ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾರ ಬಂಧುಗಳಿಗೆ ಅಲ್ಲಲ್ಲಿ ಬಾಡೂಟ

By Staff
|
Google Oneindia Kannada News

ಕರ್ನಾಟಕ, ಡಿ.24:ಚುನಾವಣಾ ಅಕ್ರಮಗಳ ನಡೆಸುವವರಿಗೆ ಮಧುಗಿರಿ ಆಡುಂಬೊಲ. ಮಧುಗಿರಿಯ ತೋವಿನಕೆರೆ ಸಮೀಪ ಸುಮಾರು 1.85 ಲಕ್ಷ ರು ಮೌಲ್ಯದ ಅಕ್ರಮ ಮದ್ಯ ಹೊಂದಿದ್ದ ಒಬ್ಬ ವ್ಯಕ್ತಿಯನ್ನು ಬುಧವಾರ ಬೆಳಗ್ಗೆ ಬಂಧಿಸಲಾಗಿದೆ. ಬೆಂಕಿಪುರ ಬಡಾವಣೆಯಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದವನ್ನು ಹಿಡಿಯಲಾಗಿದೆ.ಬಡವನಹಳ್ಳಿಯಲ್ಲಿ ಮತದಾರರನ್ನು ಓಲೈಸಲು ಬಾಡೂಟ ಹಾಕಿಸುತ್ತಿದ್ದ ಮೂವರನ್ನು ಸೆರೆ ಹಿಡಿಯಲಾಗಿದೆ.

ಪ್ರತಿದಿನ ಸಂಜೆ ಮತಯಾತ್ರೆನಂತರ ಕಾರ್ಯಕರ್ತರಿಗೆ ಹಾಗೂ ಆಯಕಟ್ಟಿನ ಆಯ್ದ ಮತದಾರರಿಗೆ ರಾಜಕೀಯ ಪಕ್ಷಗಳು ಬಾಡೂಟ ಏರ್ಪಡಿಸುವುದು ನಮ್ಮಲ್ಲಿ ವಾಡಿಕೆ. ಭರ್ಜರಿ ಬಾಡೂಟ ಸಮಾರಾಧನೆಯ ವರದಿಗಳು ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ವರದಿಯಾಗಿವೆ. ಆಯಾ ವಿಧಾನಸಭಾ ಕ್ಷೇತ್ರದ ಆಯಕಟ್ಟಿನ ಪ್ರದೇಶಗಳಲ್ಲಿನ ವೈನ್ ಶಾಪುಗಳಿಗೂ ವ್ಯಾಪಾರ ಜಾಸ್ತಿಯಾಗಿದೆ.

ಅಭ್ಯರ್ಥಿಗಳಿಗೆ ಅಬಕಾರಿ ಏಜೆಂಟ್ ಅಂತ ಒಬ್ಬನಿರುತ್ತಾನೆ. ಅವನು ನೀಡುವ ಕೂಪನ್ ಗಳನ್ನು ತೋರಿಸಿದರೆ ಕೂಪನ್ ಮೌಲ್ಯಕ್ಕೆ ತಕ್ಕಂತಹ ಮದ್ಯ ಪಡೆಯಬಹುದು.ಕೂಪನ್ ಕೊಟ್ಟರೂ ವಿಸ್ಕಿ ಕೊಡದ ಕಾರಣಕ್ಕಾಗಿ ತಗಾದೆ ತೆಗೆದ ಪ್ರಕರಣ ತುರುವೇಕೆರೆಯಿಂದ ವರದಿಯಾಗಿದೆ.

***
ಕಾರವಾರದಲ್ಲಿ ಸಿಎಂ ಡಾ. ಬಿಎಸ್ ಯಡಿಯೂರಪ್ಪ ನವರು ಪ್ರಚಾರಸಭೆಯಲ್ಲಿ ಮಾತನಾಡುತ್ತಾ, ಉಪಚುನಾವಣೆಗೆ ದೇವೇಗೌಡ ಹಾಗೂ ಅವರ ಕುಟುಂಬದವರ ಸ್ವಾರ್ಥ ರಾಜಕೀಯದಿಂದಲೇ ಉಪಚುನಾವಮೆಗಳು ಎದುರಾದವು ಎಂದು ನುಡಿದರು. ಅವರ, ಅಂದರೆ ದೇವೇಗೌಡರ ಕೆಟ್ಟ ನಿರ್ಧಾರಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಯಿತು ಎಂದು ಕಿಡಿಕಾರಿದರು.

***
ಮಧುಗಿರಿಯಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಚೆನ್ನಿಗಪ್ಪ ಪರ ಪ್ರಚಾರಕ್ಕೆಂದು ಬಂದ ಸಿದ್ದರಾಮಯ್ಯ ಅವರ ಶಿಷ್ಯ ಹಾಲಿ ಮಂತ್ರಿ ವರ್ತೂರು ಪ್ರಕಾಶ್ ಅವರು ಹೇಳಿಕೆ ನೀಡುತ್ತಾ, ಅಹಿಂದದ ಎಲ್ಲಾ ಸದಸ್ಯರು ಒಂದಾಗಿ ಚೆನ್ನಿಗಪ್ಪ ಅವರನ್ನು ಗೆಲ್ಲಿಸುವುದು ಖಂಡಿತಾ. ಜೆಡಿಎಸ್ ಸೋಲಿಸುವುದು ನಮ್ಮ ಗುರಿ ಇದಕ್ಕೆ ನಮ್ಮ ಗುರುಗಳ ( ಸಿದ್ದು) ಬೆಂಬಲವಿದೆ ಎಂದಿದ್ದಾರೆ.

