ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಸಿಎಸ್ ನಲ್ಲಿ ಪಿಂಕ್ ಸ್ಲಿಪ್ ಗಳು ರೆಡಿಯಾಗಿವೆ

By Staff
|
Google Oneindia Kannada News

S Ramadorai, CEO, TCS
ಚೆನ್ನೈ, ಮಾ. 9 : ದೇಶದ ಬಹುದೊಡ್ಡ ಸಾಫ್ಟವೇರ್ ಕಂಪನಿ ಎಂಬ ಹೆಗ್ಗಳಿಕೆ ಹೊಂದಿರುವ ಟಾಟಾ ಕನ್ಸ್ ಲ್ಟನ್ಸಿ ಸರ್ವೀಸಸ್ ನಲ್ಲಿ ವೃತ್ತಿಪರತೆ ತೋರಿಸದ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ಕಂಪನಿಯ ಸಿದ್ಧತೆ ನಡೆಸಿದೆ. ಆರ್ಥಿಕ ಬಿಕ್ಕಟ್ಟು ಮುಂದುವರೆದಲ್ಲಿ ಹಾಗೂ ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಉದ್ಯೋಗಿ ವೃತ್ತಿಪರತೆ ತೋರಿಸದಿದ್ದಲ್ಲಿ ಅನಿವಾರ್ಯವಾಗಿ ಸೋಡಾ ಚೀಟಿ ನೀಡಲಾಗುವುದು ಎಂದು ಕಂಪನಿ ಮೂಲಗಳು ತಿಳಿಸಿವೆ.

ವೃತ್ತಿಪರತೆ ತೋರಿಸದ ಉದ್ಯೋಗಿಗಳಿಗೆ ಮುಂದಿನ ಕೆಲವು ತಿಂಗಳ ಮಟ್ಟಿಗೆ ಅವಕಾಶ ನೀಡುತ್ತೇವೆ. ಕಂಪನಿಯ ನಿರೀಕ್ಷೆ ತಕ್ಕಂತೆ ಉದ್ಯೋಗಿಗಳು ಬದಲಾಗಬೇಕಿರುವುದು ಅವಶ್ಯ. ಕಾರ್ಯಕ್ಷಮತೆ ಪ್ರದರ್ಶನ ಸದ್ಯದ ಮಾನ್ಯತೆ. ವೃತ್ತಿಪರತೆ ತೋರಿಸದ ಸುಮಾರು 1300 ಉದ್ಯೋಗಿಗಳನ್ನು ಗುರುತಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾದ ಹಿನ್ನೆಲೆಯಲ್ಲಿ ಇದನ್ನು ಸಮರ್ಥವಾಗಿ ಎದುರಿಸಲು ಸಾಫ್ಟವೇರ್ ಸೇರಿ ಎಲ್ಲ ಕಂಪನಿಗಳೂ ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಂಡಿವೆ. ಕಾಸ್ಟ್ ಕಟಿಂಗ್, ಉತ್ಪಾದನೆ ಹೆಚ್ಚಳ ಹಾಗೂ ಕಾರ್ಯಕ್ಷಮತೆ ನಿರೀಕ್ಷಿಸಲಾಗುತ್ತಿದೆ.

ಈಗಾಗಲೇ ಚೆನ್ನೈನ ಟಿಸಿಎಸ್ ಯೂನಿಟ್ ನಲ್ಲಿ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡುತ್ತಿರುವ ಸುದ್ದಿಯೂ ಬಂದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಸಿಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ ರಾಮದೊರೈ, ಮುಂದಿನ ದಿನಗಳಲ್ಲಿ ಆರ್ಥಿಕ ಸ್ಥಿತಿ ಸುಧಾರಿಸಿದಲ್ಲಿ ಪಿಂಕ್ ಸ್ಲಿಪ್ ನೀಡುವ ಸಾಧ್ಯತೆ ಕಡಿಮೆ. ಆದರೆ, ಹಣಕಾಸು ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಪಿಂಕ್ ಸ್ಲಿಪ್ ಅನಿವಾರ್ಯ ಎಂದು ಅವರು ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ:
ರಾಜ್ಯದ ಐಟಿ ರಫ್ತಿನಲ್ಲಿ ಶೇ. 5 ರಷ್ಟು ಕುಸಿತ
ಕ್ಯಾಂಪಸ್ ಆಯ್ಕೆ ವಿದ್ಯಾರ್ಥಿಗಳಿಗೆ ಉದ್ಯೋಗ:ಇನ್ಫಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X