ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತೀ ಶನಿವಾರ ಕೂಡ ಅರಮನೆ ದೀಪಾಲಂಕಾರ

By Staff
|
Google Oneindia Kannada News

ಮೈಸೂರು, ಜ.28 : ವಿಶ್ವಖ್ಯಾತ ಐತಿಹಾಸಿಕ ಸ್ಮಾರಕವಾದ ಮೈಸೂರು ಅರಮನೆಯ ವಿಶೇಷ ವಿದ್ಯುತ್ ದೀಪಾಲಂಕಾರ ವ್ಯವಸ್ಥೆಯನ್ನು ಪ್ರತಿ ಭಾನುವಾರ ಹಾಗೂ ಸರ್ಕಾರಿ ರಜಾದಿನಗಳಂದು ರಾತ್ರಿ 7 ರಿಂದ8ಗಂಟೆಯವರೆಗೆ ಚಾಲನೆ ಮಾಡಲಾಗುತ್ತಿದೆ.

ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಅರಮನೆಯ ದೀಪಾಲಂಕಾರದ ಅಂದವನ್ನು ಸವಿಯಲು ಹೆಚ್ಚಿನ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಮತ್ತು ಹೆಚ್ಚು ಪ್ರವಾಸಿಗರನ್ನು ನಗರಕ್ಕೆ ಆಕರ್ಷಿಸುವ ದೃಷ್ಟಿಯಿಂದ ಮೈಸೂರು ಅರಮನೆ ಮಂಡಳಿಯು ಭಾನುವಾರಗಳ ಜೊತೆಗೆ ಪ್ರತಿ ಶನಿವಾರವು ಸಹ ಸಂಜೆ 7 ರಿಂದ 8 ಗಂಟೆಯವರೆಗೆ ಮೈಸೂರು ಅರಮನೆಯ ದೀಪಾಲಂಕಾರ ವ್ಯವಸ್ಥೆಯನ್ನು ಚಾಲನೆಯಲ್ಲಿಡಲು ತೀರ್ಮಾನಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆರವರು 60ನೇ ಗಣರಾಜ್ಯೋತ್ಸವದ ಭಾಷಣದಲ್ಲಿ ಘೋಷಿಸಿದಂತೆ, ಭಾನುವಾರಗಳ ಜತೆ ಪ್ರತಿ ಶನಿವಾರವೂ ಸಹ ಸಂಜೆ 7 ರಿಂದ 8 ಗಂಟೆಯವರೆಗೆ ಮೈಸೂರು ಅರಮನೆಗೆ ದೀಪಾಲಂಕಾರ ವ್ಯವಸ್ಥೆಯನ್ನು ಮಾಡಲಾಗುವುದೆಂದು ಮೈಸೂರು ಅರಮನೆ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X