ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷೇತರ ಸಚಿವರನ್ನು ಕೈಬಿಡಲ್ಲ:ವೆಂಕಟರಮಣಪ್ಪ

By Staff
|
Google Oneindia Kannada News

D Sudhakar
ದಾವಣಗೆರೆ, ಏ. 28 : ಲೋಕಸಭೆ ಚುನಾವಣೆ ನಂತರವೂ ರಾಜ್ಯ ಸಚಿವ ಸಂಪುಟದಲ್ಲಿ ಮುಂದುವರೆಯುವ ವಿಶ್ವಾಸವಿದೆ ಎಂದು ಸಣ್ಣ ಕೈಗಾರಿಕೆ ಸಚಿವ ವೆಂಕಟರಮಣಪ್ಪ ಹಾಗೂ ಸಮಾಜ ಕಲ್ಯಾಣ ಸಚಿವ ಡಿ ಸುಧಾಕರ್ ಹೇಳಿದರು. ಲೋಕಸಭೆ ಚುನಾವಣೆ ನಂತರ ರಾಜ್ಯ ಸಚಿವ ಸಂಪುಟ ಪುನರ್ ರಚನೆಯಾಗಲಿದೆ ಎಂದು ಎದ್ದಿರುವ ಗಾಳಿ ಸುದ್ದಿಗೆ ಉಭಯ ಸಚಿವರು ಈ ರೀತಿ ಪ್ರತಿಕ್ರಿಯೆ ನೀಡಿದರು.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದ ಖಾತೆಯಲ್ಲಿ ಮುಂದುವರೆಯುವ ವಿಶ್ವಾಸವಿದೆ ಎಂದರು. ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರೆ ಸ್ಪಷ್ಟೀಕರಣ ನೀಡಿದ್ದು, ಚುನಾವಣೆ ನಂತರ ಸಚಿವ ಸಂಪುಟ ಪುನರ್ ರಚನೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಕೂಡಾ ಪಕ್ಷೇತರ ಸಚಿವರು ಬಿಜೆಪಿ ಸರಕಾರಕ್ಕೆ ಬೆಂಬಲ ನೀಡುತ್ತೇವೆ. ಇದರಲ್ಲಿ ಅನುಮಾನವೇ ಬೇಡ ಎಂದು ವೆಂಕಟರಮಣಪ್ಪ ಹೇಳಿದರು.

ಬಿಜೆಪಿ ಸರಕಾರ ರಚನೆಯಾಗಲು ಪಕ್ಷೇತರ ಶಾಸಕರಾದ ವೆಂಕಟರಮಣಪ್ಪ, ಡಿ ಸುಧಾಕರ್, ಶೇಖರ್ ಗೂಳಿಹಟ್ಟಿ ಮತ್ತು ಶಿವರಾಜ್ ತಂಗಡಗಿ ಅವರು ಬಿಜೆಪಿಗೆ ಬೆಂಬಲ ಘೋಷಿಸಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ನೇತೃತ್ವದ ನೂತನ ಸರಕಾರ ಅಸ್ತಿತ್ವಕ್ಕೆ ಬಂದಿತು. ಶಾಸಕ ವರ್ತೂರು ಪ್ರಕಾಶ್ ಕೂಡಾ ಬಿಜೆಪಿಗೆ ಬೆಂಬಲ ನೀಡಿ ನಿಗಮ-ಮಂಡಳಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 110 ಸ್ಥಾನ ಪಡೆದಿದ್ದ ಬಿಜೆಪಿ, ಸರಕಾರ ರಚಿಸಲು 4 ಶಾಸಕ ಅವಶ್ಯಕತೆ ಇತ್ತು. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಪಕ್ಷೇತರ ಶಾಸಕರು ಸರಕಾರಕ್ಕೆ ಬೆಂಬಲ ನೀಡಲು ಮುಂದೆ ಬಂದರು.

(ದಟ್ಸ್ ಕನ್ನಡ ವಾರ್ತೆ)
ಸಂಪುಟ ಪುನರ್ ರಚನೆ ಕೇವಲ ವದಂತಿ : ಬಿಎಸ್ ವೈ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X