ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರುಣ್ ಮೇಲೆ ಮಾಯಾವತಿ ಬ್ರಹ್ಮಾಸ್ತ್ರ

By Staff
|
Google Oneindia Kannada News

Varun Gandhi charged under NSA
ಲಕ್ನೋ, ಮಾ. 30: ಬಂಧನ ಪ್ರಸಂಗ ಮುಗಿದು ಜೈಲು ಸೇರಿದರೂ, ವರುಣ್ ಗಾಂಧಿಯ ಕಷ್ಟಗಳು ದೂರಾಗಿಲ್ಲ. ವರುಣ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿಯಲ್ಲಿ ಸಿಕ್ಕಿಸಲಾಗಿದೆ. ಭಾನುವಾರ ತಡರಾತ್ರಿಯ ನಂತರ ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಈ ಕುರಿತ ಆದೇಶವನ್ನು ನೀಡಿದ್ದಾರೆ.

ಎನ್ ಎಸ್ ಎ ಕಾಯ್ದೆಯಡಿಯಲ್ಲಿ ಜಾಮೀನುರಹಿತ ಒಂದು ವರ್ಷಕಾಲ ಜೈಲುವಾಸ ವಿಧಿಸಬಹುದಾಗಿದೆ. ಈ ಕಾಯ್ದೆಯ ಸೆಕ್ಷನ್ 2 ಹಾಗೂ 3ರ ಪ್ರಕಾರ ವರುಣ್ ಅವರ ಮೇಲೆ ಶಿಕ್ಷೆ ಹೇರುವ ಸಾಧ್ಯತೆಯಿದೆ. ಈ ಬಗ್ಗೆ ಜೈಲಿನಲ್ಲಿರುವ ವರುಣ್ ಅವರಿಗೆ ನೋಟಿಸ್ ಕಳಿಸಲಾಗಿದೆ ಎಂದು ಉತ್ತರಪ್ರದೇಶ ಸಚಿವ ಸಂಪುಟದ ಹೆಚ್ಚುವರಿ ಕಾರ್ಯದರ್ಶಿ ವಿಜಯ್ ಶಂಕರ್ ಪಾಂಡೆ ಹೇಳಿದ್ದಾರೆ.

ಮಾರ್ಚ್ 7 ರಂದು ಪಿಲಿಭಿತ್ ಕ್ಷೇತ್ರದಲ್ಲಿ ವರುಣ್ ಗಾಂಧಿ ಮಾಡಿದ ಭಾಷಣ, ಕೋಮು ಪ್ರಚೋದನಕಾರಿ ಎಂದು ಪರಿಗಣಿಸಿ ಸ್ಥಳೀಯ ಪೊಲೀಸರು ಚುನಾವಣಾ ಆಯೊಗದ ಆದೇಶದ ಮೇರೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. 2 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸುವಂತೆ ಕೋರ್ಟ್ ಆದೇಶ ಕೂಡ ನೀಡಿದೆ.ವರುಣ್ ನ್ಯಾಯಾಂಗ ಬಂಧನ, ಜನಜಾತ್ರೆಯಾಗಿ ಪರಿಣಮಿಸಿ, ಪೊಲೀಸರು ಹಾಗೂ ಬಿಜೆಪಿ ಬೆಂಬಲಿಗರ ನಡುವೆ ಕಲ್ಲುತೂರಾಟ, ಲಾಠಿಚಾರ್ಚ್ ಕೂಡ ಸಂಭವಿಸಿತ್ತು.

(ಏಜೆನ್ಸೀಸ್)
ವರುಣ್ ಗಾಂಧಿಗೆ ಜೈಲಿನಲ್ಲಿ ಮನೆಯೂಟದ ಆತಿಥ್ಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X