ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಚುನಾವಣೆ: ಗೆದ್ದವರು ಬಿದ್ದವರು: ಮತಗಳಿಕೆ ವಿವರ

By Staff
|
Google Oneindia Kannada News

ರಾಜ್ಯದ ಎಂಟು ಕ್ಷೇತ್ರಗಳಲ್ಲಿ ಡಿ. 27 ರಂದು ನಡೆದ ಮರುಚುನಾವಣೆಯಲ್ಲಿ ಒಟ್ಟು 74 ಅಭ್ಯರ್ಥಿಗಳು ಅಧಿಕೃತವಾಗಿ ಅಂತಿಮ ಕಣದಲ್ಲಿ ಉಳಿದಿದ್ದರು. ಒಟ್ಟು 39 ಮಂದಿ ನಾಮಪತ್ರ ವಾಪಸ್ ಪಡೆದಿದ್ದರು. ಡಿ.30 ರಂದು ಪ್ರಕಟಗೊಂಡ ಫಲಿತಾಂಶದ ಪ್ರಕಾರ ಆಡಳಿತಪಕ್ಷ ಬಿಜೆಪಿ 5 ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದೆ. ಜೆಡಿಎಸ್ 3 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ಕಾಂಗ್ರೆಸ್ ಭಾರಿ ಮುಖಭಂಗ ಅನುಭವಿಸಿದೆ. ಪೂರ್ಣ ವಿವರಗಳಿಗೆ ಕೆಳಗಿನ ಕೋಷ್ಟಕವನ್ನು ನೋಡಬಹುದು.

ವಿಧಾನಸಭಾ ಕ್ಷೇತ್ರ ಗೆದ್ದ ಅಭ್ಯರ್ಥಿ/ಪಕ್ಷ ಗಳಿಸಿದ ಮತ ಸೋತ ಅಭ್ಯರ್ಥಿ/ಪಕ್ಷ ಗಳಿಸಿದ ಮತ
ಹುಕ್ಕೇರಿ ಉಮೇಶ್ ಕತ್ತಿ (ಬಿಜೆಪಿ) 83,264 ಬಸವರಾಜ ಮಠಗಾರ (ಜೆಡಿಎಸ್) 15705
ಅರಭಾವಿ ಬಾಲಚಂದ್ರ ಜಾರಕಿಹೊಳಿ (ಬಿಜೆಪಿ) 78,986 ವಿವೇಕರಾವ್ ಪಾಟೀಲ್ (ಕಾಂಗ್ರೆಸ್), 46, 123
ದೇವದುರ್ಗ ಶಿವನಗೌಡ ನಾಯಕ್ (ಬಿಜೆಪಿ) 48,266 ಭಗವಂತರಾಯ ದಳವಾಯಿ (ಕಾಂಗ್ರೆಸ್) 32,104
ಕಾರವಾರ ಆನಂದ್ ಅಸ್ನೋಟಿಕರ್ (ಬಿಜೆಪಿ) 68,163 ಸತೀಶ್ ಕೃಷ್ಣ ಶೈಲ್ (ಕಾಂಗ್ರೆಸ್) 50,820
ತುರುವೇಕೆರೆ ಎಂ ಟಿ ಕೃಷ್ಣಪ್ಪ (ಜೆಡಿಎಸ್)
55,801 ಎಂ ಡಿ ಲಕ್ಷ್ಮಿನಾರಾಯಣ (ಬಿಜೆಪಿ) 52,453
ದೊಡ್ಡಬಳ್ಳಾಪುರ ಜೆ ನರಸಿಂಹಸ್ವಾಮಿ (ಬಿಜೆಪಿ)
59,940 ಆರ್ ಜಿ ವೆಂಕಟಾಚಲಯ್ಯ (ಕಾಂಗ್ರೆಸ್) 46,849
ಮಧುಗಿರಿ ಅನಿತಾ ಕುಮಾರಸ್ವಾಮಿ (ಜೆಡಿಎಸ್) 49,768
ಕೆ ಎನ್ ರಾಜಣ್ಣ (ಕಾಂಗ್ರೆಸ್) 46,287
ಮದ್ದೂರು ಕಲ್ಪನಾ ಸಿದ್ದರಾಜು (ಜೆಡಿಎಸ್) 69,317 ಡಿ ಸಿ ತಮ್ಮಣ್ಣ (ಬಿಜೆಪಿ) 49,923

ಗೌಡರ ಮಾನ ಕಾಪಾಡಿದ ಸೊಸೆ ಅನಿತಾ
ತುರುವೇಕೆರೆ ತಿರುಗುಮುರುಗಾದ ಫಲಿತಾಂಶ?
ಮಧುಗಿರಿ, ಮದ್ದೂರಿನ ಜೆಡಿಎಸ್ ಗೆಲುವಿನ ನಗೆ?
ಕಮಲ ಪಕ್ಷಕ್ಕೆ ಪ್ಲೇವಿನ್ ಲಾಟರಿ ಹೊಡಿತು

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X