ಅವೆಸ್ತಾಜೆನ್ ಲಿ. ಕಂಪನಿಯ ನಿರ್ದೇಶಕ ರಾಜೀನಾಮೆ
ಬೆಂಗಳೂರು, ಮಾ. 18 : ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅವಸ್ತಾಜೆನ್ ಲಿಮಿಟೆಡ್ ಜೈವಿಕ ತಂತ್ರಜ್ಞಾನ ಕಂಪನಿಯ (biotech firm Avesthagen Ltd) ಆಡಳಿತ ಮಂಡಳಿ ಒಬ್ಬೊಬ್ಬರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಕಳೆದ ಮೂರು ವಾರಗಳಲ್ಲಿ ಏಳು ಮಂದಿ ಸದಸ್ಯರಲ್ಲಿ ಐದು ಜನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತೀಚಿನ ಲೆಕ್ಕಪರಿಶೋಧನೆ (ಆಡಿಟ್) ಪ್ರಕಾರ ಬ್ಯಾಲೆನ್ಸ್ ಷೀಟ್ ನಲ್ಲಿ ಏರುಪೇರಾಗಿರುವುದು ಕಂಡು ಬಂದಿದೆ. ಮೇಲ್ನೋಟಕ್ಕೆ ಇದೊಂದು ಮಿನಿ ಸತ್ಯಂ ಪ್ರಕರಣ ಎಂದು ಭಾಸವಾಗುತ್ತದೆ.
ಚೀಫ್ ಆಪರೇಟಿಂಗ್ ಆಫೀಸರ್ ಸಮರೇಶ್ ಪರೀದಾ, ಮುಖ್ಯ ಹಣಕಾಸು ಅಧಿಕಾರಿ ಜೆ ರಾಜಗೋಪಾಲನ್, ಅವೆಸ್ತಾ ಗುಡ್ ಅರ್ಥ್ ಪ್ರೈ ಲಿ ನ ಮುಖ್ಯ ನಿರ್ವಾಹಕ ಸಂದೀಪ್ ದಂಗಾ, ಜೈವಿಕ ಕೃಷಿ ವಿಭಾಗದ ದೀಪಕ್ ಮಲ್ಲಿಕ್, ನಾರಾಯಣ ಶೇಷಾದ್ರಿ, ಇಮಾನುಯಲ್ ರೋಜಿಯರ್, ಜೋಚಾನ್ ಇಬರ್ಟ್ ರಾಜೀನಾಮೆ ನೀಡಿದ ಪ್ರಮುಖರಾಗಿದ್ದಾರೆ. ಇದರಲ್ಲಿ ಶೇಷಾದ್ರಿ, ರೋಜಿಯರ್ ಹಾಗೂ ಇಬರ್ಟ್ ಕಳೆದ ವರ್ಷ ಡಿಸೆಂಬರ್ ನಲ್ಲಿ ರಾಜೀನಾಮೆ ನೀಡಿದ್ದರೆ, ಮಲ್ಲಿಕ್ ಫೆಬ್ರುವರಿ ತಿಂಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications