ಏಪ್ರಿಲ್ ಮೇ ನಲ್ಲಿ ಲೋಕಸಭೆ ಚುನಾವಣೆ
ನವದೆಹಲಿ, ಡಿ, 29 : ಮುಂದಿನ ತಿಂಗಳ ಜನವರಿ ಮಧ್ಯಂತರದಲ್ಲಿ ಲೋಕಸಭೆ ಚುನಾವಣೆ ನಡೆಯುವ ದಿನಾಂಕಗಳನ್ನು ನಿಗದಿಗೊಳಿಸಲಾಗುವುದು. 2009ರ ಎಪ್ರಿಲ್-ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆಗಳು ನಡೆಯುವ ಸಾಧ್ಯತೆಗಳಿವೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಎನ್ ಗೋಪಾಲಸ್ವಾಮಿ ಸ್ಪಷ್ಟ ಸುಳಿವು ನೀಡಿದರು.
ದೇಶದ ಮಿನಿ ಮಹಾಸಮರವೆಂದೇ ಬಾವಿಸಲಾಗಿದ್ದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ನಿರಾಂತಕವಾಗಿ ಮುಗಿಸಲಾಗಿದೆ. ಮುಂದಿನದು ದೇಶದಲ್ಲಿ ನಡೆಯಬೇಕಿರುವ ಸಾರ್ವತ್ರಿಕ ಚುನಾವಣೆ. ಅದರೆ ಮೇಲೆ ಆಯೋಗದ ಹೆಚ್ಚಿನ ಗಮನ ಹರಿಸಿದ್ದು, ಮುಂದಿನ ತಿಂಗಳ ಜನವರಿ ಮಧ್ಯಂತರದ ವೇಳೆಗೆ ಲೋಕಸಭೆ ಚುನಾವಣೆ ದಿನಾಂಕಗಳನ್ನು ಘೋಷಿಸಲಾಗುವುದು. ಆದರೆ ಮಾರ್ಚ್ ತಿಂಗಳಲ್ಲಿ ಲೋಕಸಭೆ ನಡೆಸಲು ಆಯೋಗ ಮುಂದಾಗಿತ್ತು. ಆದರೆ ಅದು ಮಕ್ಕಳ ಭವಿಷ್ಯ ನಿರ್ಧರಿಸುವ ಮಹತ್ವ ಕಾಲ. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯನ್ನು ಏಪ್ರಿಲ್- ಮೇ ತಿಂಗಳಲ್ಲಿ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯ ಆಯುಕ್ತ ಎನ್ ಗೋಪಾಲಸ್ವಾಮಿ ತಿಳಿಸಿದರು.
ಜಮ್ಮು ಕಾಶ್ಮೀರ ಚುನಾವಣೆಯ ಅಂತಿಮ ಹಂತದ ಮತದಾನ ಶಾಂತಿಯುವ ನಡೆದು ಫಲಿತಾಂಶ ಹೊರಬಂದ ನಂತರ ಪ್ರತಿಕ್ರಿಯೆ ನೀಡಿದ ಅವರು, ಮಧ್ಯಪ್ರದೇಶ, ರಾಜಸ್ತಾನ, ದೆಹಲಿ, ಛತ್ತೀಸ್ ಗಢ ಹಾಗೂ ಜಮ್ಮು ಕಾಶ್ಮೀರ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳನ್ನು ಯಶಸ್ವಿಯಾಗಿ ಮುಗಿಸಿದ್ದು ಹರ್ಷ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಸಿದ್ದುಗೆ ರಾಜಕೀಯ ಭವಿಷ್ಯವಿಲ್ಲ: ದೇಶಪಾಂಡೆ
ಹುಕ್ಕೇರಿ ಮರುಚುನಾವಣೆ ಪ್ರಶ್ನೆಯೇ ಇಲ್ಲ












Click it and Unblock the Notifications