ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ಪೊಲೀಸ್ ಗೆ ಹೈಕೋರ್ಟ್ ನೊಟೀಸ್

By Staff
|
Google Oneindia Kannada News

ಬೆಂಗಳೂರು, ಏ.30: ಮಂಗಳೂರು ಮೂಲದ ವಕೀಲ ನೌಶದ್ ಕಾಸಿಂ ಅವರ ಹತ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಂಗಳೂರು ಪೊಲೀಸರಿಗೆ ನೋಟೀಸ್ ಜಾರಿ ಮಾಡಿದೆ. ಜಸ್ಟೀಸ್ ಶೈಲೇಂದ್ರ ಕುಮಾರ್ ಮತ್ತು ಜಸ್ಟೀಸ್ ಜಾವೇದ್ ರಹೀಂ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ಈ ಪ್ರಕರಣದ ರಿಟ್ ಹೆಬಿಯಸ್ ಕಾರ್ಪಸ್ ಮೊಕದ್ದಮೆ ವಿಚಾರಣೆ ವೇಳೆ ಮಂಗಳೂರು ಅಪರಾಧಿ ಪೊಲೀಸರಿಗೆ ನೋಟೀಸ್ ಜಾರಿ ಮಾಡಿತು.

ದಕ್ಷಿಣ ಭಾರತದ ಮಾನವ ಹಕ್ಕುಗಳು ಮತ್ತು ಪರಿವೀಕ್ಷಣ ಘಟಕವು ಈ ಪ್ರಕರಣದ ಸಮಗ್ರ ತನಿಖೆ ಮಾಡುವಂತೆ ಮುಖ್ಯ ನ್ಯಾಯಾಧೀಶ ಪಿ ಡಿ ದಿನಕರನ್ ಅವರಿಗೆ ಏಪ್ರಿಲ್ 21, 2009ರಲ್ಲಿ ಪತ್ರ ಬರೆದು ವಿನಂತಿಸಿಕೊಂಡಿತ್ತು. ಈ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿ ಎಂದು ನ್ಯಾಯಾಲಯ ಪರಿಗಣಿಸಿ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.

ಡಿವೈ ಎಸ್ ಪಿ ಜಯಂತ್ ಶೆಟ್ಟಿ, ಇನ್ಸೆಪೆಕ್ಟರ್ ವೆಂಕಟೇಶ್ ಪ್ರಸನ್ನ, ಪೊಲೀಸ್ ಅಧಿಕಾರಿಗಳಾದ ಎಂ ಶಿವಪ್ರಕಾಶ್ ಮತ್ತು ವ್ಯಾಲಂಟೈನ್ ಡಿ"ಸೋಜಾ ಅವರ ಮೇಲೆ ಆಪಾದನೆ ಮಾಡಲಾಗಿತ್ತು. ಪ್ರಕರಣವನ್ನು ತನಿಖೆ ಮಾಡುತ್ತಿರುವ ಈ ಪೊಲೀಸ್ ಅಧಿಕಾರಿಗಳು ಹತ್ಯೆಯಲ್ಲಿ ಭಾಗಿಯಾಗಿದ್ದಾರೆಂದು ಫಿರ್ಯಾದಿ ಆಪಾದಿಸಿದ್ದರು.

ಸುಕಾನಂದ ಶೆಟ್ಟಿ ಹತ್ಯೆ ಮತ್ತು ಪದ್ಮಪ್ರಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡಅತುಲ್ ರಾವ್ ಹತ್ಯೆ ಕುರಿತ ಕೇಸುಗಳಲ್ಲಿ ನೌಶದ್ ಇದ್ದರಿ ಎಂಬ ಕಾರಣಕ್ಕೆ ಅವರನ್ನು ಪೊಲೀಸರೇ ನೇರವಾಗಿ ಹತ್ಯೆ ಮಾಡಿದ್ದಾರೆ ಎಂದು ಹಿರಿಯ ವಕೀಲ ಪುರುಷೋತ್ತಮ ಪೂಜಾರಿ ಆಪಾದಿಸಿದ್ದಾರೆ. ಪೊಲೀಸರು ಸಂಘ ಪರಿವಾರಕ್ಕೆ ಸಹಾಯ ಮಾಡುತ್ತಿದ್ದಾರೆ ಎಂದು ಆಪಾದಿಸಲಾಗಿದೆ.

ನೌಶದ್ ಕಾಸಿಂ ಯಾರು?
ರಶೀದ್ ಮಲಬಾರಿ ಪರ ನೌಶಾದ್ ಕಾಶಿಂ ವಾದ ಮಂಡಿಸಲು ಒಪ್ಪಿಕೊಂಡಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಡಾನ್ ರವಿ ಪೂಜಾರಿ, ತನ್ನ ಬೆಂಬಲಿಗರಿಗೆ ಸುಪಾರಿ ನೀಡಿ ವಕೀಲ ಕಾಶಿಂ ಅವರನ್ನು ಹತ್ಯೆ ಮಾಡಿದ್ದರು. ಈ ವಿಷಯವನ್ನು ರವಿ ಪೂಜಾರಿ ಅವರೇ ಖಾಸಗಿ ಟಿವಿ ವಾಹಿನಿ ಮೂಲಕ ಒಪ್ಪಿಕೊಂಡಿದ್ದಾರೆ. ಕಾಶಿಂ ಅವರನ್ನು ಪೊಲೀಸರೇ ರೌಡಿಗಳಿಗೆ ಸುಪಾರಿ ಕೊಟ್ಟ ಹತ್ಯೆ ಮಾಡಿಸಿದ್ದಾರೆ ಎಂದು ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

(ದಟ್ಸ್ ಕನ್ನಡ ವಾರ್ತೆ)

ಛೋಟಾ ಶಕೀಲ್ ನ ಐವರು ಸಹಚರರ ಬಂಧನ
ಮಲಬಾರಿ ವಕೀಲನ ಹತ್ಯೆ : 6 ಮಂದಿ ಬಂಧನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X