ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಹಣಕಾಸು ಸ್ಥಿತಿಯ ಬಗ್ಗೆ ಗವರ್ನರ್ ಮೆಚ್ಚುಗೆ

By Staff
|
Google Oneindia Kannada News

 R.B.I. Governor lauds Karnataka s fiscal discipline
ಬೆಂಗಳೂರು, ಮೇ. 15 : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಮಾಡಿ ರಿಸರ್ವ್ ಬ್ಯಾಂಕ್‌ನ ಗವರ್ನರ್ ಡಾ ಡಿ. ಸುಬ್ಬರಾವ್ ಅವರು ವಿತ್ತೀಯ ಶಿಸ್ತು ಮತ್ತು ಹಣಕಾಸು ನಿರ್ವಹಣೆ ಬಗ್ಗೆ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ಸಾಲ, ಠೇವಣಿ ಅನುಪಾತ ಶೇ 5 ರಷ್ಟು ಕಡಿಮೆಯಾಗಿದ್ದು ಅದನ್ನು ಹೆಚ್ಚಿಸಬೇಕು. ಕೃಷಿ ಕ್ಷೇತ್ರ ಹಾಗೂ ದುರ್ಬಲ ವರ್ಗಗಳಿಗೆ ಲಭ್ಯವಿರುವ ಮುಂಗಡ ಸಾಲದ ಮೊತ್ತ ಶೇ 1 ರಿಂದ 2 ರಷ್ಟು ಇಳಿಮುಖವಾಗಿದೆ. ಆ ಪ್ರಮಾಣವನ್ನು ಹೆಚ್ಚಿಸಬೇಕೆಂದು ಮುಖ್ಯಮಂತ್ರಿಗಳು ಒತ್ತಾಯಿಸಿದರು.

ನಬಾರ್ಡ್ ಸಂಸ್ಥೇ ರಾಜ್ಯ ಸಹಕಾರಿ ಸಾಲ ಸಂಸ್ಥೆಗಳಿಗೆ ನೀಡುತ್ತಿರುವ ಮರು ಸಾಲದ ಪ್ರಮಾಣವನ್ನು ಶೇ 40 ರಿಂದ 50 ರಷ್ಟು ಹೆಚ್ಚಿಸಬೇಕು. ಸಣ್ಣ ಕೈಗಾರಿಕೆಗಳಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು ಶೇ 13 ರಿಂದ ಶೇ 10 ಕ್ಕೆ ಇಳಿಸಬೇಕು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಶೇ 6 ರ ಬಡ್ಡಿ ದರದ ಸಾಲ ಯೋಜನೆ ಯಶಸ್ವಿಗೊಳಿಸಲು ರಾಷ್ಟ್ರೀಕೃತ ಬ್ಯಾಂಕುಗಳ ನಿಯಮಾವಳಿಗಳನ್ನು ಸರಳೀಕರಿಸಲು ಹಾಗೂ ಭದ್ರತೆ ನೀಡಲು ಒತ್ತಾಯಿಸದಂತೆ ಬ್ಯಾಂಕ್‌ಗಳ ಆಡಳಿತ ಮಂಡಳಿಗಳಿಗೆ ನಿರ್ದೇಶನ ನೀಡಬೇಕೆಂದೂ ಸಹ ಮುಖ್ಯಮಂತ್ರಿಗಳು ಮನವಿಮಾಡಿಕೊಂಡರು. ಈ ಎಲ್ಲಾ ಬೇಡಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸಕಾರಾತ್ಮಕ ನಿರ್ಣಯ ಕೈಗೊಳ್ಳುವ ಆಶಯವನ್ನು ಡಾ ಸುಬ್ಬರಾವ್ ವ್ಯಕ್ತಪಡಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X