ತಾಲಿಬಾನ್ ಉಗ್ರರಿಂದ ಪಾಕಿಗೆ ಬೆಂಬಲ

ಇಸ್ಲಾಮಾಬಾದ್. ಡಿ. 23 : ಭಾರತ - ಪಾಕಿಸ್ತಾನ ಉಭಯ ದೇಶಗಳ ನಡುವೆ ಯುದ್ಧದ ಕಾರ್ಮೋಡಗಳು ಸುಳಿಯತೊಡಗಿರುವ ಬೆನ್ನಲ್ಲಿಯೇ ತಾಲಿಬಾನ್ ಉಗ್ರರು ಪಾಕ್ ಗೆ ಬೆಂಬಲ ನೀಡಲು ಮುಂದೆ ಬಂದಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಮೆರಿಕ ಹಾಗೂ ನ್ಯಾಟೋ ಸಂಸ್ಥೆ ಮೊಸ್ಟ್ ವಾಟೆಂಡ್ ಪಟ್ಟಿಯಲ್ಲಿರುವ ತಾಲಿಬಾನ್ ಉಗ್ರರು ಬಹಿರಂಗವಾಗಿ ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸಿರುವ ಉಭಯ ದೇಶಗಳ ಮಧ್ಯೆ ಮತ್ತಷ್ಟು ಕಂದಕ ಸೃಷ್ಟಿಸಿದಂತಾಗಿದೆ.

ಮುಸ್ಲಿಂ ವಿರೋಧಿ ರಾಷ್ಟ್ರವಾಗಿರುವ ಭಾರತದ ವಿರುದ್ಧ ಪಾಕಿಸ್ತಾನ ಯುದ್ಧ ಸಾರಿದಲ್ಲಿ ವಿಶೇಷ ತರಬೇತಿ ಪಡೆದ ಸಾವಿರಾರು ತಾಲಿಬಾನ್ ಯೋಧರು ಪಾಕ್ ಪರ ನಿಲ್ಲಲಿದ್ದಾರೆ ಎಂದು ತೆಹ್ರೀಕ್ ಇ ತಾಲಿಬಾನ್ ಸಂಘಟನೆಯ ಮುಖ್ಯಸ್ಥ ಬೈತುಲ್ಲಾ ಮೆಹಸೂದ್ ಪಾಕಿಸ್ತಾನದ ಮಾಧ್ಯಮ ಕಚೇರಿಗೆ ದೂರವಾಣಿ ಮೂಲಕ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ತಾಲಿಬಾನ್ ಯೋಧರ ಹತ್ತಿರ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ. ಗುಂಡು ನಿರೋಧಕ, ಸ್ಫೋಟಕ ವಾಹನ ಸೇರಿ ಮಾನವ ಬಾಂಬರ್ ಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಭಾರತದ ಸೈನಿಕರು ಗಡಿ ಪ್ರವೇಶದೊಳಗೆ ನುಸುಳದಂತೆ ಎಲ್ಲ ವ್ಯವಸ್ಥೆ, ಸಹಾಯ ಸಹಕಾರವನ್ನು ಪಾಕಿಸ್ತಾನದ ಸೈನಿಕರಿಗೆ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದು ಜೀಹಾದಿ ಸಮಯ, ಯಾವ ಮುಸ್ಲಿಮರೂ ಧೃತಿಗೆಡಬೇಕಿಲ್ಲ. ಧರ್ಮ ಯುದ್ಧದಲ್ಲಿ ವೈರಿಗಳನ್ನು ಬಗ್ಗು ಬಡಿದು ಜಯ ನಮ್ಮದಾಗಿಸಿಕೊಳ್ಳೋಣ ಎಂದು ಬೈತುಲ್ಲಾ ಮೆಹಸೂದ್ ಘೋಷಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ಸೇನಾ ಪಡೆ ಮುಖ್ಯಸ್ಥ ಸಿಯಾಚಿನ್ ಗೆ ದೌಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+