400692ಕೆ ಜಿ ಬಾಲಕೃಷ್ಣನ್ಧರ್ಮಸಂಕಟಕ್ಕೆ ಸಿಲುಕಿದ ಬಳ್ಳಾರಿ ಗಣಿಧಣಿಗಳು!/news/2009/05/02/bellary-reddys-to-abide-by-sc-order.htmlನವದೆಹಲಿ, ಮೇ.2: ಬಳ್ಳಾರಿ ಜಿಲ್ಲೆಯ ಗಡಿ ಭಾಗದಲ್ಲಿ ಆಗಿರುವ ರಾಜ್ಯದ ಗಡಿ ಒತ್ತುವರಿಗೆ ಸಂಬಂಧಿಸಿದಂತೆ ಆರು ವಾರಗಳಲ್ಲಿ ಜಂಟಿ ಸಮೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ. ಸಮೀಕ್ಷೆಯನ್ನು ಆರು ವಾರಗಳ ಒಳಗಾಗಿ ಮಾಡಿ ಮುಗಿಸುತ್ತೇವೆ ಎಂಬುದಾಗಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ನ್ಯಾಯವಾದಿ ಮಾಡಿಕೊಂಡಿರುವ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್, 36352http://kannada.oneindia.com/img/2009/05/02-janardhana-reddy2.jpg400692ಕೆ ಜಿ ಬಾಲಕೃಷ್ಣನ್ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪುಹಣ ತರುತ್ತೇವೆ: ಕೇಂದ್ರ/news/2009/05/02/govt-files-affidavit-black-money-foreign-banks.htmlನವದೆಹಲಿ, ಮೇ.2: ಸ್ವಿಸ್ ಬ್ಯಾಂಕ್ ನಲ್ಲಿರುವ ಭಾರತದ ಸಾವಿರಾರು ಕೋಟಿ ರುಗಳ ಕಪ್ಪು ಹಣವನ್ನು ಮರಳಿ ಭಾರತಕ್ಕೆ ತರಲು ಕ್ರಮ ಕೈಗೊಳ್ಳುವುದಾಗಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಕೇಂದ್ರ ಸರಕಾರ ತಿಳಿಸಿದೆ. ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪು ಹಣವನ್ನು ಮರಳಿ ತರಬೇಕು ಎಂದು ಮಾಜಿ ಕಾನೂನು ಸಚಿವ ಮತ್ತು ಪ್ರಮುಖ ನ್ಯಾಯವಾದಿ ರಾಮ್ 36359http://kannada.oneindia.com/img/2009/05/02-supreme-court.jpg400692ಕೆ ಜಿ ಬಾಲಕೃಷ್ಣನ್ ಆಸ್ತಿ ಬಹಿರಂಗಕ್ಕೆ ಒಪ್ಪಿದ ನ್ಯಾಯಮೂರ್ತಿಗಳು /news/2009/08/27/sc-judges-to-declare-assets.htmlನವದೆಹಲಿ, ಆ. 27 : ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಕೊನೆಗೂ ತಮ್ಮ ಆಸ್ತಿ ವಿವರ ಬಹಿರಂಗಪಡಿಸಲು ಒಪ್ಪಿಕೊಂಡಿದ್ದಾರೆ. ನ್ಯಾಯಮೂರ್ತಿಗಳೆಲ್ಲರೂ ನ್ಯಾಯಾಲಯದ ವೆಬ್ ಸೈಟ್ ನಲ್ಲಿ ಆಸ್ತಿಪಾಸ್ತಿ ಘೋಷಿಸಿಕೊಳ್ಳಲಿದ್ದಾರೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಡಿ ವಿ ಶೈಲೇಂದ್ರ ಕುಮಾರ್ ಆಸ್ತಿ ವಿವರ ಬಹಿರಂಗ ಪಡಿಸುವುದು ಹಿತಕರವೆ೦ಬ ಪ್ರತಿಪಾದನೆಗೆ ಮನ್ನಣೆ ಸಿಕ್ಕಂತಾಗಿದೆ. ಸೋಮವಾರ (ಆ 27) ಶೈಲೇಂದ್ರ ಕುಮಾರ್ ತಮ್ಮ ಆಸ್ತಿ 38848http://kannada.oneindia.com/img/2009/08/27-kg-balakrishnan1e.jpg400692ಕೆ ಜಿ ಬಾಲಕೃಷ್ಣನ್ಪಿಡಿ ದಿನಕರನ್ ಮೇಲೆ ಆಕ್ರಮ ಆಸ್ತಿ ಆರೋಪ/news/2009/09/16/judges-assets-karnataka-chief-justice-in-trouble.htmlಬೆಂಗಳೂರು, ಸೆ. 16 : ಕರ್ನಾಟಕದ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ಪಿ ಡಿ ದಿನಕರನ್ ಅವರು ಅಕ್ರಮ ಆಸ್ತಿ ಹೊಂದಿರುವ ಆರೋಪಕ್ಕೆ ಒಳಗಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಅಗತ್ಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ಅವರು ವಿವರಣೆ ನೀಡುವಂತೆ ದಿನಕರನ್ ಗೆ ಸೂಚನೆ ನೀಡಿದ್ದಾರೆ. 39204http://kannada.oneindia.com/img/2009/09/16-pd-dinakaran1.jpg400692ಕೆ ಜಿ ಬಾಲಕೃಷ್ಣನ್ಅಕ್ರಮ ಆಸ್ತಿ : ದಿನಕರನ್ ರಾಜೀನಾಮೆ?/news/2009/10/14/dinakaran-skips-court-before-sc-meet.htmlಬೆಂಗಳೂರು, ಅ. 14 : ಅಕ್ರಮ ಆಸ್ತಿ ಸಂಪಾದನೆ ಆರೋಪಕ್ಕೆ ಗುರಿಯಾಗಿರುವ ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪಿ ಡಿ ದಿನಕರನ್ ಮೊದಲ ಬಾರಿಗೆ ನ್ಯಾಯಾಲಯದ ಕಲಾಪಗಳನ್ನು ದಿಢೀರ್ ರದ್ದುಗೊಳಿಸಿದ ಪ್ರಸಂಗ ನಡೆದಿದೆ. ದಿನಕರನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದು ಸೂಕ್ತ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿರುವ ಬೆನ್ನಲ್ಲೇ ಅವರು ರಾಜೀನಾಮೆ ನೀಡಿದ್ದಾರೆ ಎಂದು ಹೈಕೋರ್ಟ್ ನಲ್ಲಿ ದಟ್ಟವಾಗಿ 39672http://kannada.oneindia.com/img/2009/10/14-pd-dinakaran1.jpg386565ಪಿ ಡಿ ದಿನಕರನ್ನೂತನ ರಾಜ್ಯಪಾಲ ಭಾರದ್ವಾಜ್ ಇಂದು ಪ್ರಮಾಣ/news/2009/06/29/hr-bharadwaj-to-take-charge-as-karnataka-governor.htmlಬೆಂಗಳೂರು, ಜೂ.29:ರಾಜ್ಯದ 16ನೇ ರಾಜ್ಯಪಾಲರಾಗಿ ಕಾಂಗ್ರೆಸ್ ನ ಹಿರಿಯ ಮುಖಂಡ ಎಚ್ ಆರ್ ಭಾರದ್ವಾಜ್ ಸೋಮವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇಂದು