ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಲಿತಾಂಶದ ನಂತರ ಎನ್ ಡಿಎ ತೆಕ್ಕೆಗೆ ಟಿಡಿಪಿ

By Staff
|
Google Oneindia Kannada News

ಹೈದರಾಬಾದ್, ಮೇ. 12 : ತೆಲಂಗಾಣ ರಾಷ್ಟ್ರೀಯ ಸಮಿತಿ ಎನ್ ಡಿಎ ತೆಕ್ಕೆಗೆ ಸೇರ್ಪಡೆಗೊಂಡ ನಂತರ ತೆಲುಗು ದೇಶಂ ಪಕ್ಷ ಕೂಡಾ ಅದೇ ದಾರಿ ತುಳಿಯಲಿದೆ ಎನ್ನುವ ಉಹಾಪೋಹಗಳು ಬಲವಾಗಿ ಕೇಳಿ ಬರುತ್ತಿರುವ ಬೆನ್ನಲ್ಲೇ ಎನ್ ಡಿಎ ಒಕ್ಕೂಟ ಸೇರಿ ಬಯಸುವ ಪಕ್ಷಗಳಿಗೆ ಮುಕ್ತ ಆಹ್ವಾನವಿದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎಂ ವೆಂಕಯ್ಯನಾಯ್ಡು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಲ್ ಕೆ ಅಡ್ವಾಣಿ ಅವರನ್ನು ಪ್ರಧಾನಮಂತ್ರಿಯನ್ನಾಗಿಸಲು ಅನ್ಯ ಪಕ್ಷಗಳ ಮುಖಂಡರೊಂದಿಗೆ ಚರ್ಚಿಸಲಾಗುವುದು. ಫಲಿತಾಂಶದ ನಂತರ ಆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು. ಮೇ 16ರ ನಂತರ ಫಲಿತಾಂಶ ಹೊರಬೀಳಲಿದೆ. ಎಲ್ ಕೆ ಅಡ್ವಾಣಿ ಅವರನ್ನು ಪ್ರಧಾನಮಂತ್ರಿ ಮಾಡುವುದು ಬಿಜೆಪಿ ಪಕ್ಷದ ಏಕೈಕ ಗುರಿ. ಒಂದು ವೇಳೆ ಬಿಜೆಪಿಗೆ ಅಗತ್ಯ ಸಂಖ್ಯೆ ಬಲ ದೊರೆಯದಿದ್ದಲ್ಲಿ, ತೆಲುಗು ದೇಶಂ ಪಕ್ಷ ಸೇರಿದಂತೆ ಸಮಾನ ಮನಸ್ಕ ಪಕ್ಷಗಳೊಂದಿಗೆ ಚರ್ಚೆ ನಡೆಯಲಾಗುವುದು ಎಂದು ನಾಯ್ಡು ಹೇಳಿದರು.

ದಕ್ಷಿಣ ಭಾರತದಲ್ಲಿ ಈ ಸಾರಿ ಬಿಜೆಪಿ ಉತ್ತಮ ಪ್ರದರ್ಶನನೀಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ನಾಯ್ಡು, ದೇಶದಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮುಲಿದೆ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.

(ಏಜೆನ್ಸೀಸ್)

ತೃತೀಯರಂಗ ತೂತು ಬಿದ್ದ ಮನೆ, ಪಿಎಂ
ಅಡ್ವಾಣಿ ಪ್ರಧಾನಿ ಆಗಲ್ಲ, ಕೋಡಿಮಠ ಶ್ರೀಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X