233685lok sabha election 2009ಮಂಕುಬೂದಿ ಎರಚಲು ಸಾಧ್ಯವಿಲ್ಲದ ಇಂಕು!/news/2009/03/14/indelible-ink-by-mysore-paints-and-varnish.htmlಮೈಸೂರು, ಮಾ. 14 : ಏಪ್ರಿಲ್ ಮತ್ತು ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಹಳ ದಿನಗಳವರೆಗೆ ಅಳಿಸಲಾಗದ ಗುರುತು ಮೂಡಿಸುವ ಸಂಗತಿ ಯಾವುದು? ರೌಡಿಗಳ ದರ್ಬಾರು, ರಾಜಕಾರಣಿಗಳ ಭ್ರಷ್ಟಾಚಾರ ಯಾವುದೂ ಅಲ್ಲ. ಅದು, ಮತ ಹಾಕಿದ ನಂತರ ಎಡ ತೋರುಬೆರಳಿನ ಮೇಲೆ ಹಾಕುವ ಮಸಿಯ ಗುರುತು.ಹೌದು, ಪಂಚಾಯತಿ ಚುನಾವಣೆಯಿರಲಿ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯೇ ಇರಲಿ, ಬ್ಯಾಲೆಟ್ 35223http://kannada.oneindia.com/img/2009/03/14-gangubai-hangal2.jpg233685lok sabha election 2009ಚುನಾವಣೆ : ಡಿವಿ ಗುಂಡಪ್ಪ ಕಂಡಂತೆ/literature/poem/2009/0317-poetic-rendering-on-election-by-dvg.htmlಇಂದು (ಮಾರ್ಚ್ 17) ಡಿವಿ ಗುಂಡಪ್ಪ ಅವರ ಜನ್ಮದಿನ. ಅವರ 'ಮಂಕುತಿಮ್ಮನ ಕಗ್ಗ' ಎಲ್ಲರಿಗೂ ಗೊತ್ತು. ಆದರೆ, 'ಮಹಾಚುನಾವಣೆ'ಯ ಬಗ್ಗೆಯೂ ಡಿವಿಜಿ ಅವರು ಕೆಲವು ಪದ್ಯಗಳನ್ನು ಬರೆದಿದ್ದಾರೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. 1965ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಅಂದಿಗೂ ಇಂದಿಗೂ ಬದಲಾಗಿಲ್ಲವೆಂಬುದು ವೇದ್ಯವಾಗುತ್ತದೆ.* ಎಚ್. ಆನಂದರಾಮ ಶಾಸ್ತ್ರೀಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. 35286http://kannada.oneindia.com/img/2009/03/17-dvg5.jpg233685lok sabha election 2009ಮಹಾಸಮರಕ್ಕೊಂದು ಮುನ್ನುಡಿ/news/2009/03/17/lok-sabha-election-2009-wake-up-call.htmlಪ್ರಜಾಪ್ರಭುತ್ವದಲ್ಲಿ ಇನ್ನೂ ಪ್ರಜೆಗಳ ಕೈಯ್ಯಲ್ಲಿ ಉಳಿದುಕೊಂಡಿರುವ ಏಕೈಕ ಅಸ್ತ್ರ ಮತದಾನದ ಹಕ್ಕು. ಇದಕ್ಕೂ ಕುತ್ತು ಬಂದರೆ ಆಶ್ಚರ್ಯವಿಲ್ಲ. ಮತದಾನದಲ್ಲಿ ಪಾಲ್ಗೊಳ್ಳದೆ ಸಿಕ್ಕಿದ ರಜೆಯನ್ನು ಕಂಬಳಿ ಹೊದ್ದು ಮಲಗಲು ಬಳಸಿಕೊಂಡರೆ ದೇಶ ಆಳಲು ಅರ್ಥಾತ್ ನಮ್ಮನ್ನು ಆಳಲು ಒಳ್ಳೆಯವರು ಬರಲು ಸಾಧ್ಯವೇ ಇಲ್ಲ. ಇದನ್ನು ಪ್ರಜಾತಂತ್ರದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬನೂ ಅರಿಯುವುದೊಳಿತು.