ಮಧ್ಯಾಹ್ನ ಅವರು ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದು ಸಂಜೆ 4.30 ಗಂಟೆಗೆ ರಾಜಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಪಿ ಡಿ ದಿನಕರನ್ ಪ್ರಮಾಣ ವಚನ ಬೋಧಿಸಲಿದ್ದಾರೆ. ಮುಖ್ಯಮಂತ್ರಿ ಬಿ 37635http://kannada.oneindia.com/img/2009/06/29-hr-bhardwaj1.jpg386565ಪಿ ಡಿ ದಿನಕರನ್ದಿನಕರನ್ ವಜಾಕ್ಕೆ ವಕೀಲರ ಸಂಘದ ಆಗ್ರಹ /news/2009/09/18/bar-wants-karnataka-cj-to-keep-off-work.htmlಬೆಂಗಳೂರು, ಸೆ. 18 : ಅಕ್ರಮ ಅಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ಪಿ ಡಿ ದಿನಕರನ್ ತಮ್ಮ ವಿರುದ್ಧವಿರುವ ಆರೋಪ ಮುಕ್ತ ಆಗುವವರೆಗೆ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸಬಾರದು, ವಿಚಾರಣೆ ನಡೆಸಬಾರದು ಎಂದು ಬೆಂಗಳೂರು ವಕೀಲರ ಸಂಘ ಬುಧವಾರ ಸರ್ವಾನುಮತದಿಂದ ಆಗ್ರಹಿಸಿದೆ. ಅಷ್ಟೇ ಅಲ್ಲದೇ, ವಕೀಲ ಸಮುದಾಯಕ್ಕೆ ಅವರು ಅನ್ಯಾಯ ಮಾಡಿರುವ ಆರೋಪಗಳು ಕೇಳಿಬರುತ್ತಿರುವ 39241http://kannada.oneindia.com/img/2009/09/18-pd-dinakaran1.jpg386565ಪಿ ಡಿ ದಿನಕರನ್ಅಧಿಕಾರಿಗಳಿಗೆ ಬೆದರಿಕೆ ಒಡ್ಡಿದ ನ್ಯಾ. ದಿನಕರನ್ ? /news/2009/10/12/panel-finds-fresh-evidence-against-pd-dinakaran.htmlಚೆನ್ನೈ, ಅ. 12 : ಸ್ವಗ್ರಾಮದಲ್ಲಿ ಸರಕಾರಿ ಭೂಮಿ ಹೊಂದಿರುವ ಆರೋಪ ಎದುರಿಸುತ್ತಿರುವ ಕರ್ನಾಟಕದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿಡಿ ದಿನಕರನ್ ತಮಿಳುನಾಡಿನ ಕಂದಾಯ ಅಧಿಕಾರಿ ಹಾಗೂ ತಹಸೀಲ್ದಾರ್ ರಿಗೆ ಬೆದರಿಕೆ ಒಡ್ಡಿ ಅಧಿಕೃತ ಕೆಲಸಗಳಿಗೆ ಅಡ್ಡಿಪಡಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ತಮಿಳುನಾಡಿನ ತಿರುವಲ್ಲೂರ್ ಜಿಲ್ಲೆಯ ಕಾವೇರಿ ರಾಜಪುರಂ ಗ್ರಾಮದಲ್ಲಿ ಸರಕಾರಿ ಭೂಮಿ ಹೊಂದಿರುವ ಬಗ್ಗೆ 39636http://kannada.oneindia.com/img/2009/10/12-pd-dinakaran1.jpg386565ಪಿ ಡಿ ದಿನಕರನ್ರಾಜ್ ಪ್ರತಿಮೆ ಸ್ಥಳಾಂತರಕ್ಕೆ ಹೈಕೋರ್ಟ್ ಸೂಚನೆ/movies/raj/2009/29-hc-suggests-bbmp-to-shift-dr-rajkumar-idol.htmlಬೆಂಗಳೂರು ಪುರಭವನದ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಬಳಿ ಸ್ಥಾಪಿಸಲು ಉದ್ದೇಶಿಸಿರುವ ಡಾ.