ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೋರ ಮೈಯ ಗಗನಸಖಿಗೆ ಬಂತು ಕುತ್ತು

By Staff
|
Google Oneindia Kannada News

ನವದೆಹಲಿ, ಜ. 6 : ಏರ್ ಇಂಡಿಯಾ ಸಂಸ್ಥೆಗೆ ಇದುವರೆವಿಗೂ ಸುಂದರವಾಗೆ ಕಾಣುತ್ತಿದ್ದ ತೋರ ಮೈಯ ಗಗನಸಖಿಯರು, ಇಂದೇಕೊ ಕಂಪೆನಿಗೆ ಭಾರವೆನಿಸಿ ಹೊರಹಾಕಿದ್ದಾರೆ. ದಪ್ಪ ಶರೀರ ಹೊತ್ತ ಗಜಗಾಮನಿ ಗಗನಸಖಿಯರಿಗೆ ಪಿಂಕ್ ಸ್ಲಿಪ್ ವಿತರಣೆ ಕಾರ್ಯ ಹಮ್ಮಿಕೊಂಡಿದೆ.

ಇದು ಹೊಸದೇನಲ್ಲ ಮೂರ್ನಾಲ್ಕು ವರ್ಷಗಳಿಂದ ಈ ಬಗ್ಗೆ ಗಗನಸಖಿಯರಿಗೆ ಹೇಳಲಾಗಿತ್ತು. ಆದರೆ ತೂಕ ಇಳಿಸಿಕೊಳ್ಲದೆ ಮೊಂಡಾಟ ಮಾಡಿದ ಕಾರಣ ಅವರನ್ನು ಕೆಲಸದಿಂದ ತೆಗೆದುಹಾಕುವುದು ಅನಿವಾರ್ಯವಾಗಿದೆ.ಸಂಸ್ಥೆಯ ವೈದ್ಯಕೀಯ ಮಂಡಳಿಯ ನಿಯಮಗಳಿಗನುಸಾರವಾಗಿ ಕ್ರಮ ಕೈಗೊಳ್ಳಲಾಗಿದೆ. ವೈದ್ಯಕೀಯ ಮಂಡಳಿ ಸ್ಥೂಲ ಕಾಯದವರನ್ನು ಕೆಲಸಕ್ಕೆ ಯೋಗ್ಯರಲ್ಲ ಎಂದು ನಿರ್ಧರಿಸಿ ನೀಡಿದ ವರದಿ ಆಧಾರ ಮೇಲೆ ಪಿಂಕ್ ಸ್ಲಿಪ್ ನೀಡಲಾಗಿದೆ ಎನ್ನುತ್ತಾರೆ ಏರ್ ಇಂಡಿಯಾದ ವಕ್ತಾರರು.

ದೇಶಿಯ ವಿಮಾನಯಾನದಲ್ಲಿ ಸೇವೆ ಸಲ್ಲಿಸುತ್ತಿದ್ದ 10 ಗಗನಸಖಿಯರಿಗೆ ಕಳೆದ ವಾರವೇ ಪಿಂಕ್ ಸ್ಲಿಪ್ ನೀಡಲಾಗಿದೆ. ತೂಕ ಇಳಿಸಿಕೊಳ್ಳಲು ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು. ಇದಲ್ಲದೆ ಪಿಂಕ್ ಸ್ಲಿಪ್ ಪಡೆದವರಿಗೆ ಬದಲಿ ಕೆಲಸ ನೀಡುವ ಆಹ್ವಾನವನ್ನು ಗಗನಸಖಿಯರು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಶಕ್ಯರಾದ ಗಗನಸಖಿಯರು ದೆಹಲಿ ಹೈಕೋರ್ಟ್ ಮೆಟ್ಟಲೇರಿ ಬಂದದ್ದು ಇದೆ. ಆದರಿಂದ ಪ್ರಯೋಜನವಾಗಿಲ್ಲ. ಒಟ್ಟಿನಲ್ಲಿ ಇತರೆ ಏರ್ ವೇಸ್ ಕಂಪೆನಿಗಳನ್ನು(ಬಹುಶಃ ಕಿಂಗ್ ಫಿಶರ್) ಕಾಪಿ ಮಾಡಲು ಹೋಗಿ ಏರ್ ಇಂಡಿಯಾ ಕೂಡ ಸಪೂರ ಮೈಯ ಗಗನಸಖಿಯರಿಗೆ ಮಣೆ ಹಾಕಿ ತೋರ ಮೈಯ ಹೆಣ್ಮಕ್ಕಳ ಹೊಟ್ಟೆ ಮೇಲೆ ಹೊಡೆದಿದೆ ಎನ್ನುತ್ತಿದೆ ಶ್ರಮೀಕ ವರ್ಗ

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X