* ಚಿದಂಬರ ಬೈಕಂಪಾಡಿ, ಸೂರತ್ಕಲ್, ಮಂಗಳೂರುಮತ್ತೊಂದು ಮಹಾಸಮರಕ್ಕೆ ಅಖಾಡ 35294http://kannada.oneindia.com/img/2009/03/17-politician2.jpg233685lok sabha election 2009ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ/news/2009/03/17/15th-ls-poll-bjp-third-list-announced.htmlಬೆಂಗಳೂರು, ಮಾ. 17 : 15ನೇ ಲೋಕಸಭೆ ಚುನಾವಣೆಗೆ ಭಾರಿ ಸಿದ್ಧತೆಯಲ್ಲಿರುವ ಭಾರತೀಯ ಜನತಾ ಪಕ್ಷ ಇಂದು ನಾಲ್ಕು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚುನಾವಣೆ ತಯಾರಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ಮುಂದೆ ಎನ್ನುವುದನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಬೀತುಪಡಿಸಿರುವ ಬಿಜೆಪಿ, ಈಗಾಗಲೇ ಗೆಲುವಿನ ಕುದುರೆ ಎನ್ನುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ 35298http://kannada.oneindia.com/img/2009/03/17-janardhana-swamy1.jpg233685lok sabha election 2009ಚುನಾವಣೆಯೆಂಬ ಮಾಯೆಯ ಮಹಿಮೆ ಏನಿದೆಯೋ?/column/bhat/2009/0319-lok-sabha-election-who-knows-what-happens.htmlಒಂದೇ ಸಮನೆ ಸೂರ್ಯ ಉಗಿಯಲಾರಂಭಿಸಿದ್ದಾನೆ. ಬಿಸಿಲಗುಳ್ಳೆಗಳು ಒಡೆಯಲಾರಂಭಿಸಿವೆ. ನೆಲ ಕಾದ ಕಾವಲಿಯಂತಾಗಿದೆ. ನೀರಿನ ಪಸೆ ಕಾವಲಿ ಮೇಲೆ ಬಿದ್ದ ನೀರಿನ ಹನಿಗಳ ಹಾಗೆ ಆವಿಯಾಗುತ್ತಿವೆ. ಏಪ್ರಿಲ್, ಮೇ ಹೇಗಿರಬಹುದೆಂಬುದನ್ನು ಊಹಿಸಿದರೇ ಬೆವರು ಟಿಸಿಲೊಡೆಯುತ್ತವೆ. ಇಷ್ಟೂ ಸಾಲದೆಂಬಂತೆ ಚುನಾವಣೆ ಕಾವು ಕೊಡಲಾರಂಬಿಸಿದೆ. ಬಿಸಿಲಿನ ಝಳ ಹಾಗೂ ಚುನಾವಣೆ ಕಾವಿನ ಜುಗಲ್‌ಬಂದಿಯಲ್ಲಿ ಜನಸಾಮಾನ್ಯ ಚಕ್ರದಡಿಗೆ ಸಿಕ್ಕ ಲಿಂಬೆಹಣ್ಣಿನಂತಾಗಿದ್ದಾನೆ. ಎಲ್ಲ ರಾಜಕೀಯ 35348http://kannada.oneindia.com/img/2009/03/19-jyoti-basu1.jpg148533dharam singhಗುಲ್ಬರ್ಗಾದ ಬುದ್ಧ ವಿಹಾರ ಲೋಕಾರ್ಪಣೆ/news/2009/01/07/president-patil-inaugurates-buddha-vihar-gulbarga.htmlಗುಲ್ಬರ್ಗಾ, ಜ. 