ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋಲಿಯೋ ಲಸಿಕೆ ಹಾಕಿಸಿಕೊಂಡ ಮಕ್ಕಳು ಅಸ್ವಸ್ಥ?

By Staff
|
Google Oneindia Kannada News

ಬೆಂಗಳೂರು, ಡಿ. 22 : ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿಕೊಂಡರೆ ಮಕ್ಕಳು ಅಸ್ವಸ್ಥರಾಗುತ್ತಾರೆಯೇ? ಇಂಥದ್ದೊಂದು ವದಂತಿಯಿಂದ ನಗರದ ಜನತೆ ತೀವ್ರವಾಗಿ ಆತಂಕಗೊಂಡು ವಿವಿಧ ಆಸ್ಪತ್ರೆಗಳಿಗೆ ಧಾವಿಸಿದ ಘಟನೆ ಭಾನುವಾರ ಮಧ್ಯರಾತ್ರಿ ನಡೆದಿದೆ.

ಬೌರಿಂಗ್, ನಾರಾಯಣ ಹೃದಯಾಲಯ, ವಿಕ್ಟೋರಿಯಾ, ಮಹಾವೀರ್ ಜೈನ್, ಶಿಫಾ ಹಾಗೂ ಮಲ್ಲಿಗೆ ಆಸ್ಪತ್ರೆ ಮುಂದೆ ಜನಜಾತ್ರೆಯೇ ನೆರೆದಿತ್ತು. ನಗರದ ವಿವಿಧ ಮಧ್ಯರಾತ್ರಿ 1 ಗಂಟೆಯಲ್ಲೂ ಜನ ಗುಂಪುಗುಂಪಾಗಿ ಸೇರಿದ್ದು, ಅಸ್ಪತ್ರೆಗಳತ್ತ ಧಾವಿಸುತ್ತಲೇ ಇದ್ದರು ಆದರೆ ಇಷ್ಟೆಲ್ಲ ಗೊಂದಲ, ಆತಂಕದ ಸ್ಥಿತಿ ನೆಲೆಸಿದರೂ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ತೆರಳದೆ, ಸೂಕ್ತ ಉತ್ತರ ನೀಡದೆ ಇರುವುದು ಜನರ ಆತಂಕಕ್ಕೆ ಇನ್ನಷ್ಟು ಹೆಚ್ಚಲು ಕಾರಣವಾಯಿತು. ಆದರೆ, ಇದು ಸುಳ್ಳು ಎಂದು ವೈದ್ಯರು ನೂರು ಬಾರಿ ಹೇಳಿದರೂ ಪೋಷಕರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಹೇಳುವುದನ್ನೂ ಕೇಳುವ ತಾಳ್ಮೆಯೂ ಅವರಲ್ಲಿ ಇರಲಿಲ್ಲ.

ಬೆಂಗಳೂರು ಮಾತ್ರವಲ್ಲ, ಮೈಸೂರಿನಲ್ಲೂ ಇಂತಹದೇ ಆತಂಕ ಮಡುಗಟ್ಟಿತ್ತು. ಅಲ್ಲಿನ ಚೆಲುವಾಂಬಾ, ಮಿಷನ್ ಆಸ್ಪತ್ರೆಗಳತ್ತಲೂ ನೂರಾರು ಜನರು ಧಾವಿಸಿದರು. ಆನೇಕಲ್, ಸರ್ಜಾಪುರ ಭಾಗದಲ್ಲೀ ಇಂತಹ ವದಂತಿ ಯಿಂದ ಜನರು ಗಾಬರಿ ಪಡುವಂತಾಯಿತು. ತಮಿಳುನಾಡಿನಲ್ಲಿ ಪೋಲಿಯೋ ಲಸಿಕೆ ಹಾಕಿಸಿಕೊಂಡ ಮಗುವೊಂದು ಅಸ್ವಸ್ಥಗೊಂಡಿದೆ ಎಂಬ ಸುದ್ದಿಯೇ ಈ ಎಲ್ಲಾ ಆವಾಂತರಕ್ಕೆ ಕಾರಣವಾಗಿದೆ.

(ಏಜೆನ್ಸೀಸ್)

ಡಿಸೆಂಬರ್ 21ರಂದು ಪಲ್ಸ್ ಪೋಲಿಯೊ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X