*****
ಜೆಡಿಎಸ್ ನ ಪ್ರಚಾರ ಕೊಂಚ ನಿಧಾನ ಗತಿಯಿಂದ ಸಾಗುತ್ತಿದ್ದರೂ, ಮಧುಗಿರಿಯಲ್ಲಿ ಮಹಿಳಾ ಮತದಾರರನ್ನು ಸ್ವಲ್ಪ ಮಟ್ಟಿಗೆ ಸೆಳೆಯುವಲ್ಲಿ ಅನಿತಾ ಕುಮಾರಸ್ವಾಮಿ ಅವರು ಯಶಕಂಡಿದ್ದಾರೆ. ಗೌಡರ ಕೊನೆ ಸೊಸೆ ಸಂಧ್ಯಾ ರಮೇಶ್ ಅವರು ಪಾದಯಾತ್ರೆ ನಡೆಸಿ ಅಕ್ಕನ ಪರ ಮತಯಾಚಿಸಿದರು.

****
ಬೆಳಗಾವಿ: ಅರಬಾವಿ ಕ್ಷೇತ್ರದಲ್ಲಿ ಸೋದರರ ಸವಾಲ್ ಜಾರಿಯಲ್ಲಿದೆ. ಬಿಜೆಪಿಯ ಅಭ್ಯರ್ಥಿಯಾಗಿರುವ ತಮ್ಮ ಬಾಲಚಂದ್ರ ಜಾರಕಿಹೊಳಿಯನ್ನು ಬೆಂಬಲಿಸುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ಘೋಷಿಸಿದ್ದಾರೆ.

***
ಮದ್ದೂರಿನ ಕಾಂಗ್ರೆಸ್ ಅಭ್ಯರ್ಥಿ ಎಸ್ ಗುರುಚರಣ್ ಪರ ಪ್ರಚಾರದಲ್ಲಿ ಪರಮಗುರು ಎಸ್ ಎಂ ಕೃಷ್ಣ ಹಾಗೂ ಶಿಷ್ಯ ಡಿಕೆ ಶಿವಕುಮಾರ್ ಅವರ ಓಪನ್ ಜೀಪ್ ನಲ್ಲಿ ಸಂಚರಿಸಿ ಗಮನ ಸೆಳೆದರು. ಈ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕಲ್ಪನಾ ಸಿದ್ದರಾಜು ಅನುಕಂಪದ ಅಲೆಯಲ್ಲಿ ಜನರನ್ನು ತೇಲಿಸಿ ಮುಳುಗಿಸುತ್ತಿರುವುದು ಕಂಡು ಬಂತು. ಇಲ್ಲಿಂದ ಇವರ ಸವಾರಿ ತುರುವೇಕರೆಗೆ ಸಾಗಿ, ಪ್ರಚಾರ ಕಾರ್ಯ ಸಾಂಗವಾಗಿ ನಡೆದಿದೆ.
****
ಇದೀಗ ಬಂದ ವರ್ತಮಾನಗಳ ಪ್ರಕಾರ ಮಧುಗಿರಿಯ ಡಿವೈಎಸ್ಪಿ ಚನ್ನಬಸಪ್ಪ ಅವರನ್ನು ವರ್ಗಾವಣೆ ಮಾಡಲಾಗಿದೆ. ಜೊತೆಗೆ ಬಡವನಹಳ್ಳಿಯ ಪಿಎಸೈ ಶಿವಮೂರ್ತಿ ಅವರಿಗೂ ಎತ್ತಂಗಡಿಯಾಗಿದೆ.
***
ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಎಂ .ಎನ್ ವಿದ್ಯಾಶಂಕರ್ ಪ್ರಕಟಣೆ ಹೊರಡಿಸಿದ್ದು, ಮತದಾರರಲ್ಲದವರಿಗೆ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವೇಶ ನಿರ್ಬಂಧ ಎಂದು ಹೇಳಿದ್ದಾರೆ. ಗುರುವಾರ (ಡಿ.25) ಸಂಜೆ ಚುನಾವಣಾ ಪ್ರಚಾರಕ್ಕೆ ತೆರೆ ಬೀಳುತ್ತದೆ. ಶನಿವಾರ (ಡಿ. 27) ರಂದು ಮತದಾನ, ಡಿ.30 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ:
ಅರ್ಧ ಮೀಸೆ ಪಣಕ್ಕಿಟ್ಟ ಜಮೀರ್ ಅಹ್ಮದ್
ಉಪಚುನಾವಣಾ ಕಣ : ಚೂರು-ಪಾರು
ಮರುಚುನಾವಣೆಯಲ್ಲಿ ಮತ್ತೆ ಬಿಜೆಪಿ ಪ್ರಾಬಲ್ಯ ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X