7 : ಗುಲ್ಬರ್ಗಾದ ಐತಿಹಾಸಿಕ ಬುದ್ಧ ವಿಹಾರವನ್ನು ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಇಂದು ವಿದ್ಯಕ್ತ್ ವಾಗಿ ವಿದ್ಯುನ್ಮಾನ ಗುಂಡಿ ಒತ್ತುವ ಮೂಲಕ ಲೋಕಾರ್ಪಣೆ ಮಾಡಿದರು. ಸರಿ ಸುಮಾರು 75 ಎಕರೆ ಪ್ರದೇಶದಲ್ಲಿ 32,450 ಚದರ ಅಡಿ ವ್ಯಾಪ್ತಿಯಲ್ಲಿ ತೆಲೆ ಎತ್ತಿರುವ ಬುದ್ಧ ವಿಹಾರ ದೇಶ, ವಿದೇಶಿಗರ ಕಣ್ಮನ ಸೆಳೆಯುತ್ತಿದೆ. ಮಂದಿರ ನಿರ್ಮಾಣದಲ್ಲಿ ಅಜಂತಾ, 33935http://kannada.oneindia.com/img/2009/01/07-buddha-vihar-gulbarga.jpg148533dharam singhಧರಂಗೆ ಸೇರಿದ 10 ಲಕ್ಷ ರು. ನಗದು ವಶ!/news/2009/04/18/10-lakhs-cash-belonging-to-dharam-seized-in-bidar.htmlಬೆಂಗಳೂರು, ಏ. 18 : ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಇನ್ನು ಕೇವಲ ಐದು ದಿನ ಉಳಿದಿರುವಂತೆ ಕುರುಡು ಕಾಂಚಾಣದ ತಾಂಡವ ಭರ್ಜರಿಯಾಗಿ ಸಾಗುತ್ತಿದೆ. ಬೀದರಿನಲ್ಲಿ ದಾಖಲೆಯಿಲ್ಲದ 10 ಲಕ್ಷ ರು. ನಗದನ್ನು ವಶಪಡಿಸಿಕಳ್ಳಲಾಗಿದ್ದರೆ, ನಂಜನಗೂಡಿನ ಬಳಿ 43 ಲಕ್ಷ ರು. ನಗದನ್ನು ವಶಪಡಿಸಿಕೊಳ್ಳಲಾಗಿದೆ.ಆಘಾತಕಾರಿ ಸಂಗತಿಯೆಂದರೆ, ಬೀದರಿನಲ್ಲಿ ವಶಪಡಿಸಿಕೊಳ್ಳಲಾದ 10 ಲಕ್ಷ ರು. ನಗದು ಸೇರಿರುವುದು ಗುಲಬರ್ಗಾ 36049http://kannada.oneindia.com/img/2009/04/18-dharam-singh1.jpg148533dharam singhಎಚ್ಡಿಕೆಗೆ ಸಚಿವ ಸ್ಥಾನ ನೀಡದಂತೆ ದಿಲ್ಲಿಗೆ ನಿಯೋಗ /news/2009/05/19/cong-leaders-visit-delhi-against-berth-for-hdk.htmlಬೆಂಗಳೂರು, ಮೇ. 19 : ಕೇಂದ್ರದ ಸಚಿವ ಸಂಪುಟದಲ್ಲಿ ಜೆಡಿಎಸ್ ಗೆ ಯಾವುದೇ ಕಾರಣಕ್ಕೂ ಪ್ರಾತಿನಿಧ್ಯ ನೀಡದಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ರಾಜ್ಯ ಕಾಂಗ್ರೆಸ್ ನಿಯೋಗ ದೆಹಲಿಗೆ ತೆರಳಿದೆ ಎನ್ನಲಾಗಿದೆ. ಬೀದರ್ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಎನ್ ಧರ್ಮಸಿಂಗ್ ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ. ಈ ಮಧ್ಯೆ ಕುಮಾರಸ್ವಾಮಿ 36764http://kannada.oneindia.com/img/2009/05/19-vishwanth-h.jpg148533dharam singhಸೋಲಿಲ್ಲದ ಸರದಾರ ಖರ್ಗೆಗೆ ಮಂತ್ರಿಗಿರಿಯಿಲ್ಲ /news/2009/05/22/kharges-name-dropped-from-cabinet-berth.htmlನವದೆಹಲಿ, ಮೇ. 