ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ.26 ಯುಪಿಎ ಸರ್ಕಾರದ ಅಂತಿಮ ಅಧಿವೇಶನ

By Staff
|
Google Oneindia Kannada News

Farewell session of 14th lok sabha on feb26
ನವದೆಹಲಿ. ಫೆ. 26 : 14 ನೇ ಲೋಕಸಭೆ ಅಧಿವೇಶನದ ಕೊನೆಯ ದಿನ ಆರಂಭವಾಗಿದ್ದು, ಯಪಿಎ ಸರ್ಕಾರದ ಅಂತಿಮ ಅಧಿವೇಶನ ಇದಾಗಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸರ್ಕಾರದ ಅಂತಿಮ ಅಧಿವೇಶನದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪಾಲ್ಗೊಂಡು ಸಂಸತ್ತು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆ ಇದೆ. ಪ್ರಧಾನಮಂತ್ರಿಯವರಿಗೆ ಕನಿಷ್ಠ ಎರಡು ತಿಂಗಳು ವಿಶ್ರಾಂತಿ ಅವಶ್ಯಕತೆ ಇದ್ದು, ಇಂದಿನ ಅಧಿವೇಶನ ಕೊನೆಯದಾಗಿದ್ದರಿಂದ ಇದರಲ್ಲಿ ಭಾಗವಹಿಸುತ್ತಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಕೇಂದ್ರದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ವಯಲಾರ್ ರವಿ ಮಾತನಾಡಿ, ಲೋಕಸಭೆ ವಿಸರ್ಜನೆ ಮಾಡುವುದಿಲ್ಲ. ಯುಪಿಎ ಸರ್ಕಾರ ಅಂತಿಮ ದಿನದವರೆಗೂ ಆಡಳಿತ ನಡೆಸಲಿದೆ ಎಂದರು. ಅಂತಿಮ ಅಧಿವೇಶನದಲ್ಲಿ ಮಹತ್ತರ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ರವಿ ಸ್ಪಷ್ಟಪಡಿಸಿದರು. 2004ರಲ್ಲಿ ಎನ್ ಡಿ ಎ ಸರ್ಕಾರ 'ಇಂಡಿಯಾ ಶೈನಿಂಗ್' ಕಾರ್ಯಕ್ರಮದ ಪ್ರಚಾರಕ್ಕಾಗಿ ಲೋಕಸಭೆಯನ್ನು ಚುನಾವಣೆ ದಿನಾಂಕ ಘೋಷಣೆಗೂ ಪೂರ್ವದಲ್ಲಿ ವಿಸರ್ಜನೆ ಮಾಡಿದ್ದರು.ಲೋಕಸಭಾಧ್ಯಕ್ಷ ಸೋಮನಾಥ್ ಚಟರ್ಜಿ ಅವರು ತಮ್ಮ ಅಧಿಕಾರಾವಧಿಯ ಅಂತಿಮ ಭಾಷಣವನ್ನು ಇಂದು ಮಾಡಲಿದ್ದಾರೆ

(ದಟ್ಸ್ ಕನ್ನಡ ವಾರ್ತೆ)
ಯುಪಿಎ ಸರ್ಕಾರದ ಸಾಧನೆಯೇ ಶ್ರೀರಕ್ಷೆ, ಸೋನಿಯಾ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X