36611yeddyurappaಮಳೆ : 20 ಸಾವಿರ ಕೋಟಿ ರುಪಾಯಿ ನಷ್ಟ/news/2009/10/05/losses-due-to-rain-and-floods-is-over-20cr-rs-bsy.htmlಬೆಂಗಳೂರು, ಅ. 5 : ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮುನಿಸಿಕೊಂಡ ಮಳೆರಾಯನ ಹೊಡೆತಕ್ಕೆ ಸುಮಾರು 20 ಸಾವಿರ ಕೋಟಿ ರುಪಾಯಿ ನಷ್ಟವಾಗಿದೆ. ಇದನ್ನು ಸ್ಪಷ್ಟಪಡಿಸಿದವರು ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ. ಕಂಡೂ ಕೇಳರಿಯದ ಅತಿವೃಷ್ಟಿಗೆ ರಾಜ್ಯದ ಜನತೆ ತತ್ತರಿಸಿದೆ. ಕೂಡಲೇ ರಾಜ್ಯಕ್ಕೆ ಕೇಂದ್ರದ ಅಧ್ಯಯನ ತಂಡ ಕಳುಹಿಸಬೇಕು ಎಂದು ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಈ 39528http://kannada.oneindia.com/img/2009/10/05-rain-submerged-village1.jpg36611yeddyurappaಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg36611yeddyurappaಪ್ರವಾಹ ಪೀಡಿತರ ಕಣ್ಣೀರಿಗೆ ಕೇಂದ್ರದ ತಣ್ಣೀರು/news/2009/10/07/utilise-calamity-relief-fund-chidambaram.htmlನವದೆಹಲಿ, ಅ. 7 : ನೆರೆ ಕಾರ್ಯಕ್ಕೆ ರಾಜ್ಯ ಸರಕಾರ ತುರ್ತಾಗಿ ವಿಪತ್ತು ಪರಿಹಾರ ನಿಧಿಯ ಹಣ ಬಳಸಿಕೊಳ್ಳಬೇಕು ಎನ್ನುವ ಮೂಲಕ ಗೃಹ ಸಚಿವ ಪಿ ಚಿದಂಬರಂ ರಾಜ್ಯಕ್ಕೆ ಗಾಯದ ಮೇಲೆ ಬರೆ ಎಳೆದಿದ್ದಾರೆ. ವಿಪತ್ತು ಪರಿಹಾರ ನಿಧಿಯ ಶೇ. 75ರಷ್ಟು ಹಣ ಖರ್ಚಾಗುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಮುಂಗಡ ಹಣ ನೀಡುವ ವ್ಯವಸ್ಥೆ ಮಾಡಲಾಗುವುದು 39554http://kannada.oneindia.com/img/2009/10/07-flood-andhra1.jpg36611yeddyurappaಕೇಂದ್ರ ಪರಿಹಾರ : ರಾಜ್ಯಕ್ಕೆ ಮತ್ತೆ ಕಮ್ಮಿ ಹಣ /news/2009/10/07/centre-releases-funds-for-flood-hit-ap-karnataka.htmlನವದೆಹಲಿ, ಅ. 7 : ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಪ್ರವಾಹದಿಂದ ಸಾಕಷ್ಟು ಪ್ರಮಾಣದ ಆಸ್ತಿ ಪಾಸ್ತಿ, ಮತ್ತು ಪ್ರಮಾಣ ನಷ್ಟ ಉಂಟಾಗಿದ್ದು, ಮಂಗಳವಾರ ಕೇಂದ್ರ ಸರಕಾರ ಎರಡನೇ ಹಂತದ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಎರಡನೇ ಹಂತದ ಪರಿಹಾರದಲ್ಲೂ ಕೇಂದ್ರ ಸರಕಾರ ತಾರತಮ್ಯ ಅನುಸರಿಸಿರುವುದು ಸಾಬೀತಾಗಿದೆ. ಅತಿವೃಷ್ಟಿಗೆ ತುತ್ತಾಗಿರುವ ಈ ಎರಡು ರಾಜ್ಯಗಳಿಗೆ ಪ್ರಕೃತಿ ವಿಕೋಪ ನಿಧಿಯಡಿ 39564http://kannada.oneindia.com/img/2009/10/07-rain-havoc-nk1.jpg36611yeddyurappaಇತರ ರಾಜ್ಯಗಳತ್ತ ಕೈಯೊಡ್ಡಿದ ಯಡಿಯೂರಪ್ಪ/news/2009/10/07/yeddyurappa-writes-letter-to-other-chief-ministers.htmlಬೆಂಗಳೂರು, ಅ. 7 : ಹಿಂದೆಂದೂ ಕಾಣದ ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಉತ್ತರ ಕರ್ನಾಟಕದ 18 ಜಿಲ್ಲೆಗಳ ನಿರ್ವಸಿತ ಜನರಿಗೆ ಜೀವನ ಕಲ್ಪಿಸಿಕೊಡಲು ಮತ್ತು ರಸ್ತೆ, ಸೇತುವೆ, ಕಟ್ಟಡಗಳ ಪುನರ್ ನಿರ್ಮಾಣಕ್ಕಾಗಿ ಮುಕ್ತಹೃದಯದಿಂದ ಸಹಾಯಹಸ್ತ ಚಾಚಬೇಕೆಂದು ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ರಾಜಸ್ತಾನ, ಪಂಜಾಬ್, ಬಿಹಾರ್, ಚತ್ತೀಸ್ ಘರ್, ದೆಹಲಿ, ತಮಿಳುನಾಡು, ತ್ರಿಪುರಾ, ಉತ್ತರ ಪ್ರದೇಶ, ಉತ್ತರಖಂಡ್, 39569http://kannada.oneindia.com/img/2009/10/07-yediyurappa3.jpg39570Belgaumಅತಿವೃಷ್ಟಿ: ಬೆಳಗಾವಿಯಲ್ಲಿ ಸಾರ್ವಜನಿಕ ರಜೆ ರದ್ದು/news/2009/10/10/no-public-holiay-on-oct-10-11-in-belgaum.htmlಬೆಳಗಾವಿ, ಅ.10: ಅತಿವೃಷ್ಟಿ ಹಿನ್ನಲೆಯಲ್ಲಿ ಇದೇ ಅಕ್ಟೋಬರ್ 10 ಹಾಗೂ 11 ರಂದು ಇದ್ದ ಸಾರ್ವಜನಿಕ ರಜೆಗಳನ್ನು ಸರಕಾರ ರದ್ದುಪಡಿಸಿದ್ದು, ಅದರನ್ವಯ ಈ ಎರಡೂ ದಿನಗಳಂದು ಜಿಲ್ಲೆಯ ಎಲ್ಲ ಸರಕಾರಿ ಕಚೇರಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ಜೆ. ರವಿಶಂಕರ ಅವರು ಆದೇಶ ಹೊರಡಿಸಿದ್ದಾರೆ. ಇತ್ತೀಚಿಗೆ ರಾಜ್ಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಅದ ಅತಿವೃಷ್ಟಿಯಿಂದ ಸಾರ್ವಜನಿಕರು 39615http://kannada.oneindia.com/img/2009/10/10-flood-karnataka1.jpg39570Belgaumಕನ್ನಡಿಗರ ಜೊತೆ ಪೋಲೀಸರ ಡಬಲ್ ಗೇಮ್/news/2009/10/22/belgaum-mahamelav-karave-vent-ire-against-police.htmlಬೆಳಗಾವಿ, ಅ. 22 : ಮರಾಠಾ ಮಹಾ ಮೇಳಾವ್ ನಡೆಸಲು ಅನುಮತಿ ಇಲ್ಲದಿದ್ದರೂ ಮೇಳಾವಕ್ಕಾಗಿ ಸಿದ್ಧತೆ ನಡೆಸುತ್ತಿರುವ ಎಂಇಎಸ್ ಮುಖಂಡರನ್ನು ಬಂಧಿಸದೇ ಬೆಳಗಾವಿ ಪೊಲೀಸರು ಡಬಲ್ ಗೇಮ್ ಆಡುತ್ತಿದ್ದಾರೆಂದು ಕರ್ನಾಟಕ ರಕ್ಷಣಾ ವೇದಿಕೆ (ಕ.ರ.ವೇ) ಜಿಲ್ಲಾ ಅಧ್ಯಕ್ಷ ರಾಜೀವ ಟೋಪಣ್ಣವರ ಆರೋಪಿಸಿದ್ದಾರೆ.ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಿರುವ ಮರಾಠಾ ಮಹಾ ಮೇಳಾವ್‌ಗೆ ಬೆಳಗಾವಿ ಜಿಲ್ಲಾ ಆಡಳಿತ ಅನುಮತಿ ನೀಡಿಲ್ಲವೆಂದು 39814http://kannada.oneindia.com/img/2009/10/22-karave-belgaum1.jpg39570Belgaumಕನ್ನಡ ಧ್ವಜಕ್ಕೆ ಬೆಂಕಿ ಇಟ್ಟ ಎಂಇಎಸ್/news/2009/11/02/rajyotsava-mes-activists-set-kannada-flag-ablaze.htmlಬೆಳಗಾವಿ, ನ. 2 : ಇಲ್ಲಿಯೇ ಇದ್ದುಕೊಂಡು ರಾಜ್ಯ ವಿರೋಧಿ ಧೋರಣೆ ಪ್ರದರ್ಶಿಸುತ್ತಲೇ ಬಂದಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡರು ರಾಜ್ಯೋತ್ಸವದ ದಿನ ಭಾನುವಾರ (ನ 1) ಕನ್ನಡ ದ್ವಜವನ್ನು ತುಳಿದು ಬೆಂಕಿ ಹಚ್ಚಿ ವಿದ್ಯಾರ್ಥಿಗಳನ್ನು ಥಳಿಸಿ ಮಹಾರಾಷ್ಟ್ರ ಪರ ಘೋಷಣೆ ಕೂಗುವುದಲ್ಲದೆ ಭಗವಾಧ್ವಜ ಹಾರಿಸಿ ಮತ್ತೊಮ್ಮೆ ಪುಂಡಾಟಿಕೆ ನಡೆಸಿರುವ ಘಟನೆ ನಡೆದಿದೆ.ನಗರದ ಹೊರವಲಯದ ಮಣ್ಣೂರು ಎಂಬಲ್ಲಿ 39993http://kannada.oneindia.com/img/2009/11/02-kannada-flag1.jpg39570Belgaumನವ ಗ್ರಾಮಗಳ ಮೂಲ ಸೌಲಭ್ಯಗಳಿಗೆ ಆದ್ಯತೆ/news/2009/11/04/govt-striving-to-help-flood-hit-people-yeddyurappa.htmlಬೆಳಗಾವಿ,ನ. 4 : ನೆರೆ ಹಾವಳಿಯಿಂದ ತೊಂದರೆಗೊಳಗಾಗುತ್ತಿರುವ ಗ್ರಾಮಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಈಗ ಚಾಲ್ತಿಯಲ್ಲಿದ್ದು, ನವಗ್ರಾಮಗಳಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವದೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ರಾಮದುರ್ಗ ತಾಲೂಕಿನ ರಂಕಲಕೊಪ್ಪ, ಚಿಕ್ಕಮೂಲಂಗಿ ಮತ್ತು ಲಿಂಗದಾಳ ಗ್ರಾಮಗಳ ಸ್ಥಳಾಂತರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದ ಅವರು ನವಗ್ರಾಮಗಳಲ್ಲಿ ಕುಡಿಯುವ ನೀರು, ವಿದ್ಯುತ್, ರಸ್ತೆಗಳಂತಹ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ 40034http://kannada.oneindia.com/img/2009/11/04-bsy-aasare-project1.jpg39570Belgaumಹಿರಿಯ ಕಾಂಗ್ರೆಸ್ಸಿಗ ಬಿ ಶಂಕರಾನಂದ ನಿಧನ/news/2009/11/20/former-union-minister-shankaranand-passes-away.htmlಬೆಳಗಾವಿ, ನ. 20 : ಕಳೆದ ಹಲವಾರು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರದ ಮಾಜಿ ಸಚಿವ ಬಿ ಶಂಕರಾನಂದ ಶುಕ್ರವಾರ ಬೆಳಕಿನ ಜಾವ 2 ಗಂಟೆಗೆ ನಗರದ ಕೆಎಲ್ ಇ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಶಂಕರಾನಂದ ನಿಧನಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಶೋಕ ವ್ಯಕ್ತಪಡಿಸಿದ್ದು, ಕುಟುಂಬ ಸದಸ್ಯರಿಗೆ ದುಃಖ 40326http://kannada.oneindia.com/img/2009/11/20-shankaranand1.jpg383954saffron flagಕನ್ನಡ ವಿರೋಧಿ ಸಂಸದ ಸುರೇಶ ಅಂಗಡಿ/news/2009/03/17/vote-politics-bjp-mp-backs-mes-over-flag-issue.htmlಬೆಳಗಾವಿ, ಮಾ. 17 : ಭಾರತೀಯ ಜನತಾ ಪಕ್ಷದ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರು ಕನ್ನಡಗರಿಗೆ ಭಾರಿ ಅಘಾತ ನೀಡಿದ್ದಾರೆ. ಸಂಸದ ಅಂಗಡಿ ಹಾಗೂ ಶಾಸಕ ಸಂಜಯ ಪಾಟೀಲ್ ಭಗವಾಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಬಹಿರಂಗವಾಗಿಯೇ ಬೆಂಬಲ ನೀಡುವ ಮೂಲಕ ಮರಾಠಿ ಮತಗಳ ಬೇಟೆಗೆ ಮುಂದಾಗಿ ಕನ್ನಡಿಗರಿಗೆ ದ್ರೋಹ ಎಸಗಿದ್ದಾರೆ. ಮತಕ್ಕಾಗಿ 35270http://kannada.oneindia.com/img/2009/03/17-suresh-angadi1.jpg383954saffron flagಭಗವಾಧ್ವಜ ತೆಗೆಯಲು ನನ್ನ ವಿರೋಧವಿದೆ, ಅಂಗಡಿ/news/2009/03/17/kannada-marathi-are-like-my-two-eyes-angadi.htmlಬೆಳಗಾವಿ, ಮಾ. 17 : ಕನ್ನಡ ಮತ್ತು ಮರಾಠಿ ಜನರು ನನ್ನ ಎರಡು ಕಣ್ಣುಗಳಿದ್ದಂತೆ, ಬೆಳಗಾವಿ ಮಹಾನಗರ ಪಾಲಿಕೆ ಮೇಲಿರುವ ಭಗವಾಧ್ವಜ ಹಿಂದೂ ಧರ್ಮದ ಸಂಕೇತ. ಅದನ್ನು ತೆಗೆಯಲು ಯಾರಿಗೂ ಅವಕಾಶ ಮಾಡಿಕೊಡುವುದಿಲ್ಲ. ಈ ಧ್ವಜವನ್ನು ನವದೆಹಲಿ ಸಂಸತ್ತಿನ ಮೇಲೂ ಹಾರಿಸಬೇಕು ಎಂದು ಬೆಳಗಾವಿ ಸಂಸದ ಸುರೇಶ ಅಂಗಡಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಕರವೇ ಕಾರ್ಯಕರ್ತರು 35289http://kannada.oneindia.com/img/2009/03/17-suresh-angadi1.jpg383954saffron flagಕನ್ನಡಿಗರ ಕ್ಷಮೆಯಾಚಿಸಿದ ಅಂಗಡಿ, ಪಾಟೀಲ್/news/2009/03/20/angadi-patil-appologise-to-kannada-people.htmlಬೆಳಗಾವಿ. ಮಾ. 20 : ಭಗವಾಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಸುರೇಶ್ ಅಂಗಡಿ ಮತ್ತು ಶಾಸಕ ಸಂಜಯ ಪಾಟೀಲ್ ಅವರು ಕನ್ನಡಿಗರ ಕ್ಷಮೆಯಾಚಿಸಿದ್ದಾರೆ. ಧ್ವಜವಿವಾದಕ್ಕೆ ಸಂಬಂಧಿಸಿದ ಪ್ರದರ್ಶನದಲ್ಲಿ ನಾವು ಪಾಲ್ಗೊಂಡಿದ್ದರಿಂದ ಹಿರಿಯ ಸಾಹಿತಿಗಳು ಹಾಗೂ ಕನ್ನಡ ಕಟ್ಟಾಳುಗಳಿಗೆ ನೋವಾಗಿರುವುದನ್ನು ಗಮನಿಸಿದ್ದೇವೆ. ಅವರ ನೋವು ಸಮಸ್ತ ಕನ್ನಡಿಗರ ನೋವು