ಗೌಡರ ಸ್ಥಿತಿ ಗೋವಿಂದಾ ಗೋವಿಂದ : ಡಿಕೆಶಿ
ಬೇಲೂರು, ಏ. 22 : ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಗೆ ಸೇರುತ್ತಿರುವ ಜನಸಾಗರ ನೋಡಿದರೆ ಮಾಜಿ ಪ್ರಧಾನಿ, ಜನತಾದಳ ಅಭ್ಯರ್ಥಿ ದೇವೇಗೌಡರ ಸ್ಥಿತಿ ಗೋವಿಂದಾ, ಗೋವಿಂದ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.
ದೇವೇಗೌಡರಿಗೆ ಪ್ರತಿ ಚುನಾವಣೆಯೂ ಕೊನೆಯೇ, ಗೌಡರಿಗಿದು ಮತ ಸೆಳೆಯವ ತಂತ್ರ. ಲೋಕಸಭೆಯಲ್ಲಿ ಬಾಯಿಬಿಡದ ದೇವೇಗೌಡರು ಅಲ್ಲಿಗೆ ಹೋಗಿ ಈಗ ಏನು ತಾನೆ ಮಾಡಿಯಾರು? ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಅವರಿಗೆ ತಕ್ಕೆ ಪಾಠ ಕಲಿಸಿ ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ.
ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರ್ಪಡೆಗೊಂಡಿರುವ ಶ್ರೀಕಂಠಯ್ಯ, ಡಿ ಬಿ ಚಂದ್ರೇಗೌಡ ಕುರಿತು ಹೆಚ್ಚಿನ ಮಾತುಗಳು ಬೇಡ. ಈಗಾಗಲೇ ಜನರು ಅವರನ್ನು ತಿರಸ್ಕರಿಸಿದ್ದಾರೆ. ಅಧಿಕಾರದ ಆಸೆಗಾಗಿ ಬಿಜೆಪಿ ಸೇರಿಕೊಂಡಿದ್ದಾರೆ. ಇಂತಹ ನಾಯಕರಿಂದ ಯಾವ ಪಕ್ಷಗಳು ಬೆಳೆಯಲು ಸಾಧ್ಯವಿಲ್ಲ. ಅಲ್ಲಿ ಕೂಡಾ ಈ ಇಬ್ಬರು ಬಹುದಿನ ಉಳಿಯುವ ಸಾಧ್ಯತೆ ಕಡಿಮೆ ಎಂದು ಶಿವಕುಮಾರ್ ಟೀಕಿಸಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications