ ನೀಡಿದ್ದ ರಾಮನ ಲೆಕ್ಕದ ಪ್ರಕಾರ) ಮೂರು ಸಂಸದರೆಂದರೆ ದಕ್ಷಿಣಕನ್ನಡ ಕ್ಷೇತ್ರದ ನಳೀನ್ ಕುಮಾರ್ ಕಟೀಲ್, ರಾಯಚೂರಿನ ಫಕೀರಪ್ಪ ಮತ್ತು ಉತ್ತರಕನ್ನಡದ ಅನಂತ್ ಕುಮಾರ್ ಹೆಗ್ಡೆ. ಆರಿಸಿ ಬಂದಿರುವ ಸಂಸದರಲ್ಲಿ ಮೂರು ಮಂದಿ ಇನ್ನೂ ಖಾಯಂ ಆದಾಯ ತೆರಿಗೆ ಸಂಖ್ಯೆ (PAN No.) ವಿವರವನ್ನು ಆಯೋಗಕ್ಕೆ ನೀಡಿಲ್ಲ.

ಬಳ್ಳಾರಿಯಿಂದ ಸಚಿವ ರಾಮುಲು ಸಹೋದರಿ ಜೆ ಶಾಂತಾ ರಾಜ್ಯದಿಂದ ಆಯ್ಕೆಯಾಗಿರುವ ಏಕೈಕ ಮಹಿಳಾ ಸಂಸದರಾಗಿದ್ದಾರೆ. ಆಯ್ಕೆಯಾದವರಲ್ಲಿ ಶೇ. 40 ಮಂದಿ ಪದವೀಧರರು, ಶೇ 20 ಮಂದಿ ಸ್ನಾತ್ತಕೋತ್ತರ ಪದವೀಧರರಾದರೆ, ಉಳಿದವರು ಪಿಯುಸಿ ತನಕ ವಿಧ್ಯಾಭ್ಯಾಸ ಮಾಡಿದ್ದಾರೆ.

ಆಯೋಗಕ್ಕೆ ನೀಡಿದ ಲೆಕ್ಕದ ಪ್ರಕಾರ ಆಯ್ಕೆಯದ ಸಂಶದರಲ್ಲಿ ಜನತಾದಳದಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಆಯ್ಕೆಯಾದ ಕುಮಾರಸ್ವಾಮಿ ಅತಿ ಹೆಚ್ಚು ಆಸ್ತಿ ಹೊಂದಿದವರಾಗಿದ್ದಾರೆ. ಅವರ ಬಳಿ 48.47 ಕೋಟಿ, ಎರಡನೇ ಸ್ಥಾನದಲ್ಲಿ ಹಾವೇರಿ ಕ್ಷೇತ್ರದಿಂದ ಆಯ್ಕೆಯಾದ ಶಿವಕುಮಾರ್ ಉದಾಸಿ ಬಳಿ 48.25 ಕೋಟಿ ಆಸ್ತಿಯಿದೆ ಎಂದು ಘೋಷಿಸಿದ್ದಾರೆ.

ದೇಶದ ಒಟ್ಟು ಸಂಸದರ ಪೈಕಿ 300 ಮಂದಿ ಕೋಟ್ಯಾಧಿಪತಿಗಳಿದ್ದಾರೆ. ಇದರಲ್ಲಿ ಉತ್ತರಪ್ರದೇಶದಿಂದ 52, ಮಹಾರಾಷ್ಟ್ರದ 37, ಆ೦ದ್ರಪ್ರದೇಶದ 31 ಮತ್ತು ಕರ್ನಾಟಕದ 25 ಮಂದಿಯಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X