ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರ ಪಾಲಾದ ಬೆಳಗಾವಿ ಮೇಯರ್ ಪಟ್ಟ,

By Staff
|
Google Oneindia Kannada News

Belgaum city corporation
ಬೆಳಗಾವಿ ಮಾ 30: ಭಾಷಾ ಹೋರಾಟದ ವಿಷಯದಲ್ಲಿ ಸದಾ ಒಂದಲ್ಲೊಂದು ವಿವಾದಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಪಟ್ಟ ಕನ್ನಡಿಗರ ಪಾಲಾಗಾವುದರ ಮೂಲಕ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ತೀವ್ರ ಮುಖಭಂಗ ಅನುಭವಿಸಿದೆ. ಇಂದು ನಡೆದ ಪಾಲಿಕೆಯ ಚುನಾವಣೆಯಲ್ಲಿ ಮೇಯರ್ ಮತ್ತು ಉಪಮೇಯರ್ ಪಟ್ಟ ಕನ್ನಡಿಗರ ಪಾಲಾಗಿದೆ.

ಎಂಇಎಸ್ ಸದಸ್ಯರ ಪ್ರತಿಭಟನೆಯ ನಡುವೆ ನಡೆದ ಚುನಾವಣೆಯಲ್ಲಿ ಮೇಯರಾಗಿ ಯಲ್ಲಪ್ಪ ಕುರುಬರ್ (34 ಮತಗಳು) ಮತ್ತು ಉಪ ಮೇಯರಾಗಿ ಜ್ಯೋತಿ ಬಾವಿಕಟ್ಟೆ ಆಯ್ಕೆಯಾಗಿದ್ದಾರೆ. 57 ಸದಸ್ಯರು ಇರುವ ಪಾಲಿಕೆಯ ಚುನಾವಣೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರ ಮಧ್ಯಸ್ಥಿಕೆಯಲ್ಲಿ ನಡೆಯಿತು. ಹೇಗಾದರೂ ಈ ಪಟ್ಟ ಕನ್ನಡಿಗರ ಪಾಲಾಗ ಬೇಕೆಂದು ಸಚಿವ ಬೊಮ್ಮಾಯಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಜೊತೆ ಮಾತುಕತೆ ನಡೆಸಿದ್ದರು ಎಂದು ವರದಿಯಾಗಿದೆ.

ಕರವೇ ಅಧ್ಯಕ್ಷ ನಾರಾಯಣ ಗೌಡ ಹೇಳಿಕೆ ನೀಡುತ್ತಾ, ಮೇಯರ್ -ಉಪಮೇಯರ್ ಆಗಿ ಕನ್ನಡಿಗರು ಆಯ್ಕೆಯಾಗಿರುವುದು ಸಂತಸ ತಂದಿದೆ. ಕನ್ನಡಪರ ಸಂಘಟನೆಗಳ ಒತ್ತಡದಿಂದ ಈ ಬಾರಿ ಸರಕಾರ ಎಚ್ಚೆತ್ತ್ತು ಕಾರ್ಯೋನ್ಮುಖವಾಗಿರುವುದು ಅಭಿನಂದನೀಯ ಎಂದು ಹೇಳಿಕೆ ನೀಡಿದ್ದಾರೆ.

(ದಟ್ಸ್ ಕನ್ನಡವಾರ್ತೆ)

ಕನ್ನಡ ಪರ ಸಂಘಟನೆಗಳು ಒಂದಾಗಿ ಕಣಕ್ಕೆ
ಬೆಳಗಾವಿ ಪಾಲಿಕೆ ಮೇಲೆ ರಾಷ್ಟ್ರದ್ವಜ ಮಾತ್ರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X