ರಾಹುಲ್ ಅಲ್ಲ ಸಿಂಗ್ ಅವರೇ ಪ್ರಧಾನಿ : ಸೋನಿಯಾ

Manmohan gives credit to Sonia Gandhi and Rahul
ನವದೆಹಲಿ, ಮೇ 16 : 15ನೇ ಲೋಕಸಭೆ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಯುಪಿಎ ಅಧ್ಯಕ್ಷೆ ಇಂದು ನಾಲ್ಕು ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ ಯೋಜಿಸಿದಂತೆ ಡಾ.ಮನಮೋಹನ ಸಿಂಗ್ ಅವರೇ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಸಾರಿದರು.

ಯುಪಿಎ ಅಭ್ಯರ್ಥಿಯಾಗಿದ್ದ ಸಿಂಗ್ ಅವರೇ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಸೋನಿಯಾ ಸ್ಪಷ್ಟೋಕ್ತಿಗಳಲ್ಲಿ ತಿಳಿಸಿದ್ದರೂ, ಅಂತಿಮವಾಗಿ ಸರ್ವೋಚ್ಚ ಪದವಿ ಯಾರಿಗೆ ದೊರಕಲಿದೆ ಎಂಬ ಬಗ್ಗೆ ಪತ್ರಕರ್ತರಲ್ಲಿ ಇನ್ನೂ ಸಂದೇಹ ಕಾಡುತ್ತಿದೆ. ಎಲ್ಲ ಸಂದೇಹ, ಊಹಾಪೋಹಗಳಿಗೆ ತೆರೆ ಎಳೆದ ಸೋನಿಯಾ ಅವರು ಈಮೊದಲು ಐದು ವರ್ಷಗಳ ಕಾಲ ಘನತೆಯಿಂದ ದೇಶ ನಡೆಸಿದ ಮನಮೋಹನ ಸಿಂಗ್ ಅವರೇ ದೇಶವನ್ನು ಮುನ್ನಡೆಸಲಿದ್ದಾರೆ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವುದಿಲ್ಲ ಎಂದರು.

ರಾಹುಲ್, ಸೋನಿಯಾ ಗುಣಗಾನ : ನಂತರ ಪತ್ರಕರ್ತರನ್ನುದ್ದೇಶಿ ಮಾತನಾಡಿದ ಮನಮೋಹನ ಸಿಂಗ್ ಅವರು, ಅದ್ಭುತ ಜನಾದೇಶ ದೊರಕಿದ್ದಕ್ಕೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಯುವ ನಾಯಕ ರಾಹುಲ್ ಗಾಂಧಿ ಅವರು ಕಾರಣಕರ್ತರು ಎಂದು ತಮ್ಮ ಎಂದಿನ ನಿಷ್ಠೆಯನ್ನು ವ್ಯಕ್ತಪಡಿಸಿದರು. ರಾಹುಲ್ ಮುಂದಿನ ಪ್ರಧಾನಿ ಎಂಬ ಬಗ್ಗೆ ಹಿಂದೆ ಅವರಾಡಿದ ಮಾತಿಗೆ ಪ್ರತಿಕ್ರಿಯೆ ಕೇಳಿದಾಗ, ನಗುವೇ ಅವರ ಉತ್ತರವಾಗಿತ್ತು.

ರಾಹುಲ್ ಪ್ರಧಾನಿಯಾಗಲಿದ್ದಾರೆ ಎಂಬ ಸುದ್ದಿಗೆ ಪೂರಕವೆಂಬಂತೆ ಇನ್ನೊಬ್ಬ ಯುವ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಅವರು ರಾಹುಲ್ ಪ್ರಧಾನಿಯಾಗಬೇಕು ಎಂದು ಹೇಳಿದ್ದರು. ಎಲ್ಲ ಸಂದೇಹಗಳಿಗೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ವಕ್ತಾರ ಜನಾರ್ಧನ ದ್ವಿವೇದಿ ಅವರು ರಾಹುಲ್ ಅವರನ್ನು ಭವಿಷ್ಯದ ಪ್ರಧಾನಿಯನ್ನಾಗಿ ಬಿಂಬಿಸಲಾಗಿದೆಯೇ ಹೊರತು ಪ್ರಸ್ತುತ ಪ್ರಧಾನಿಯಾಗಲ್ಲ ಎಂದಿದ್ದಾರೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+