22 : ಬಹುದಿನಗಳ ನಂತರ ಕಾಂಗ್ರೆಸ್ ಪಕ್ಷದಿಂದ ರಾಜ್ಯಕ್ಕೆ ಭರ್ಜರಿ ಬಹುಮಾನ ದೊರೆಯುವ ನಿರೀಕ್ಷೆಯಿದೆ. ಮಾಜಿ ಮುಖ್ಯಮಂತ್ರಿಗಳಾದ ಎಸ್ ಎಂ ಕೃಷ್ಣ ಮತ್ತು ವೀರಪ್ಪ ಮೊಯ್ಲಿ ಅವರು ಇಂದು ಅಧಿಕಾರ ಚುಕ್ಕಾಣಿ ಹಿಡಿಯಲಿರುವ ನೂತನ ಸರಕಾರದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ, ಹೈಕಮಾಂಡ್ ಆದೇಶದ ಮೇರೆಗೆ ರಾಜ್ಯದ ಪ್ರತಿಪಕ್ಷ ಸ್ಥಾನಕ್ಕೆ 36830http://kannada.oneindia.com/img/2009/05/22-kharge2.jpg148533dharam singhಎರಡನೇ ಕಂತಿನ ಸಚಿವ ಸಂಪುಟದ ಮೇಲೆ ಖರ್ಗೆ ಕಣ್ಣು/news/2009/05/23/kharge-muniyappa-hopes-on-second-list.htmlಬೆಂಗಳೂರು, ಮೇ.23: ಯುಪಿಎ ಸರಕಾರದ ಸಚಿವ ಸಂಪುಟದ ಮೊದಲ ಕಂತಿನಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಸ್ ಎಂ ಕೃಷ್ಣ ಮತ್ತು ಎಂ ವೀರಪ್ಪ ಮೊಯಿಲಿ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ಆದರೆ ಸಚಿವ ಸ್ಥಾನನದ ಮೇಲೆ ಬಹು ನಿರೀಕ್ಷೆ ಇಟ್ಟುಕೊಂಡಿದ್ದ ಮಲ್ಲಿಕಾರ್ಜುನ ಖರ್ಗೆ, ಕೆ ಎಚ್ ಮುನಿಯಪ್ಪ ಮತ್ತು ಧರ್ಮಸಿಂಗ್ ಅವರಿಗೆ ನಿರಾಸೆಯಾಗಿದೆ. ಹಾಗಾಗಿ ಎರಡನೇ ಕಂತಿನ 36838http://kannada.oneindia.com/img/2009/05/23-kharge2.jpg39178gulbargaರಾಜ್ಯಕ್ಕೆ ಮತ್ತಷ್ಟು ಪಾಸ್ಪೋರ್ಟ್ ಕಚೇರಿಗಳು/news/2009/10/29/karnataka-gets-more-passport-facilitation-centres.htmlಬೆಂಗಳೂರು,ಅ.29: ನಗರದಲ್ಲಿ ಮತ್ತೊಂದು ಪಾಸ್ ಪೋರ್ಟ್ ವಿತರಣಾ ಕಚೇರಿ ತೆರೆಯಲು ಭಾರತ ವಿದೇಶಾಂಗ ಖಾತೆ ಸಚಿವಾಲಯ ನಿರ್ಧರಿಸಿದೆ. ಈ ಕಚೇರಿ 2009ರ ಡಿಸೆಂಬರ್ 15 ರಿಂದ ಕಾರ್ಯಾರಂಭ ಮಾಡಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಎಂ ಕೃಷ್ಣ ಬುಧವಾರ ನಗರದಲ್ಲಿ ಪ್ರಕಟಿಸಿದರು.ದೇಶಾದ್ಯಂತ 167 ನಗರಗಳಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆಯಲು ಸಚಿವಾಲಯ ತೀರ್ಮಾನಿಸಿದ್ದು 39939http://kannada.oneindia.com/img/2009/10/29-sm-krishna1.jpg39178gulbargaಮದ್ವಿ ಯಾಕ್ ಮಾಡ್ಕೊತಾರ? ಅದೂ ಗುಲ್ಬರ್ಗಾದಾಗ!