ಯಾಹೂ ಆರ್ ಎಂಡ್ ಡಿ ಸಿಇಒ ಶರ್ಮಾ ರಾಜೀನಾಮೆ
ಬೆಂಗಳೂರು, ಫೆ. 27 : ಅಂತರ್ಜಾಲದ ಪ್ರಮುಖ ತಾಣಗಳಲ್ಲಿ ಒಂದಾದ ಯಾಹೂ ಕಂಪನಿಯ ಭಾರತೀಯ ಸಂಶೋಧನಾ ಹಾಗೂ ಅಭಿವೃದ್ಧಿ ವಿಭಾಗದ (ಆರ್ ಎಂಡ್ ಡಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ (ಸಿಇಒ) ಶರದ್ ಶರ್ಮಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶರದ್ ಶರ್ಮಾ ಸ್ಥಾನಕ್ಕೆ ಸೌಬಿಕ್ ಮುಖರ್ಜಿ ನೇಮಕವಾಗುವ ಸಾಧ್ಯತೆಗಳಿವೆ.
ಶರದ್ ಶರ್ಮಾ ಯಾಹೂ ಕಂಪನಿಯ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಬೇರೆ ಆಯ್ಕೆಗಾಗಿ ಎದುರು ನೋಡುತ್ತಿದ್ದಾರೆ. ಯಾಹೂ ಕಂಪನಿಯ ಆರ್ ಎಂಡ್ ಡಿ ವಿಭಾಗದ ಜಾಗತಿಕ ಗ್ರಾಹಕರ ವಲಯದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿರುವ ಸೌಬಿಕ್ ಮುಖರ್ಜಿ ಆರ್ ಎಂಡ್ ಡಿಯ ನೂತನ ಸಿಇಒ ಆಗಿ ನೇಮಕಗೊಳ್ಳುವ ಸಾಧ್ಯತೆಗಳಿವೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications