ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಐಟಿ ರಫ್ತಿನಲ್ಲಿ ಶೇ. 5 ರಷ್ಟು ಕುಸಿತ, ಮನೋಳಿ

By Staff
|
Google Oneindia Kannada News

Ashok Manoli
ಬೆಂಗಳೂರು, ಮಾ. 9 : ಆರ್ಥಿಕ ಕುಸಿತ ಕೊಟ್ಟ ಭಯಂಕರ ಬರೆಗೆ ತತ್ತರಿಸಿ ಹೋಗಿರುವ ಐಟಿ ವಲಯ ಕಳೆದ ವರ್ಷದ ರಫ್ತಿಗಿಂತ ಈ ವರ್ಷದ ರಫ್ತುನಲ್ಲಿ ಗಮನಾರ್ಹ ಇಳಿಕೆ ಕಾಣುವ ಸಾಧ್ಯತೆಗಳಿವೆ. 2008-09 ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿರುವ ಐಟಿ ಕಂಪನಿಗಳು ತನ್ನ ರಫ್ತಿನಲ್ಲಿ ಶೇ. 5 ರಷ್ಟು ಕಡಿಮೆ ಆಗಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಅಶೋಕ್ ಸಿ. ಮನೋಳಿ, ಕಳೆದ ವರ್ಷಕ್ಕೆ ಹೋಲಿಸಿದರೆ 2008-09ರ ಆರ್ಥಿಕ ವರ್ಷದಲ್ಲಿ ರಾಜ್ಯದ ಐಟಿ ವಲಯ ರಫ್ತು ಪ್ರಮಾಣ ಶೇ. 5 ರಷ್ಟು ಇಳಿಕೆ ಕಾಣುವ ಎಲ್ಲ ಲಕ್ಷಣಗಳಿವೆ. 2007-08 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಇನ್ ಫೋಸಿಸ್, ವಿಪ್ರೋ ಸೇರಿ ರಾಜ್ಯದ ಎಲ್ಲ ಐಟಿ ಕಂಪನಿಗಳಿಂದ 56,500 ಕೋಟಿ ರುಪಾಯಿಗಳ ಸಾಫ್ಟವೇರ್ ರಫ್ತು ಮಾಡಲಾಗಿತ್ತು. ಇದು ದೇಶ ಮೂರನೇ ಒಂದು ಕರ್ನಾಟಕದಿಂದಲೇ ರಫ್ತು ಆಗುತ್ತಿತ್ತು. ಆದರೆ, ಈ ವರ್ಷದ ಸನ್ನಿವೇಶವೇ ಬೇರೆಯಾಗಿದೆ, ರಫ್ತಿನ ಪ್ರಮಾಣ ಕುಗ್ಗುವ ಸಾಧ್ಯತೆಗಳಿವೆ ಎಂದು ಹೇಳಿದರು.

ಕರ್ನಾಟಕದಲ್ಲಿರುವ ಹೊರಗುತ್ತಿಗೆಗಳು ತೀವ್ರ ಸಂಕಷ್ಟದಲ್ಲಿವೆ. ಜಾಗತಿಕ ಆರ್ಥಿಕ ಕುಸಿತ ಈ ಉದ್ಯಮದ ಮೇಲೆ ಭಾರಿ ಕರಿನೆರಳು ಬೀರಿದೆ. ಹೊರಗುತ್ತಿಗೆ ಆಧಾರಿಸಿ ಕೆಲಸ ಮಾಡುತ್ತಿರುವ ಕಂಪನಿಗಳು ಯೋಜನೆಗಳ ಕೊರತೆ ಎದುರಿಸುತ್ತಿವೆ. ಇದರಿಂದ ಉದ್ಯೋಗಳಲ್ಲಿ ಅಭದ್ರತೆಯ ಉಂಟಾಗಿದೆ. ರಾಜ್ಯದಲ್ಲಿ 1.5 ರಿಂದ 2 ಲಕ್ಷ ಮಂದಿ ವಿವಿಧ ಐಟಿ ಕಂಪನಿಗಳ ಬಿಪಿಒಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ಕ್ಯಾಂಪಸ್ ಆಯ್ಕೆ ವಿದ್ಯಾರ್ಥಿಗಳಿಗೆ ಉದ್ಯೋಗ:ಇನ್ಫಿ
ಹೊಸ ಹೊರಗುತ್ತಿಗೆ ಯೋಜನೆ ಸಿಗುತ್ತಿಲ್ಲ, ಇನ್ಫೋಸಿಸ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X