ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರುಣ್ ಮೇಲೇಕೆ ಎನ್ಎಸ್ಎ ಕಾಯ್ದೆ, ಸುಪ್ರಿಂಕೋರ್ಟ್

By Staff
|
Google Oneindia Kannada News

Varun not a criminal, why drastic measure like NSA: SC
ನವದೆಹಲಿ, ಏ. 14 : ವರುಣ್ ಗಾಂಧಿ ಅಪರಾಧಿಯೇ ? ರಾಷ್ಟ್ರೀಯ ಭದ್ರತಾ ಕಾಯ್ದೆಯಂತಹ ಗಂಭೀರ ಕಾಯ್ದೆಯನ್ನು ವರುಣ್ ವಿರುದ್ಧ ದಾಖಲಿಸುವ ಅಗತ್ಯವಿತ್ತೆ ಎಂದು ಸುಪ್ರಿಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಉತ್ತರ ಪ್ರದೇಶ ಇನ್ನೊಂದು ಬಾರಿ ಮರುಚಿಂತನೆ ನಡೆಸುವುದು ಅಗತ್ಯ ಎಂದು ನ್ಯಾಯಾಲಯ ಸಲಹೆ ನೀಡಿದೆ. ಈ ಮೂಲಕ ವರುಣ್ ಗಾಂಧಿ ಅವರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವ ಶುಭ ಸುದ್ದಿ ಹೊರಬಿದ್ದಂತಾಗಿದ್ದು, ಬಿಜೆಪಿ ಪಾಳೆಯದಲ್ಲಿ ಹರ್ಷದ ವಾತಾವರಣ ಮನೆಮಾಡಿದೆ.

ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಾ ಕೆ ಬಾಲಕೃಷ್ಣನ್ ಹಾಗೂ ನ್ಯಾಯಮೂರ್ತಿ ಪಿ ಸತಾಶಿವಂ ಅವರನ್ನು ಒಳಗೊಂಡ ಪೀಠ, ಉತ್ತರ ಪ್ರದೇಶದ ಇಟಾ ಜೈಲಿನಲ್ಲಿರುವ ವರುಣ್ ಗಾಂಧಿ ಅವರನ್ನು ಶೀಘ್ರದಲ್ಲಿ ಬಿಡುಗಡೆಯಾಗಲಿದ್ದಾರೆ ಎನ್ನುವ ಸೂಚನೆ ನೀಡಿದರು. ನ್ಯಾಯಾಲಯ ಅಪೇಕ್ಷೆಯಂತೆ ಮುಂದಿನ ದಿನಗಳಲ್ಲಿ ಕೋಮು ಪ್ರಚೋದನಕಾರಿ ಹೇಳಿಕೆ ನೀಡುವುದಿಲ್ಲ ಎಂಬ ಮುಚ್ಚಳಿಕೆ ಬರೆದುಕೊಡಲು ವರುಣ್ ಗಾಂಧಿ ಸಮ್ಮತಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ವರುಣ್ ವಿರುದ್ಧ ಎನ್ಎಸ್ಎ ಅಂತಹ ಗಂಭೀರ ಕಾಯ್ದೆ ದಾಖಲಿಸುವಂತ ತಪ್ಪು ಮಾಡಿಲ್ಲ. ಆದರೂ ಕೂಡಾ ಉತ್ತರ ಪ್ರದೇಶದ ಸರ್ಕಾರ ವರುಣ್ ವಿರುದ್ದ ಏಕೆ ಇಂತಹ ಕಾಯ್ದೆಯನ್ನು ಜಾರಿ ಮಾಡಿತು ಎಂಬುದನ್ನು ಏಪ್ರಿಲ್ 16 ರಂದು ನಡೆಯುವ ವಿವರಿಸುವಂತೆ ಸರ್ಕಾರಿ ವಕೀಲರಿಗೆ ಸುಪ್ರಿಂಕೋರ್ಟ್ ಸೂಚನೆ ನೀಡಿದೆ.

ಉತ್ತರ ಪ್ರದೇಶದ ಪಿಲಿಭಿತ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ವರುಣ್ ಗಾಂಧಿ ಅವರು ಕಳೆದ ತಿಂಗಳು 17 ರಂದು ಪಿಲಿಭಿತ್ ನಗರ ಚುನಾವಣೆ ಪ್ರಚಾರ ಕಾರ್ಯದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಕೋಮು ಪ್ರಚೋದಕ ಹೇಳಿಕೆ ನೀಡಿದ್ದರು.

(ದಟ್ಸ್ ಕನ್ನಡ ವಾರ್ತೆ)

ವರುಣ್ ಗಾಂಧಿ ಸೋಲಿಸುವೆ, ರಿಯಾಜ್ ಅಹ್ಮದ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X