ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ ಚಂದ್ರಶೇಖರನ್ ಟಿಸಿಎಸ್ ನೂತನ ಸಿಇಓ

By Staff
|
Google Oneindia Kannada News

Chandrashekharan appointed as new CEO of TCS
ಮುಂಬೈ, ಜ. 16 : ಭಾರತದ ಮಾಹಿತಿ ತಂತ್ರಜ್ಞಾನ ದಿಗ್ಗಜ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್) ಕಂಪನಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಓ)ಯಾಗಿ ಎನ್ ಚಂದ್ರಶೇಖರನ್ ನೇಮಕವಾಗಿದ್ದಾರೆ. 1996ರಿಂದ ಕಂಪನಿಯ ಎಮ್ ಡಿ ಮತ್ತು ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಸ್ ರಾಮದೊರೈ ನಿವೃತ್ತರಾಗುತ್ತಿದ್ದಾರೆ.

ಕಂಪನಿಯ ನಿವೃತ್ತಿ ನಿಯಮದ ಪ್ರಕಾರ 65 ವರ್ಷದ ರಾಮದೊರೈ ಅವರು ಅಧಿಕಾರವನ್ನು ತ್ಯಜಿಸಲಿದ್ದಾರೆ. ರಾಮದೊರೈ ಅವರು ನಿವೃತ್ತರಾದರೂ ಕಂಪನಿಯ ಉಪಾಧ್ಯಕ್ಷರಾಗಿ ಕಾರ್ಯಕಾರೇತರ ನಿರ್ದೇಶಕ ಸ್ಥಾನದಲ್ಲಿ ತಮ್ಮ ಸೇವೆಯನ್ನು ಮುಂದಿನ 10 ವರ್ಷಗಳ ಕಾಲ ಟಿಸಿಎಸ್ ಗೆ ನೀಡಲಿದ್ದಾರೆ. ಕಾರ್ಯಕಾರೇತರ ನಿರ್ದೇಶಕರ ನಿವೃತ್ತಿ ವಯಸ್ಸನ್ನು ಟಾಟಾ ಗ್ರೂಪ್ 70ರಿಂದ 75 ವರ್ಷದವರೆಗೆ ಏರಿಸಿದೆ.

ಹದಿನಾರು ತಿಂಗಳುಗಳ ಹಿಂದೆ ಚಂದ್ರಶೇಖರನ್ ಅವರನ್ನು ಟಾಟಾ ಗ್ರೂಪ್ ಸಿಇಓ ಆಗಿ ನೇಮಿಸಿತ್ತು ಮತ್ತು ಅವರನ್ನು ಕಾರ್ಯಕಾರಿ ನಿರ್ದೇಶಕ ಹುದ್ದೆಗೆ ಭಡ್ತಿ ನೀಡಲಾಗಿತ್ತು. ಚಂದ್ರಶೇಖರನ್ ಮತ್ತು ರಾಮದೊರೈ ಅವರ ವೃತ್ತಿ ಒಂದೇ ರೀತಿಯಲ್ಲಿ ರೂಪುಗೊಂಡಿದೆ. ಇಬ್ಬರೂ ಸಾಫ್ಟ್ ವೇರ್ ಇಂಜಿನಿಯರಾಗಿ ಟಿಸಿಎಸ್ ನಲ್ಲಿ ವೃತ್ತಿ ಆರಂಭಿಸಿದ್ದರು. ಮಾಜಿ ವಿಪ್ರೋ ಅಧ್ಯಕ್ಷ ವಿವೇಕ್ ಪಾಲ್ ಅವರು ಟಿಸಿಎಸ್ ಸೇರಬಹುದೆಂಬ ಸುದ್ದಿಯೂ ಹಬ್ಬಿದೆ. ಆದರೆ ಕಂಪನಿಯ ಮೂಲಗಳು ಈ ಸುದ್ದಿಯನ್ನು ಅಲ್ಲಗಳೆದಿವೆ.

ಟಿಸಿಎಸ್ ಅಲ್ಲದೆ ಟಾಟಾ ಗ್ರೂಪ್ ನ ಇನ್ನೆರಡು ಕಂಪನಿಗಳು ಮೇಲುಸ್ತರದಲ್ಲಿ ಬದಲಾವಣೆ ಕಾಣುತ್ತಿದೆ. ರತನ್ ಟಾಟಾ ಅವರ ಮೆಚ್ಚಿನ ಕಂಪನಿ ಟಾಟಾ ಮೋಟರ್ಸ್ ನ ರವಿ ಕಾಂತ್ ಅವರು ಜೂನ್ ನಲ್ಲಿ ನಿವೃತ್ತರಾಗುತ್ತಿದ್ದಾರೆ. ಟಾಟಾ ಮೋಟರ್ಸ್ 2000ರಲ್ಲಿ 500 ಕೋಟಿ ರು.ಗಳ ಭಾರೀ ನಷ್ಟ ಅನುಭವಿಸಿ ಸಂಕಷ್ಟ ಸ್ಥಿತಿಯಲ್ಲಿದ್ದಾಗ ರವಿ ಕಾಂತ್ ಕಂಪನಿಯನ್ನು ಸೇರಿದ್ದರು. ವಾಣಿಜ್ಯ ವಾಹನ ಘಟಕದ ಮುಖ್ಯಸ್ಥರಾಗಿರುವ ಪಿಎಮ್ ತೆಲಂಗ್ ಅವರು ರವಿ ಕಾಂತ್ ಅವರ ಸ್ಥಾನವನ್ನು ಅಲಂಕರಿಸುವ ಸಾಧ್ಯತೆಗಳಿವೆ. ಟಾಟಾ ಸ್ಟೀಲ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಬಿ ಮುತ್ತುರಾಮನ್ ಅವರು ಕೂಡ ಕೆಲ ತಿಂಗಳಲ್ಲಿ ಅಧಿಕಾರವನ್ನು ತ್ಯಜಿಸಲಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X