ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯಂ ಬಿಪಿಒನಲ್ಲಿ ಪಿಂಕ್ ಸ್ಲಿಪ್ ಮೇಳ ಆರಂಭ

By Staff
|
Google Oneindia Kannada News

ಹೈದರಾಬಾದ್, ಮೇ. 8 : ಜಾಗತಿಕ ಆರ್ಥಿಕ ಮಾರುಕಟ್ಟೆ ಆರ್ಥಿಕ ಹಿಂಜರಿತಕ್ಕೆ ಸಂಬಂಧಿಸಿ ಟೆಕ್ ಮಹಿಂದ್ರ ಕಂಪನಿ ಇತ್ತೀಚೆಗೆ ತನ್ನ ವಶಕ್ಕೆ ತೆಗೆದುಕೊಂಡಿರುವ ಸತ್ಯಂ ಕಂಪನಿಯ ಬಿಪಿಒ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ನಿರ್ಧರಿಸಿದೆ. ರಾಮಲಿಂಗರಾಜು ಅವರ ಮೋಸದ ಲೆಕ್ಕಾಚಾರದಿಂದ ಸತ್ಯಂ ಕಂಪನಿ ಉದ್ಯೋಗಿಗಳು ಕೆಲಸ ಉಳಿಸಿಕೊಳ್ಳಲು ಹರಸಾಹಸ ನಡೆಸಿರುವ ಬೆನ್ನಲ್ಲೇ ನೂತನ ಆಡಳಿತ ಮಂಡಳಿಯ ತೆಗೆದುಕೊಂಡಿರುವ ನಿರ್ಧಾರ ಉದ್ಯೋಗಿಗಳಿಗೆ ಶಾಕ್ ನೀಡಿರುವುದಂತೂ ಸುಳ್ಳಲ್ಲ.

ಸತ್ಯಂ ಬಿಪಿಒದಲ್ಲಿ 3000 ಅಸೋಸಿಯೇಟ್ಸ್ ಕೆಲಸ ನಿರ್ವಹಿಸುತ್ತಾರೆ. 35 ಜನರಿಗೆ ಒಬ್ಬರು ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರ ಪ್ರಮಾಣ ಹೆಚ್ಚಾಗಿದ್ದು, 80 ಮಂದಿ ಅಸೋಸಿಯೇಟ್ಸ್ ಗೆ ಒಬ್ಬರು ಸಹಾಯಕರಂತೆ ಇರಿಸಿಕೊಳ್ಳಲು ನಿರ್ಧರಿಸಲಾಗಿದೆ. ಅಲ್ಲದೇ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೂಡಾ 60 ಜನರು ಮನೆಗೆ ಕಳಹಿಸಲು ಚಿಂತನೆ ನಡೆದಿದೆ.

ಕಾಸ್ಟ್ ಕಟಿಂಗ್ ಹಿನ್ನೆಲೆಯಲ್ಲಿ 200 ಮಿಲಿಯನ್ ಹಣವನ್ನು ಉಳಿಸಲು ಲೆಕ್ಕ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಸತ್ಯಂ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಸಂಖ್ಯೆಯ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲಾಗುವುದು. ಹಳೆಯ ಸತ್ಯಂ ಕಂಪನಿಯ ಆಡಳಿತ ಮಂಡಳಿ ಹೆಚ್ಚೆಚ್ಚು ಉದ್ಯೋಗಿಗಳನ್ನು ಸೇರಿಸಿಕೊಂಡಿದೆ. ಇದರಿಂದ ಮತ್ತಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ನಷ್ಟ ಭರಿಸುವ ಶಕ್ತಿ ನಮ್ಮಲ್ಲಿದ ಕಾರಣ, ಅನಿವಾರ್ಯವಾಗಿ ಉದ್ಯೋಗಿಗಳನ್ನು ಮನೆಗೆ ಕಳಿಸಬೇಕಾಗಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ. ಒಂದು ಮೂಲದ ಪ್ರಕಾರ ಸತ್ಯಂ ಕಂಪನಿಯ 10 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲಾಗುತ್ತಿದೆ ಎನ್ನುವ ಸುದ್ದಿ ಇದೆ.

(ಏಜನ್ಸೀಸ್)

ಮೈಕ್ರೋಸಾಫ್ಟ್ 3000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X