ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ಸೂಕ್ತ, ಪಿಎಂ

By Staff
|
Google Oneindia Kannada News

Rahul firm on Dr Singh, N-deal
ಬಾರ್ಮೇರ್, ನವದೆಹಲಿ, ಮೇ. 4 : ಸರಕಾರ ರಚನೆ ಸಂದರ್ಭದಲ್ಲಿ ಪ್ರಧಾನಿಯಾಗಿ ಮನಮೋಹನ್ ಸಿಂಗ್ ಹಾಗೂ ನಾಗರಿಕ ಪರಮಾಣು ಒಪ್ಪಂದ ಕುರಿತಂತೆ ಕಾಂಗ್ರೆಸ್ ನಿಲುವು ಎಂದಿಗೂ ಬದಲಾಗುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಮಹಾರಾಜ ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು. ಭಾನುವಾರ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಬಿಜೆಪಿ ಭಾರತ ಪ್ರಕಾಶಿಸುತ್ತದೆ ಜಾಹೀರಾತನ್ನು ಟೀಕಿಸಿದ ಅವರು, ಎನ್ ಡಿಎ ಒಕ್ಕೂಟದ ಕಾಳಜಿ ಎಂದರೆ ಷೇರು ಮಾರುಕಟ್ಟೆ ಖಾಸಗೀಕರಣ, ಶ್ರೀಮಂತರು ಮತ್ತು ಮೇಲ್ವರ್ಗದವರು ಮಾತ್ರ ಎಂದು ಆರೋಪಿಸಿದರು. ಇದಕ್ಕೆ ಪ್ರತಿಯಾಗಿ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ರಾಹುಲ್ ಗಾಂಧಿಗೆ ಪ್ರಧಾನಿ ಹುದ್ದೆ ಏರುವ ಎಲ್ಲ ಅರ್ಹತೆ ಇದೆ. ಅಧಿಕಾರ ಯುವಕರಿಗೆ ಹಸ್ತಾಂತರವಾಗಬೇಕು ಎನ್ನುವುದು ನನ್ನ ಅಭಿಮತ. ರಾಹುಲ್ ಗಾಂಧಿ ಅವರನ್ನು ಪ್ರಧಾನಮಂತ್ರಿ ಪಟ್ಟದಲ್ಲಿ ನೋಡುವ ಆಸೆ ಇದೆ ಎಂದು ತಮ್ಮ ಮನದಾಳದ ಇಂಗಿತವನ್ನು ಸಿಂಗ್ ವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಪ್ರಧಾನಿ ಪಟ್ಟಕ್ಕೆ ಸಿಂಗ್ ಸೂಕ್ತ ವ್ಯಕ್ತಿ : ರಾಹುಲ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X