ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಪರಿಚಯ
ಬೆಂಗಳೂರು, ಏ. 13 : ಇದುವರೆಗೆ ಸಾಮಾನ್ಯ ಕ್ಷೇತ್ರವಾಗಿದ್ದ ಚಿತ್ರದುರ್ಗ ಪರಿಶಿಷ್ಟ ಜಾತಿಗೆ ಮೀಸಲಾಗಿ ಮೂಲ ನೆಲೆ ಕಂಡುಕೊಂಡಿದೆ. ಮರುವಿಂಗಡಣೆ ಮತ್ತು ಮೀಸಲು ಬದಲಾಗಿರುವುದರಿಂದ ಕ್ಷೇತ್ರ ಹೊಸರೂಪ ಪಡೆದುಕೊಂಡಿದೆ. ಒಂದು ಲೆಕ್ಕದಲ್ಲಿ ಕಾಂಗ್ರೆಸ್ ಪಕ್ಷದ ಏಳು ಸುತ್ತಿನ ಕೋಟೆಯಾಗಿದ್ದರೂ, ಬಹುಪಾಲು ಕೇಂದ್ರದಲ್ಲಿ ಅದೇ ಪಕ್ಷ ಅಧಿಕಾರದಲ್ಲಿದ್ದರೂ ಕ್ಷೇತ್ರಕ್ಕೆ ಹೆಚ್ಚಿನ ಲಾಭವೇನೂ ಆಗಿಲ್ಲ. ಮೇಲ್ವರ್ಗದ ಜನರ ರಾಜಕೀಯ ಮೇಲಾಟ ಕಂಡಿದ್ದ ಇಲ್ಲಿನ ಪರಿಶಿಷ್ಟಜಾತಿಯವರಿಗೆ ಈಗ ಸ್ವತಃ ಪ್ರಯೋಗ ಮಾಡುವ ಅವಕಾಶ ಒದಗಿಬಂದಿದೆ.
ದಾವಣಗೆರೆ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಹೊಳಲ್ಕೆರೆ, ಭರಮಸಾಗರ ವಿಧಾನಸಭಾ ಕ್ಷೇತ್ರಗಳು ಚಿತ್ರದುರ್ಗಕ್ಕೆ ಹೊಸದಾಗಿ ಸೇರ್ಪಡೆಗೊಂಡಿದೆ. ತುಮಕೂರು ಜಿಲ್ಲೆಯ ಶಿರಾ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರ ಉಳಿದುಕೊಂಡಿವೆ. ಜಾತಿಯ ಲೆಕ್ಕಾಚಾರ ಮೇಲುಗೈ ಪಡೆಯುವ ಸಾಧ್ಯತೆ ಇದೆ.
ಕ್ಷೇತ್ರ - ಚಿತ್ರದುರ್ಗ ( ಎಸ್ ಸಿ ಮೀಸಲು)
* ಚುನಾವಣೆ ದಿನಾಂಕ : ಏಪ್ರಿಲ್ 23
ಅಭ್ಯರ್ಥಿಗಳು
* ಕಾಂಗ್ರೆಸ್ - ಡಾ ತಿಪ್ಪೇಸ್ವಾಮಿ
* ಬಿಜೆಪಿ - ಜನಾರ್ಧನ ಸ್ವಾಮಿ
* ಜನತಾದಳ - ರತ್ನಾಕರ ಬಾಬು
* ಬಿಎಸ್ಪಿ - ಎಂ ಜಯಣ್ಣ
ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು
* ಮೊಳಕಾಲ್ಮೂರು
* ಚಿತ್ರದುರ್ಗ
* ಚಳ್ಳಕೆರೆ
* ಹೊಳಲ್ಕೆರೆ
* ಹಿರಿಯೂರು
* ಹೊಸದುರ್ಗ
* ಶಿರಾ
* ಪಾವಗಡ
* ಒಟ್ಟು ಮತದಾರರು - 15.29 ಲಕ್ಷ
* ಪುರುಷರು - 7.78 ಲಕ್ಷ
* ಮಹಿಳೆಯರು - 7.51 ಲಕ್ಷ
ಜಾತಿವಾರು ಲೆಕ್ಕಾಚಾರ
* ಎಸ್ ಸಿ 3.37 ಲಕ್ಷ
* ಎಸ್ ಟಿ 2.66 ಲಕ್ಷ
* ಒಕ್ಕಲಿಗರು 2 ಲಕ್ಷ
* ಕುರುಬ 1 ಲಕ್ಷ
* ಲಿಂಗಾಯಿತರು 1.50 ಲಕ್ಷ
* ಇತರರು 3.08 ಲಕ್ಷ
ಕ್ಷೇತ್ರದ ಬಗೆಹರಿಯದ ಕೆಲವೊಂದು ಸಮಸ್ಯೆಗಳ ಬಗ್ಗೆ ಅಭ್ಯರ್ಥಿಗಳು ಇನ್ನಾದರೂ ಗಮನ ಕೊಡಲಿ
* ಪ್ರತಿವರ್ಷ ಬರದ ಬೇಗೆಯಿಂದ ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆ
* ಕೈಗಾರಿಕೆಗಳು ಇಲ್ಲದೇ ನಿರುದ್ಯೋಗ
* ವ್ಯಾಪಕ ಗಣಿಗಾರಿಕೆಯಿಂದ ಶ್ರೀಸಾಮಾನ್ಯರ ಬದುಕು ತತ್ತರ.
* ಪ್ರವಾಸೋದ್ಯಮದ ಶೈಸಾವಸ್ಥೆ
* ಫ್ಲೋರೈಡ್ ಯುಕ್ತ ಕುಡಿಯುವ ನೀರಿನಿಂದ ಜನರು ಹೈರಾಣ
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications