ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಸಲಹೆ ಬೇಕಿಲ್ಲ, ಮುಷರಫ್ ಗೆ ಮದಾನಿ ತಿರುಗೇಟು

By Staff
|
Google Oneindia Kannada News

Maulna mahood madani
ನವದೆಹಲಿ, ಮಾ. 9 : ಭಾರತದಲ್ಲಿರುವ ಮುಸ್ಲಿಂ ತಮ್ಮ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳುವಷ್ಟು ಶಕ್ತರಿದ್ದಾರೆ. ಇಲ್ಲಿನ ಮುಸ್ಲಿಂರನ್ನು ಒಡೆಯಲು ಪ್ರಯತ್ನಿಸಬೇಡಿ. ನಿಮ್ಮ ಪುಕ್ಕಟೆ ಸಲಹೆ ನಮಗೆ ಬೇಕಿಲ್ಲ ಎಂದು ರಾಜ್ಯ ಸಭಾ ಸದಸ್ಯ ಹಾಗೂ ಜಮಾತ್-ಇ-ಉಲೇಮಾ-ಇ-ಹಿಂದ್ ನ ಮುಖಂಡ ಮೆಹಮೂದ್ ಮದಾನಿ ಅವರು ಮುಷರಫ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ನವದೆಹಲಿಗೆ ಭೇಟಿ ನೀಡಿ ಸಂವಾದವೊಂದರಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು, ಭಾರತದಲ್ಲಿ ಮುಸ್ಲಿಂ ಏಕಾಂಗಿಯಾಗಿದ್ದಾರೆ ಎಂಬ ಮಾತುಗಳನ್ನು ಆಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮದಾನಿ, ಪಾಕಿಸ್ತಾನದಲ್ಲಿ ಮಾಡುತ್ತಿರುವ ಒಡಕು ರಾಜಕೀಯ ಭಾರತದಲ್ಲಿ ಮಾಡಬೇಡಿ, ಇಲ್ಲಿ ನಿಮ್ಮ ಆಟ ನಡೆಯದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮ್ಮ ಒಡೆದು ಆಳುವ ನೀತಿಯಿಂದ ಇಂದು ಪಾಕಿಸ್ತಾನ ಯಾವ ಮಟ್ಟ ತಲುಪಿದೆ ಎನ್ನುವುದು ಇಡೀ ವಿಶ್ವಕ್ಕೆ ಗೊತ್ತಿದೆ. ಪಾಕಿಸ್ತಾನಕ್ಕಿಂತ ಭಾರತದಲ್ಲಿ ಅತೀ ಹೆಚ್ಚು ಮುಸ್ಲಿಂರಿದ್ದಾರೆ ಅನ್ನುವ ಸತ್ಯವನ್ನು ತಿಳಿದುಕೊಳ್ಳಿ. ಅಲ್ಲಿಗಿಂತ ಇಲ್ಲಿ ನಾವು ಸಂತೋಷ ಹಾಗೂ ನೆಮ್ಮದಿಯಿಂದ ಇದ್ದೇವೆ. ಮೊಸರಿನಲ್ಲಿ ಕಲ್ಲು ಹುಡುಕುವ ಮಾಡಬೇಡಿ ಎಂದು ಮದಾನಿ ಖಂಡತುಂಡಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಭಾನುವಾರ ನವದೆಹಲಿಗೆ ಭೇಟಿ ಮುಷರಫ್, ಕಾಶ್ಮೀರ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳದಿದ್ದಲ್ಲ, ಇನ್ನಷ್ಟು ಕಾರ್ಗಿಲ್ ಯುದ್ಧಗಳು ನಡೆಯುವ ಸಾಧ್ಯತೆಗಳಿವೆ. ಈ ಸಮಸ್ಯೆ 6 ದಶಕಗಳಿಂದ ಉಭಯ ದೇಶಗಳಿಗೆ ಭಾರಿ ಘಾಸಿ ಮಾಡಿವೆ. ಇತಿಹಾಸದ ಕೆಟ್ಟ ನೆನಪು ಮರೆತು ಇನ್ನಾದರೂ ಹೊಸ ಹಾದಿ ತುಳಿಯೋಣ. ಭಾವನಾತ್ಮಕವಾಗಿ ಸಂಬಂಧ ಹೊಂದಿರುವ ಜಿಹಾದಿಗಳಿಂದ ಇನ್ನಷ್ಟು ಕಾರ್ಗಿಲ್ ಗಳು ನಡೆಯಬಹುದು ಎಂದು ಮುಷರಫ್ ಎಚ್ಚರಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X