/travel/karnataka/best-of-karnataka/2009/1104-trip-to-pot-boiler-weather-gulbarga.htmlಮದವಿ ಯಾಕ್ ಆಗ್ತಾರ? ಆಗೋದ ಖರೆ ಆದ್ರ ಗುಲ್ಬರ್ಗಾದಾಗ ಯಾಕ್ ಆಗ್ತಾರ? ಮುಂದಿನ ದಪ ಮದ್ವಿಗೆ ಪತ್ರಿಕೆ ಕಳಿಸೋ ಮುಂಚೆ ಎಸಿ ರೂಮ್ ಬುಕ್ ಮಾಡಿ ಕರೀರಲಾ.. ಎಂದು ಬೇಡಿಕೊಳ್ಳುವ ಒಂದು ಬೆವರಿಳಿಸುವ ಪ್ರವಾಸ ಕಥನ.* ಮಹೇಶ್ ದೇಶಪಾಂಡೆ, ಬೆಂಗಳೂರು"ಮಳೆ ಬಂತು ರಪಾ ರಪಾ, ಗಿಡಗಳು ತೊಯ್ದು ತಪಾ ತಪಾ, ಅಂಗಳವೆಲ್ಲಾ ನೀರಾಯ್ತು, ಹೂವಿನ ತೋಟಕ್ಕೆ ಖುಷಿಯಾಯ್ತು" 40039http://kannada.oneindia.com/img/2009/11/04-mahesh-deshpande1.jpg39178gulbargaರೊಕ್ಕ ಬ್ಯಾಡ್ರೋಯಪ್ಪ, ಸೂರು ಕಟ್ಟಿಸಿಕೊಡ್ರಿ!/literature/my-karnataka/2009/1105-flood-tinthini-village-gulbarga-part4.htmlಮಧ್ಯವರ್ತಿಗಳ ತಡೆ:ಮಧ್ಯವರ್ತಿಗಳನ್ನು ತಡೆಯುವುದರಿಂದ ನಾವು ನಮ್ಮ ಕಾರ್ಯಗಳನ್ನು ನೇರವಾಗಿ ಸಂತ್ರಸ್ತರಿಗೆ ತಲುಪಿಸಬಹುದು. ಇದಕ್ಕೆ ಕೆಳಗಿನ ಅಂಶಗಳನ್ನು ಗಮನದಲ್ಲಿಡಬೇಕು,1. ಸ್ಥಳೀಯವಾಗಿ ಕೆಲಸ ಮಾಡುವ, ಸಂತ್ರಸ್ತರಿಗೆ ನಿಜಾವಾಗಿ ನೆರವಾಗುತ್ತಿರುವ ಸ್ವಯಂ-ಸೇವಕರು/ಸಂಘಗಳನ್ನೂ ಗುರುತಿಸುವುದು.2. ಹಣವನ್ನು ಮೂರನೇ ವ್ಯಕ್ತಿಗಳಿಗೆ ಕೊಡುವುದನ್ನು ನಿಲ್ಲಿಸಿ ನೆರವಾಗಿ ಅವರಿಗೆ ತಲುಪುವಂತೆ ನೋಡಿಕೊಳ್ಳುವುದು.3. ಆ ತಾಲೂಕಿನ ಬ್ಯಾಂಕ್ ನಲ್ಲಿ ಖಾತೆ ತೆರೆದು ಅದರ ಮುಖಾಂತರ ವ್ಯವಹಾರ ನಡೆಸುವುದು.4. ತಾಲೂಕಿಗೆ 40059http://kannada.oneindia.com/img/2009/11/05-tinthini-village4.jpg39178gulbargaರೊಕ್ಕ ಬ್ಯಾಡ್ರೋಯಪ್ಪ, ಸೂರು ಕಟ್ಟಿಸಿಕೊಡ್ರಿ!/literature/my-karnataka/2009/1105-flood-tinthini-village-gulbarga-part3.htmlಸಂತ್ರಸ್ತರಿಗೆ ಬೇಕಿರುವುದು:ಇವರಿಗೆ ನಮ್ಮ ಹಣದ ಅವಶ್ಯಕತೆಗಿಂತಲೂ, ಬದುಕಲು ಶಾಶ್ವತವಾಗಿ ಆಸರೆ ಬೇಕಾಗಿದೆ. ಈಗಾಗಲೇ ಬಟ್ಟೆ, ಹಾಸು ಹೊದಿಕೆಗಳು, ಪಾತ್ರೆಗಳು ಬಂದಿದ್ದರೂ ಅವರ ಮುಂದಿನ ಜೀವನ ನಡೆಸಲು,1. ಶಾಶ್ವತವಾದ ಮನೆ.2. ಬೇಸಾಯ ಮಾಡಲು ಹಸುಗಳು. ಹಾಗು,3. ತಮ್ಮ ಜಮಿನುಗಳಿಗೆ ಪಂಪ್ ಸೆಟ್ ಸೌಲಭ್ಯ ಬೇಕಾಗಿದೆ.