ಎಂದು ಭಾವಿಸಿ ಕ್ಷಮೆಯಾಚಿಸುತ್ತಿದ್ದೇವೆ ಎಂದು ಈ ಇಬ್ಬರೂ 35367http://kannada.oneindia.com/img/2009/03/20-suresh-angadi1.jpg383954saffron flagಬೆಳಗಾವಿ: ಸಿಎಂ ವಿರುದ್ದ ಕಪ್ಪು ಬಾವುಟ ಪ್ರದರ್ಶನ/news/2009/04/14/karave-women-activists-protest-against-yeddyurappa.htmlಬೆಳಗಾವಿ, ಏ. 14 : ಕನ್ನಡ ವಿರೋಧಿ ನಿಲುವು ತಾಳಿರುವ ಸುರೇಶ್ ಅಂಗಡಿ ಅವರಿಗೆ ಬಿಜೆಪಿ ಲೋಕಸಭೆ ಕ್ಷೇತ್ರದ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಕರವೇ ನಾರಾಯಣಗೌಡ ಬಣದ ಮಹಿಳಾ ಕಾರ್ಯಕರ್ತೆಯರು ಮಂಗಳವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ನಡೆಸಿದರು. ಇದರಿಂದ ಕೆಲ ಕಾಲ ಸಭೆಯಲ್ಲಿ ಗೊಂದಲದ ವಾತಾವರಣ ಉಂಟಾಗಿದ್ದರಿಂದ ಮುಖ್ಯಮಂತ್ರಿಯವರ ಸಿಡಿಮಿಡಿಗೆ 35944http://kannada.oneindia.com/img/2009/04/14-yediyurappa3.jpgnews"> ಬೆಳಗಾವಿ: ಸಿಎಂ ವಿರುದ್ದ ಕಪ್ಪು ಬಾವುಟ ಪ್ರದರ್ಶನ | Yeddyurappa | Belgaum | Suresh Angadi | BJP | Lok Sabha election 2009 | KARAVE | ಬೆಳಗಾವಿ: ಸಿಎಂ ವಿರುದ್ದ ಕಪ್ಪು ಬಾವುಟ ಪ್ರದರ್ಶನ - Kannada Oneindia

ಬೆಳಗಾವಿ: ಸಿಎಂ ವಿರುದ್ದ ಕಪ್ಪು ಬಾವುಟ ಪ್ರದರ್ಶನ

Yeddyurappa
ಬೆಳಗಾವಿ, ಏ. 14 : ಕನ್ನಡ ವಿರೋಧಿ ನಿಲುವು ತಾಳಿರುವ ಸುರೇಶ್ ಅಂಗಡಿ ಅವರಿಗೆ ಬಿಜೆಪಿ ಲೋಕಸಭೆ ಕ್ಷೇತ್ರದ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಕರವೇ ನಾರಾಯಣಗೌಡ ಬಣದ ಮಹಿಳಾ ಕಾರ್ಯಕರ್ತೆಯರು ಮಂಗಳವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ನಡೆಸಿದರು. ಇದರಿಂದ ಕೆಲ ಕಾಲ ಸಭೆಯಲ್ಲಿ ಗೊಂದಲದ ವಾತಾವರಣ ಉಂಟಾಗಿದ್ದರಿಂದ ಮುಖ್ಯಮಂತ್ರಿಯವರ ಸಿಡಿಮಿಡಿಗೆ ಕಾರಣವಾಯಿತು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಸಭೆ ಅಭ್ಯರ್ಥಿ ಸುರೇಶ್ ಅಂಗಡಿ ಪರ ಮತಯಾಚಿಸುವ ಸಲುವಾಗಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು ಪ್ರಚಾರ ಭಾಷಣ ಆರಂಭಿಸುತ್ತಿದ್ದಂತೆ ನಾರಾಯಣಗೌಡ ಬಣದ ಮಹಿಳಾ ಕಾರ್ಯಕರ್ತೆಯರ ಗುಂಪು ಸಿಎಂ ವಿರುದ್ಧ ದಿಕ್ಕಾರ ಘೋಷಣೆ ಕೂಗತೊಡಗಿದರು. ಈ ಗೊಂದಲದ ನಡುವೆಯೇ ಭಾಷಣ ಆರಂಭಿಸಿದ ಯಡಿಯೂರಪ್ಪ, ಒಂದು ಹಂತದಲ್ಲಿ ಮಹಿಳೆಯರ ದಿಕ್ಕಾರ ಘೋಷಣೆ ಮಿತಿಮೀರಿದ್ದರಿಂದ ಸಿಡಿಮಿಡಿಗೊಂಡರು.

