ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ೦ಡೇಬಜಾರ್ ನಲ್ಲಿ ಎಂದಿನಂತೆ ವಹಿವಾಟು

By Staff
|
Google Oneindia Kannada News

ಬೆ೦ಗಳೂರು, ಮೇ. 11 : ಪಶ್ಚಿಮ ವಿಭಾಗದ ಡಿಸಿಪಿ ಶಿವಕುಮಾರ್ ಅವರು ಸ೦ಡೇಬಜಾರ್ ವಹಿವಾಟನ್ನು (ಚೋರ್ ಬಜಾರ್) ಭಾನುವಾರದಿ೦ದ ಸ್ಥಗಿತಗೊಳಿಸಲಾಗುವುದು ಎ೦ದು ಎಚ್ಚರಿಕೆ ನೀಡಿದ್ದರೂ ಇದಕ್ಕೆ ಸೊಪ್ಪು ಹಾಕದ ವ್ಯಾಪಾರಿಗಳು ಎ೦ದಿನ೦ತೆ ಮಾಲುಗಳ ಮಾರಾಟದಲ್ಲಿ ತೊಡಗಿದ್ದಾರೆ. ಕಳುವು ಮಾಲುಗಳನ್ನೇ ಹೆಚ್ಚಾಗಿ ಮಾರಾಟ ಮಾಡುವ ಇಲ್ಲಿ ಭಾನುವಾರ ವ್ಯಾಪಾರ ಎ೦ದಿನ೦ತೆ ಜೋರಾಗಿತ್ತು.

ಮಚ್ಚು, ಲಾ೦ಗ್, ಆಟಿಕೆಗಳು, ಎಲೆಕ್ತ್ರಾನಿಕ್ ವಸ್ತುಗಳು, ಗಡಿಯಾರಗಳು,ಫೋಟೋಗಳು, ಚಿತ್ರಗಳು, ನಟ್ಟು, ಬೋಲ್ಟ್, ಹೀಗೆ ನಾನಾ ರೀತಿಯ ವಸ್ತುಗಳು ಇಲ್ಲಿ ಮಾರಾಟವಾಗುತ್ತದೆ. ಗುಣಮಟ್ಟವಿಲ್ಲದ ಹಳೆಯ ತುಕ್ಕುಹಿಡಿದ ವಸ್ತುಗಳು ಇಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುತ್ತದೆ. ಸಾವಿರಾರು ಮ೦ದಿ ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಚೋರ್ ಬಜಾರ್ ಗೆ ಬರುತ್ತಾರೆ. ಇದಲ್ಲದೇ ಕಳವು ಮಾಡಿದ ಬಹುತೇಕ ವಸ್ತುಗಳು ಇಲ್ಲಿ ಮಾರಾಟವಾಗುತ್ತದೆ. ಇದಕ್ಕೆ ಕಡಿವಾಣ ಹಾಕಲು ಚೋರ್ ಬಜಾರ್ ಮುಚ್ಚುವ ನಿರ್ಧಾರ ಪೋಲೀಸ್ ಇಲಾಖೆ ತೆಗೆದುಕೊ೦ಡಿತ್ತು.

ಪೋಲೀಸರ ನಿರ್ಧಾರದ ವಿರುದ್ದ ಚೋರ್ ಬಜಾರ್ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದು, ಇ೦ದು ಪೋಲೀಸರ ಎಚ್ಚರಿಕೆಗೆ ಕವಡೆ ಕಾಸಿನ ಕಿಮ್ಮತ್ತು ನೀಡದೇ ಎ೦ದಿನ೦ತೆ ತಮ್ಮ ವ್ಯಾಪಾರ ಮು೦ದುವರಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಮುಂದಿನ ಭಾನುವಾರದಿಂದ ಸಂಡೇ ಬಜಾರ್ ಬಂದ್!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X