ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ಎರಡು ದಿನ ರಾಜ್ಯದಲ್ಲಿ ಭಾರಿ ಮಳೆ ಸಂಭವ

By Staff
|
Google Oneindia Kannada News

Heavy rain forecast by meteorological dept in Karnataka
ಬೆಂಗಳೂರು, ಮೇ 18 : ಕಳೆದೆರಡು ದಿನಗಳಿಂದ ಹುಯ್ಯುತ್ತಿರುವ ಮಳೆಗೆ ಬೆಂಗಳೂರಿನ ಚರಂಡಿಗಳು, ಅಗಿದ ರಸ್ತೆಗಳು, ರಸ್ತೆ ತಗ್ಗುಗಳು ತುಂಬಿ ತುಳುಕಾಡುತ್ತಿವೆ. ಜೋರು ಗಾಳಿ, ಬರೀ ಆರ್ಭಟದಿಂದ ಕೂಡಿ ಮಳೆಗೆ ರಾಜಧಾನಿಯ ಜನತೆ ಮೈಯೊಡ್ಡಿದ್ದಾರೆ.

ಆಗಿದ್ದು ಬರೀ 16 ಮಿ.ಮೀ. ಮಳೆ. ಇಷ್ಟಕ್ಕೇ ರಸ್ತೆಗಳು ರಸ್ತೆಗೆ ಹರಿದುಬಂದ ಚರಂಡಿ ನೀರಿನಲ್ಲಿ ತೇಲಾಡುತ್ತಿದ್ದಂತೆ ಭಾಸವಾಗುತ್ತಿದೆ. ಗರಿಷ್ಠ ತಾಪಮಾನ 35ರಿಂದ 33 ಡಿಗ್ರಿ ಸೆಲ್ಷಿಯಸ್ ಗೆ ಕುಸಿದಿದೆ. ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಷಿಯಸ್ ನಷ್ಟಿದೆ. ಮಧ್ಯಾಹ್ನ ಬಿರುಬಿರು ಬಿಸಿಲು ಸಂಜೆ ಜನ ಕಚೇರಿ ಕೆಲಸ ಮುಗಿಸಿ ಇನ್ನೇನು ಮನೆ ಸೇರಬೇಕು ಮಳೆ ಪ್ರಾರಂಭ.

ನಗರದ ಅನೇಕ ಕಡೆಗಳಲ್ಲಿ ಬೃಹತ್ ಮರಗಳು ಧರೆಗುರುಳಿವೆ. ತಗ್ಗಿನ ಪ್ರದೇಶದಲ್ಲಿ ಸಣ್ಣ ಮಳೆಯಾದರೂ ಮಳೆ ನೀರು ನುಗ್ಗುವ ಆತಂಕ ತಪ್ಪಿದ್ದಲ್ಲ. ರಸ್ತೆ ಬದಿಯಿರುವ ಮರ ಯಾವ ಹೊತ್ತಿನಲ್ಲಿ ಧರೆಗುರುಳುವುದೋ ಎಂಬ ಆತಂಕದಲ್ಲಿಯೇ ಜನ ಮನೆ ಸೇರುತ್ತಿದ್ದಾರೆ.

ಬೆಂಗಳೂರು ಮಾತ್ರವಲ್ಲ ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ಮಳೆ ಹುಯ್ಯುತ್ತಿದೆ. ಮುಂಗಾರು ಮಳೆ ರಾಜ್ಯಕ್ಕೆ ಕಾಲಿಡಲು ಇನ್ನೇನು ವಾರ ಉಳಿದಿರುವಾಗಲೇ ಮಳೆ ತನ್ನ ಆರ್ಭಟ ಪ್ರಾರಂಭಿಸಿದೆ. ಮೇ 26ರಿಂದ ರಾಜ್ಯದಲ್ಲಿ ಮುಂಗಾರು ಮಳೆ ಕಾಲಿರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಲಾಖೆಯ ಪ್ರಕಾರ ಮುಂದಿನ ಎರಡು ಮೂರು ದಿನ ದಕ್ಷಿಣ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸೂಚನೆಗಳಿವೆ. ಮಡಿಕೇರಿ, ಮೈಸೂರು, ಬೆಂಗಳೂರು, ಮಂಡ್ಯ, ಹಾಸನ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X