ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಕರ ವರ್ಗಾವಣೆ ಆರಂಭ ಅರ್ಜಿಗಳ ಆಹ್ವಾನ

By Staff
|
Google Oneindia Kannada News

ಬೆಂಗಳೂರು, ಮೇ. 14 : 2009-10ನೇ ಸಾಲಿನ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದ್ದು, ವರ್ಗಾವಣೆ ಬಯಸುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವರ್ಗಾವಣೆಗಳನ್ನು ಕೌನ್ಸಿಲಿಂಗ್ ಮೂಲಕ ಮಾತ್ರವೇ ಮಾಡಲಾಗುವುದು. ಸುಮಾರು ಏಳು ವಾರಗಳ ವರ್ಗಾವಣೆ ಪ್ರಕ್ರಿಯೆಯು ಮೇ 12 ರಿಂದ ಆರಂಭವಾಗಿ ಜೂನೆ 30 ಕ್ಕೆ ಮುಕ್ತಾಯವಾಗಲಿದೆ.

ಶಿಕ್ಷಕರು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಮೇ 13 ರಿಂದ 25 ರೊಳಗಾಗಿ ಸಲ್ಲಿಸಬಹುದು. ಅರ್ಜಿ ನಮೂನೆಯನ್ನು ಶಿಕ್ಷಣ ಇಲಾಖೆಯು ಅಂತರ್‌ಜಾಲ ತಾಣ www.schooleducation.kar.nic.in ದಿಂದ ಪಡೆಯಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಜಿ. ಕುಮಾರ ನಾಯಕ ಅವರು ತಿಳಿಸಿದ್ದಾರೆ. ಭರ್ತಿ ಮಾಡಿದ ಅರ್ಜಿಗಳನ್ನು, ಪ್ರೌಢಶಾಲಾ ಶಿಕ್ಷಕರು ಆಯಾ ಶಾಲಾ ಮುಖ್ಯೋಪಾಧ್ಯಾಯರಿಗೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರು ಸಮೂಹ ಸಹಾಯಕ ಶಿಕ್ಷಣಧಿಕಾರಿಗೆ (ಸಿ.ಎ.ಇ.ಇ) ಸಲ್ಲಿಸಬೇಕು.
***

ಸಂಶೋಧನೆಗೆ 48ಲಕ್ಷ ರೂ. ಅನುದಾನ

ಡಾ. ಎಂ. ವಿ. ಶೆಟ್ಟಿ ಮೆಮೊರಿಯಲ್ ಟ್ರಸ್ಟಿನ ಆಶ್ರಯದಲ್ಲಿ ನಡೆಸುತ್ತಿರುವ ಡಾ. ಎಂ. ವಿ. ಶೆಟ್ಟಿ ಕಾಲೇಜ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಪ್ರಾಂಶುಪಾಲರಾದ ಡಾ. ಟಿ. ಎ. ಸುಬ್ಬರಾವ್ ಅವರು ಸಲ್ಲಿಸಿರುವ ಸಾಮಾನ್ಯ ಬಹುಭಾಷೀಯರಲ್ಲಿ ಮೆದುಳಿನ ವಿನ್ಯಾಸದ ಸಂಯೋಜನೆ ಎಂಬ ವಿಷಯದ ಕುರಿತು ಮಾಡುವ ಸಂಶೋಧನೆಗೆ ಭಾರತ ಸರ್ಕಾರದ ನವದೆಹಲಿಯ ವಿಜ್ಞಾನ ಮತ್ತು ತಾಂತ್ರಿಕ ವಿಭಾಗವು ರೂ. 48,32,800ರ ಅನುದಾನವನ್ನು ಮೂರು ವರ್ಷಗಳ ಅವಧಿಗೆ ಮಂಜೂರು ಮಾಡಿದೆ. ಈ ಸಂಶೋಧನೆ ದೇಶದ ಪ್ರತಿಷ್ಠಿತ ಇತರೆ 26 ಸಂಸ್ಥೆಗಳೊಡನೆ ಒಡಂಬಡಿಕೆಯಿಂದ ಎಂದು ಪ್ರಕಟಣೆ ತಿಳಿಸಿದೆ.

***
ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಮೇ 15 ರಂದು ಸಂಜೆ 4.30 ಗಂಟೆಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆಯು ಬೆಂಗಳೂರು ವಿಭಾಗ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯುವ ಚುನಾಯಿತ ಸದಸ್ಯರ ವಿಶೇಷ ಸಭೆಯಲ್ಲಿ ನಡೆಸಲಾಗುವುದು. ಈ ಎರಡು ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಅಂದು ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯವರೆಗೆ ಸದಸ್ಯರು ನಾಮನಿರ್ದೇಶನ ಸಲ್ಲಿಸಬಹುದು. ನಾಮಪತ್ರಗಳ ಪರಿಶೀಲನೆ ನಡೆಸಿ ಸಂಜೆ 4.20 ರೊಳಗಾಗಿ ನಾಮಪತ್ರ ಹಿಂದಕ್ಕೆ ಪಡೆಯಬಹುದಾಗಿದೆ ಎಂದು ಪ್ರಾದೇಶಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
****

ಲೋಕಸೇವಾ ಆಯೋಗದ ವೆಬ್‌ಸೈಟ್‌ನಲ್ಲಿ ಕೀ ಉತ್ತರ ಪ್ರಕಟ

ರಾಜ್ಯದ ವಿವಿಧ ಇಲಾಖೆಗಳಲ್ಲಿನ ತಾಂತ್ರಿಕೇತರ ಹುದ್ದೆಗಳಾದ ಪಶುವೈದ್ಯ ಪಶುಪಾಲನಾ ಪರೀಕ್ಷರು, ಮಾರುಕಟ್ಟೆ ಸಹಾಯಕರು ಮತ್ತು ಗ್ರಂಥಪಾಲಕರ ನೇಮಕಾತಿಗೆ ಸಂಬಂಧಿಸಿದಂತೆ ಆಯೋಗವು ಕಳೆದ ಜನವರಿಯಲ್ಲಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಪರಿಷ್ಕೃತ ಕೀ ಉತ್ತರಗಳನ್ನು ಆಯೋಗದ ವೆಬ್‌ಸೈಟ್ http://kpsc.kar.nic.in ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆಯೆಂದು ತಿಳಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X