ಅಲ್ಲಿನ ಸ್ವಯಂಸೇವಾ ತಂಡದಿಂದ ದೊರಕಬಹುದಾದ ಸಹಾಯಗಳು:ಕಳೆದ ಬಾರಿಯ ರಾಜ್ಯೋತ್ಸವದ ಪ್ರಯುಕ್ತ ನಾವು ವನವಾಸಿ ಕಲ್ಯಾಣ 40060http://kannada.oneindia.com/img/2009/11/05-tinthini-village3.jpg39178gulbargaರೊಕ್ಕ ಬ್ಯಾಡ್ರೋಯಪ್ಪ, ಸೂರು ಕಟ್ಟಿಸಿಕೊಡ್ರಿ!/literature/my-karnataka/2009/1105-flood-tinthini-village-gulbarga-part2.htmlಪ್ರವಾಹದ ಪರಿಣಾಮ ಮತ್ತು ಇಲ್ಲಿಯವರೆಗಿನ ಪರಿಹಾರ ಕಾರ್ಯಗಳು :ಉತ್ತರ ಕರ್ನಾಟಕ ಅಷ್ಟೇನೂ ಅಭಿವೃದ್ಧಿ ಕಾಣದ, ವ್ಯವಸಾಯವನ್ನು ಅವಲಂಬಿಸಿ ಬದುಕುವ ಜನರ ಪ್ರದೇಶ. ನಾವು ಭೇಟಿ ಕೊಟ್ಟ ಗ್ರಾಮದಲ್ಲಿನವರು ಮೂಲತಃ ವ್ಯವಸಾಯ ಹಾಗು ದಿನಗೂಲಿಯಿಂದ ತಮ್ಮ ಜೀವನ ಸಾಗಿಸುತ್ತಾರೆ. ಇವರ ಮನೆಗಳು ಸುಮಾರು 1 ಚದರದಷ್ಟಿದ್ದು, ಒಂದು ದಿನಕ್ಕೆ 80 ರೂ. ಆದಾಯ ಉಳ್ಳವರು. ಆ ದಿನದ ದುಡಿಮೆ 40061http://kannada.oneindia.com/img/2009/11/05-tinthini-village2.jpgnews"> ಧರಂಗೆ ಸೇರಿದ 10 ಲಕ್ಷ ರು. ನಗದು ವಶ! | Lok Sabha Election 2009 | Illegal money | Dharam Singh | Gulbarga - ಧರಂಗೆ ಸೇರಿದ 10 ಲಕ್ಷ ರು. ನಗದು ವಶ! - Kannada Oneindia

ಧರಂಗೆ ಸೇರಿದ 10 ಲಕ್ಷ ರು. ನಗದು ವಶ!

Dharam Singh, former CM of Karnataka
ಬೆಂಗಳೂರು, ಏ. 18 : ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಇನ್ನು ಕೇವಲ ಐದು ದಿನ ಉಳಿದಿರುವಂತೆ ಕುರುಡು ಕಾಂಚಾಣದ ತಾಂಡವ ಭರ್ಜರಿಯಾಗಿ ಸಾಗುತ್ತಿದೆ. ಬೀದರಿನಲ್ಲಿ ದಾಖಲೆಯಿಲ್ಲದ 10 ಲಕ್ಷ ರು. ನಗದನ್ನು ವಶಪಡಿಸಿಕಳ್ಳಲಾಗಿದ್ದರೆ, ನಂಜನಗೂಡಿನ ಬಳಿ 43 ಲಕ್ಷ ರು. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಆಘಾತಕಾರಿ ಸಂಗತಿಯೆಂದರೆ, ಬೀದರಿನಲ್ಲಿ ವಶಪಡಿಸಿಕೊಳ್ಳಲಾದ 10 ಲಕ್ಷ ರು. ನಗದು ಸೇರಿರುವುದು ಗುಲಬರ್ಗಾ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಸ್ಪರ್ಧಿಸುತ್ತಿರುವ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರಿಗೆ ಸೇರಿದ್ದು!

