ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗತ್ಯ ಬಿದ್ದರೆ ಲಾರಿ ಮಾಲೀಕರ ವಿರುದ್ಧ ಎಸ್ಮಾ

By Staff
|
Google Oneindia Kannada News

ಬೆಂಗಳೂರು, ಜ.8: ಲಾರಿ ಮಾಲೀಕರು ಎರಡು ದಿನಗಳಲ್ಲಿ ಮುಷ್ಕರವನ್ನು ಕೈಬಿಡಬೇಕು ಇಲ್ಲದಿದ್ದಲ್ಲಿ ಅಗತ್ಯ ವಸ್ತುಗಳ ಸೇವಾ ಸಂರಕ್ಷಣಾ ಕಾಯ್ದೆ(ಎಸ್ಮಾ)ಯನ್ನು ಜಾರಿಗೊಳಿಸಲಾಗುತ್ತದೆ ಎಂದು ಸಾರಿಗೆ ಸಚಿವ ಆರ್.ಅಶೋಕ್ ಗುರುವಾರ ಎಚ್ಚರಿಕೆ ನೀಡಿದ್ದಾರೆ.

ಮುಷ್ಕರವನ್ನು ಕೈಬಿಡುವಂತೆ ಲಾರಿ ಮಾಲೀಕರ ಮನವೊಲಿಸಲಾಗುತ್ತ್ತಿದೆ. ಒಂದು ವೇಳೆ ಅವರು ಒಪ್ಪ್ಪದಿದ್ದರೆ ಎಸ್ಮಾ ಜಾರಿಗೊಳಿಸಲಾಗುತ್ತದೆ ಎಂದರು. ಪರಿಸ್ಥಿತಿಯನ್ನು ನಿಯಂತ್ರಿಸಲು, ತರಕಾರಿ, ಹಾಲು ಹಾಗೂ ಇತರೆ ಗ್ರಾಹಕರ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ಸಾರಿಗೆ ಇಲಾಖೆಯು 2200 ಬಸ್ಸುಗಳನ್ನು ಸಿದ್ಧಪಡಿಸಿಕೊಂಡಿದೆ. ಸರಕು ಸರಂಜಾಮುಗಳನ್ನು ಸಾಗಿಸಲು ಬಸ್ಸಿನ ಹಿಂದಿನ ಸೀಟುಗಳನ್ನು ತೆಗೆಯಲಾಗುತ್ತದೆ ಎಂದು ಅಶೋಕ್ ತಿಳಿಸಿದರು.

ಬಿಎಂಟಿಸಿಯ 959, ಕೆಎಸ್ಸಾರ್ಟಿಸಿಯ 550, ವಾಯುವ್ಯ ಕೆಎಸ್ಸಾರ್ಟಿಸಿಯ 250 ಹಾಗೂ ಈಶಾನ್ಯ ಕೆಎಸ್ಸ್ಸಾರ್ಟಿಸಿಯ 200 ಬಸ್ಸುಗಳನ್ನು ಅಗತ್ಯ ಸೇವೆಗಾಗಿ ಬಳಸಿಕೊಳ್ಳಲಾಗುತ್ತದೆ . ಅಗತ್ಯ ಬಿದ್ದರೆ ಹೆಚ್ಚುವರಿ 500 ಬಸ್ಸುಗಳನ್ನು ಹೊಂದಿಸಿಕೊಳ್ಳಲಾಗುತ್ತದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ವಿವಿಧ ರಾಜ್ಯಗಳ 300 ಲಾರಿಗಳನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿಕೊಂಡಿದೆ ಎಂದರು.

ಲಾರಿ ಮಾಲೀಕರ ಮುಷ್ಕರದ ಪ್ರತಿನಿತ್ಯ ಅವಲೋಕಿಸಲು ಕಾರ್ಯಪಡೆಯನ್ನು ರಚಿಸಲಾಗಿದೆ. ಸರಕು ಸರಂಜಾಮುಗಳನ್ನು ಸಾಗಿಸಲು ಮುಂದಾಗುವ ಲಾರಿಗಳಿಗೆ ಸರ್ಕಾರ ಭದ್ರತೆ ಕಲ್ಪಿಸಲಿದೆ. ಇದಕ್ಕಾಗಿ ನಿಯಂತ್ರಣ ಕೊಠಡಿಯೊಂದನ್ನು ತೆರೆಯಲಾಗಿದ್ದು ಭದ್ರತೆಗಾಗಿ ಲಾರಿ ಮಾಲೀಕರು ನಿಯಂತ್ರಣ ಕೊಠಡಿಗೆ ಕರೆ ಮಾಡಬಹುದು. ದೂರವಾಣಿ ಸಂಖ್ಯೆ: 22352434

ಎರಡು ದಿನಗಳಲ್ಲಿ ಪೆಟ್ರೋಲ್ ಖಾಲಿ!
ಬುಧವಾರದಿಂದ(ಜ.7) ಇಂಧನ ಕಂಪನಿಗಳು ಮುಷ್ಕರ ಹೂಡಿವೆ. ವೇತನ ಪರಿಷ್ಕರಣೆಯನ್ನು ಜಾರಿಗೊಳಿಸು ಬೇಕು ಎಂಬುದು ಅವರ ಪ್ರಮುಖ ಬೇಡಿಕೆ. ಈ ಕಾರಣ ರಾಜ್ಯಾದಂತ್ಯ ಪೆಟ್ರೋಲ್, ಡೀಸಲ್ ಹಾಗೂ ಅಡುಗೆ ಅನಿಲದ ಅಭಾವ ತಲೆಎತ್ತಿದೆ. ಪರಿಸ್ಥಿತಿ ಹೀಗೆ ಇದ್ದರೆ ಮುಂದಿನ ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿನ ಇಂಧನ ಮುಗಿಯಲಿದೆ. ನಂತರ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಗಳಿವೆ. ಪೊಲೀಸ್ ಮತ್ತು ಸರ್ಕಾರಿ ವಾಹನಗಳಿಗೆ ಇಂಧನವನ್ನು ಮೀಸಲಾಗಿಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆರ್. ಅಶೋಕ್ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)
ತೈಲ ಹಾಗೂ ಅಡುಗೆ ಅನಿಲ ಬೆಲೆ ಇಳಿಕೆ?
ಮುಷ್ಕರ : ಸಹಕರಿಸಲು ಶಿವಮೊಗ್ಗ ಡಿಸಿ ಮನವಿ
ನಿಲ್ಲದಲಾರಿ ಮುಷ್ಕರ; ಬೆಲೆಗಳು ಗಗನಕ್ಕೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X