ರಾಜ್ ಕುಮಾರ್ ಪ್ರತಿಮೆಯನ್ನು ಮತ್ತೊಂದೆಡೆಗೆ ಸ್ಥಳಾಂತರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉದ್ದೇಶಿಸಿದೆ. ಈ ವಿಷಯವನ್ನು ಕರ್ನಾಟಕ ಹೈಕೋರ್ಟ್ ಗೆ ಬೆಂಗಳೂರು ಮಹಾನಗರ ಪಾಲಿಕೆ ಬುಧವಾರ ತಿಳಿಸಿದೆ.ಈ ಹಿಂದೆ ಡಾ.ರಾಜ್ ಪ್ರತಿಮೆಯನ್ನು ಚೆನ್ನಮ್ಮ ಪ್ರತಿಮೆಯ ಎದುರುಗಡೆ ಸ್ಥಾಪಿಸಲು ಬಿಬಿಎಂಪಿ ಉದ್ದೇಶಿಸಿತ್ತು. ಹೀಗೆ 39925http://kannada.oneindia.com/img/2009/10/29-rajkumar2.jpgnews"> ಕರ್ನಾಟಕದಲ್ಲಿ 150 ಹೊಸ ನ್ಯಾಯಾಲಯಗಳು | Mega Lok Adalat | K G Balakrishnan | P D Dinakaran - ಕರ್ನಾಟಕದಲ್ಲಿ 150 ಹೊಸ ನ್ಯಾಯಾಲಯಗಳು - Kannada Oneindia

ಕರ್ನಾಟಕದಲ್ಲಿ 150 ಹೊಸ ನ್ಯಾಯಾಲಯಗಳು

ಬೆಂಗಳೂರು, ಮಾ. 29: ದೇಶದಲ್ಲಿ 4000 ಹೆಚ್ಚುವರಿ ನ್ಯಾಯಾಲಯಗಳು ಪ್ರಾರಂಭವಾಗಲಿದ್ದು ಕರ್ನಾಟಕದಲ್ಲಿ 150 ನ್ಯಾಯಾಲಯಗಳು ಪ್ರಾರಂಭವಾಗಲಿವೆ ಎಂದು ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹಾಗೂ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಪ್ರಧಾನ ಪೋಷಕರಾದ ಡಾ. ಕೆ.ಜಿ. ಬಾಲಕೃಷ್ಣನ್ ಅವರು ತಿಳಿಸಿದರು.

ಕರ್ನಾಟಕ ಉಚ್ಛ ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಮೆಗಾ ಲೋಕ ಅದಾಲತ್ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು ಲೋಕ ಅದಾಲತ್‌ಗಳು ಸಾಮಾನ್ಯ ಜನರಿಗೆ ನ್ಯಾಯ ಒದಗಿಸಲು ಅತ್ಯುತ್ತಮ ಪಾತ್ರ ವಹಿಸುತ್ತಿದ್ದು, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಕರ್ನಾಟಕ ಉಚ್ಛನ್ಯಾಯಾಲಯದ ಕಾನೂನು ಸೇವಾ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ 22 ದಿನಗಳಲ್ಲಿ 26,000ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಗೊಳಿಸಿರುವುದು ಪ್ರಶಂಸನಾರ್ಹ. ಕಾಮನ್‌ವೆಲ್ತ್ ರಾಷ್ಟ್ರಗಳು ಮತ್ತು ನೆರೆಹೊರೆಯ ರಾಷ್ಟ್ರಗಳು ಲೋಕ್ ಅದಾಲತ್ ಕಾರ್ಯಕ್ರಮವನ್ನು ತಮ್ಮ ದೇಶದಲ್ಲಿ ನಡೆಸಲಿವೆ ಎಂದರು.

