ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಶೋಕ್ ಖೇಣಿ ವಿರುದ್ಧ ದೇವೇಗೌಡ ಸ್ಪರ್ಧೆ!!!

By Staff
|
Google Oneindia Kannada News

HD Devegowda
ಬೆಂಗಳೂರು, ಮಾ. 20 : ನೈಸ್ ಸಂಸ್ಥೆಯ ಅಶೋಕ್ ಯಾವ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದರೆ, ಅದೇ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವೆ ಎಂದು ಮಾಜಿ ಪ್ರಧಾನಮಂತ್ರಿ ದೇವೇಗೌಡ ಮರು ಸವಾಲು ಹಾಕಿದ್ದಾರೆ. ಈ ಮೂಲಕ ನೈಸ್ ಕಾರಿಡಾರ್ ರಸ್ತೆಗೆ ಮಾತ್ರ ಸೀಮಿತವಾಗಿದ್ದ ದೇವೇಗೌಡ-ಖೇಣಿ ಜಗಳ ರಾಜಕೀಯದೊಳಗೆ ಪ್ರವೇಶ ಪಡೆದುಕೊಂಡಂತಾಗಿದೆ. ಈ ಹಿಂದೆ ಖೇಣಿ ದೇವೇಗೌಡರ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ್ದರು.

ಜೆಡಿಎಸ್ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಶೋಕ್ ಖೇಣಿ ತಾವು ಸ್ಪರ್ಧಿಸುವ ಕ್ಷೇತ್ರವನ್ನು ಕೂಡಲೇ ಪ್ರಕಟಿಸಬೇಕು ಎಂದರು. ಅಶೋಕ್ ಖೇಣಿ ಸಾರ್ವಜನಿಕವಾಗಿ ಬರೀ ಮಾತನಾಡುವುದು ಸರಿಯಲ್ಲ. ಹಾಸನದಲ್ಲಾದರೂ ಸರಿ, ಮಂಡ್ಯದಲ್ಲಾದರೂ ಸರಿ. ಸ್ಪರ್ಧೆಗೆ ನಾನು ಸಿದ್ದ ಎಂದು ಹೇಳುವ ಮೂಲಕ ಖೇಣಿ ಅವರ ಹೇಳಿಕೆಯನ್ನು ಸವಾಲಾಗಿ ಸ್ವೀಕರಿಸುವುದಾಗಿ ಹೇಳಿದರು.

ನೈಸ್ ರಸ್ತೆ ಮೂಲಕ ರಾಜ್ಯ 36 ಸಾವಿರ ಕೋಟಿ ರುಪಾಯಿ ಕೊಳ್ಳೆ ಹೊಡೆದಿರುವ ಖೇಣಿ ಅವರಿಗೆ ರಾಜ್ಯ ಸರ್ಕಾರಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ತುಘಲಕ್ ದರ್ಬಾರ್ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಕೆಲ ದಿನಗಳಿಂದ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಅವರು ಸಕ್ರಿಯ ರಾಜಕಾರಣಕ್ಕೆ ಇಳಿಯುವ ಒಲವು ತೋರಿಸಿದ್ದರು. ದೇವೇಗೌಡ ವಿರುದ್ಧ ಸ್ಪರ್ಧಿಸುವ ಇಂಗಿತವನ್ನು ಸಹ ವ್ಯಕ್ತಪಡಿಸಿದ್ದರು. ಮಂಡ್ಯದಿಂದ ಸ್ಪರ್ಧಿಸಿದರೆ ಹೇಗೆ ಎನ್ನುವುದನ್ನು ಖೇಣಿ ಆಪ್ತರ ಬಳಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಡೆಕ್ಕನ್ ಏವಿಯೇಷನ್ ನ ಕ್ಯಾಪ್ಟನ್ ಗೋಪಿನಾಥ್ ಅವರು ಕೂಡಾ ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಇಲ್ಲವೇ ರಾಷ್ಟ್ರೀಯ ಪಕ್ಷದ ಟಿಕೆಟ್ ಮೂಲಕ ಕಣಕ್ಕಿಳಿಯುವ ಸಾಧ್ಯತೆಗಳಿವೆ.

(ದಟ್ಸ್ ಕನ್ನಡ ವಾರ್ತೆ)
ಪೇಜಾವರ ಶ್ರೀಗಳ ವಿರುದ್ಧ ಕ್ರಮಕ್ಕೆ ದತ್ತಾ ಆಗ್ರಹ
ಗೊಟ್ಟಿಗೆರೆ ಕೆರೆ ವಿವಾದ, ಖೇಣಿಗೆ ಜಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X