ಜಿಲ್ಲಾಧಿಕಾರಿ ಹರ್ಷ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ 10 ಲಕ್ಷ ರು. ನಗದು ಸಾಗಿಸುತ್ತಿದ್ದ ಕಾರು ವಶಪಡಿಸಿಕೊಳ್ಳಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ಚಾಲಕ ಪರಾರಿಯಾಗಿದ್ದಾನೆ. ವಿಚಾರಣೆಯಲ್ಲಿ ನಗದು ಸೇರಿರುವುದು ಧರಂಸಿಂಗ್ ಅವರಿಗೆ ಎಂಬ ಸಂಗತಿಯನ್ನು ಬಂಧಿತರು ಬಹಿರಂಗಪಡಿಸಿದ್ದಾರೆ.

ನಗದನ್ನು ಕವರುಗಳಲ್ಲಿ ಇಡಲಾಗಿತ್ತು ಮತ್ತು ಕವರಿನ ಮೇಲೆ ತಪುಪಿಸಬೇಕಾದವರ ಹೆಸರು ಕೂಡ ನಮೂದಿಸಲಾಗಿತ್ತು ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸಿದ್ದಾರೆ.

43 ಲಕ್ಷ ರು. ನಗದು ವಶ : ಮತ್ತೊಂದು ಘಟನೆಯಲ್ಲಿ ನಂಜನಗೂಡಿನ ಬಳಿ ಕೇರಳ ಮೂಲದ ವ್ಯಕ್ತಿಯಿಂದ ದಾಖಲೆಯಿಲ್ಲದ 43 ಲಕ್ಷ ರು. ನಗದನ್ನು ಮೈಸೂರು ದಕ್ಷಿಣ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ವಿಚಾರಣೆ ಕೂಡ ಮುಂದುವರಿದಿದೆ.

ಅಕ್ರಮ ಅವ್ಯಾಹತ : ರಾಜ್ಯ ಚುನಾವಣಾ ಆಯೋಗ ಜಿಲ್ಲಾಡಳಿತಗಳ ಸಹಾಯದಿಂದ ಅಕ್ರಮ ತಡೆಯಲು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ನೀತಿ ಸಂಹಿತೆ ಉಲ್ಲಂಘನೆ ಮತ್ತು ಚುನಾವಣಾ ಅಕ್ರಮಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ. ಆಯೋಗ ಚಾಪೆ ಕೆಳಗೆ ನುಗ್ಗಿದರೆ, ರಾಜಕಾರಣಿಗಳು ರಂಗೋಲಿ ಕೆಳಗೆ ನುಸುಳುವ ಚಾಕಚಕ್ಯತೆ ತೋರುತ್ತಿದ್ದಾರೆ.

ಆದರೂ, ಆಯೋಗ ದಕ್ಷವಾಗಿ ಕಾರ್ಯಾಚರಣೆ ನಡೆಸಿರುವುದರಿಂದ ದಾಖಲೆ ಮಟ್ಟದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿರುವ ಮತ್ತು ಅಕ್ರಮ ನಡೆದಿರುವ ಪ್ರಕರಣಗಳು ದಾಖಲಾಗಿವೆ. ಈ ವಿವರವನ್ನು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಎಂಎನ್ ವಿದ್ಯಾಶಂಕರ್ ಮಂಡ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ ಒಟ್ಟು 373 ನೀತಿ ಸಂಹಿತೆ ಉಲ್ಲಂಘಿಸಿರುವ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಬಿಜೆಪಿಯದು ಸಿಂಹಪಾಲು. ಒಟ್ಟು 1454 ಚುನಾವಣಾ ಅಕ್ರಮ ನಡೆದಿರುವ ಪ್ರಕರಣಗಳೂ ದಾಖಲಾಗಿವೆ. ಹಣ, ಹೆಂಡ, ಸೀರೆ ಮುಂತಾದವುಗಳ ವಿತರಣೆ ಅವ್ಯಾಹತವಾಗಿ ಸಾಗುತ್ತಿದೆ. ಬಳ್ಳಾರಿಯಲ್ಲಿ ಎಲ್ಲಕ್ಕಿಂತ ಹೆಚ್ಚಿನ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿದ್ಯಾಶಂಕರ್ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+