ಜಗತ್ತಿನಲ್ಲಿ ನ್ಯಾಯಾಂಗ ವಿತರಣೆಯಲ್ಲಿ ಭಾರತ ಮುಂದಿದೆ. ಅಮೇರಿಕಾ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಕಳೆದ ವರ್ಷ 5000 ಪ್ರಕರಣಗಳು ದಾಖಲಾಗಿ 160 ಪ್ರಕರಣಗಳು ವಿಚಾರಣೆಗೆ ಬಂದರೆ, ಬೆಲರೂಸ್ ದೇಶದ ನ್ಯಾಯಾಲಯದಲ್ಲಿ ಮೂರು ಪ್ರಕರಣಗಳು ದಿನಕ್ಕೆ ಇತ್ಯರ್ಥಗೊಳ್ಳುತ್ತಿವೆ. ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಕಳೆದ ಮೂರು ತಿಂಗಳಲ್ಲಿ 7300 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಭಾರತದಲ್ಲಿ ಮೂರು ರಾಜ್ಯಗಳನ್ನುಳಿದು ಇನ್ನಿತರ ರಾಜ್ಯಗಳಲ್ಲಿ ದಾಖಲಾಗುವ ಪ್ರಕರಣಗಳು ನ್ಯಾಯ ವಿತರಣೆ ಪ್ರಕರಣಗಳಿಗೆ ಸರಿ ಸಮಾನವಾಗಿವೆ. ನ್ಯಾಯಾಲಯಗಳಲ್ಲಿ ದಾಖಲಾಗುವ ಶೇ. 70 ರಷ್ಟು ಪ್ರಕರಣಗಳು ಶೀಘ್ರವಾಗಿ ಇತ್ಯರ್ಥವಾದರೆ ಉಳಿದ ಶೇ 30 ಪ್ರಕರಣಗಳು ನಿಧಾನವಾಗುತ್ತಿವೆ ಎಂದು ಅವರು ತಿಳಿಸಿದರು.

ಕೇರಳದಲ್ಲಿ 1000 ಜನರಿಗೆ 28 ಪ್ರಕರಣಗಳು ದಾಖಲಾದರೆ ಜಾರ್ಖಂಡ್‌ದಲ್ಲಿ 1000 ಜನಕ್ಕೆ 3 ಪ್ರಕರಣಗಳು ದಾಖಲಾಗುತ್ತಿವೆ. ಕಾರಣ ಅವರಿಗಿರುವ ಕಾನೂನು ಅರಿವಿನ ಕೊರತೆ ಮತ್ತು ಸೌಲಭ್ಯದ ಕೊರತೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.

ಕರ್ನಾಟಕದ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹಾಗೂ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಮಹಾ ಪೋಷಕರಾದ ಪಿ.ಡಿ. ದಿನಕರನ್ ಅವರು ಮಾತನಾಡಿ ಜನಸಂಖ್ಯಾ ಸ್ಪೋಟ ಜಾತಿ, ಮತ, ಭಾಷೆಗಳ ನಡುವಿನ ಭೇದಗಳು ಹೆಚ್ಚು ಪ್ರಕರಣಗಳು ದಾಖಲಾಗಲು ಕಾರಣ. ಹೊಸ ನ್ಯಾಯಲಯಗಳು ಪ್ರಾರಂಭವಾಗಿಲ್ಲದರ ನಡುವೆಯೂ ಹೆಚ್ದು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುತ್ತಿದೆ ಎಂದ ಅವರು ಲೋಕ ಅದಾಲತ್‌ಗಳು ಉತ್ತಮ ಕೆಲಸವನ್ನು ನಿರ್ವಹಿಸುತ್ತಿದ್ದು ಶೀಘ್ರ, ಸಮಯೋಚಿತ, ಕಡಿಮೆ ಖರ್ಚಿನಲ್ಲಿ ನ್ಯಾಯವನ್ನು ಒದಗಿಸುತ್ತಿದೆ. ಅದು ಜನಗಳ ನ್ಯಾಯಾಲಯ. ಯಾರಿಗೂ ಸೋಲು ಗೆಲುವುಗಳಿಲ್ಲ. ಇಬ್ಬರಿಗೂ ನ್ಯಾಯ ಸಿಗುತ್ತದೆ. ಲೋಕ ಅದಾಲತ್‌ಗಳಲ್ಲಿ ಬ್ಯಾಂಕಿನ ವ್ಯವಹಾರ, ಸಿವಿಲ್, ಅಪಘಾತ, ವೈವಾಹಿಕ ಹಾಗೂ ಇನ್ನಿತರ ಪ್ರಕರಣಗಳು ಇತ್ಯರ್ಥವಾಗುತ್ತಿದ್ದು ಇದರಿಂದ ಸಾಮಾನ್ಯ ಜನರ ಕಷ್ಟಗಳಿಗೆ ಪರಿಹಾರ ದೊರಕುತ್ತಿದೆ ಎಂದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+