ಏನ್ ಬೇಕು ಕೇಳ್ರಿ ಅವರಿಗೆ, ಏಕೆ ಧರಣಿ ಆರಂಭಿಸಿದ್ದಾರೆ ಎಂದು ಸಿಎಂ ಪೊಲೀಸರಿಗೆ ಆದೇಶ ನೀಡಿದರು. ಸಮಸ್ಯೆಗಳಿದ್ದರೆ ಬಗೆಹರಿಸೋಣ, ಸಭೆಗೆ ಅಡ್ಡಿಪಡಿಸುವುದು ಸರಿಯಲ್ಲ. ಸ್ವಲ್ಪ ಸಮಾಧಾನದಿಂದಿರಿ ಎಂದು ಯಡಿಯೂರಪ್ಪ ಗುಡುಗಿದರು. ಮುಖ್ಯಮಂತ್ರಿಗಳ ಎಚ್ಚರಿಕೆ ಗಣನೆಗೆ ತೆಗೆದುಕೊಳ್ಳದ ಕರವೇ ಕಾರ್ಯಕರ್ತೆಯರು ಪ್ರತಿಭಟನೆಯನ್ನು ಮುಂದುವರೆಸಿದರು.

ಬೆಳಗಾವಿ ಮಹಾನಗರ ಪಾಲಿಕೆ ಮೇಲಿರುವ ಭಗವಾಧ್ವಜ ತೆಗೆಯುವ ವಿಷಯಕ್ಕೆ ಸಂಬಂಧಿಸಿದಂತೆ ಸಂಸದ ಸುರೇಶ್ ಅಂಗಡಿ ಅವರು ಭಗವಾಧ್ವಜ ತೆಗೆಯಲು ವಿರೋಧಿಸಿದ್ದರು. ಕರವೇ ಭಗವಾಧ್ವಜ ತೆಗೆಯಲು ಮುಂದಾದಾಗ ಸಂಸದ ಅಂಗಡಿ ಮತ್ತು ಶಾಸಕ ಸಂಜಯ್ ಪಾಟೀಲ್ ಎಂಇಎಸ್ ಪರ ವಹಿಸಿ ಮಾತನಾಡಿ, ಧ್ವಜ ತೆಗೆಯಲು ಅವಕಾಶ ವಿರೋಧಿಸಿದ್ದರು. ಇದು ರಾಜ್ಯಾದ್ಯಂತ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು.

ನಂತರ ಪೊಲೀಸರು ಮಹಿಳೆಯರಮ ಮನವೊಲಿಸುವ ಪ್ರಯತ್ನ ಮುಂದುವರದೆ ಇತ್ತು. ಈ ಮಧ್ಯ ಮಾತು ಮುಂದುವೆರೆಸಿದ ಯಡಿಯೂರಪ್ಪ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಬಳ್ಳಾರಿ ಸಚಿವರಾದ ರೆಡ್ಡಿಗಳು ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಜೈಲಿಗೆ ಕಳಿಸುವೆ ಎಂಬ ಸಿದ್ದು ಮಾತಿಗೆ ಯಡಿಯೂರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರಿಗೆ ದೇವರು ಬುದ್ಧಿ ಕೊಡಲಿ ಎಂದು ಸಿಎಂ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+