2009 ಕರಾಳ ಆರ್ಥಿಕ ವರ್ಷ : ಐಎಂಎಫ್
ಲಂಡನ್, ಡಿ. 22 : ಆರ್ಥಿಕ ಬಿಕ್ಕಟ್ಟಿಗೆ ಸರಿಯಾದ ಸೂತ್ರ ಕಂಡುಹಿಡಿಯುವಲ್ಲಿ ಸರ್ಕಾರಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ಬಿಕ್ಕಟ್ಟಿನಿಂದ ಗಾಯವಾಗಿರುವ ಹಣಕಾಸು ಕ್ಷೇತ್ರದ ಮೇಲೆ ಮತ್ತೆ ಬರೆ ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಐಎಂಎಫ್ (International Monetary Fund) ಮುಖ್ಯಸ್ಥ ಡೊಮಿನಿಕ್ ಸ್ಟ್ರಾಸ್ -ಕನ್ ಅಭಿಪ್ರಾಯಪಟ್ಟಿದ್ದಾರೆ.
ಬಿಬಿಸಿ ವಾರ್ತಾ ವಾಹಿನಿ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ಮುಂದಿನ ದಿನಗಳಲ್ಲಿ ಐಎಎಫ್ ಹಣಕಾಸು ಕ್ಷೇತ್ರಕ್ಕೆ ಸೇರಿದಂತೆ ಕೆಲ ಅನಿವಾರ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದರು. ಹಣಕಾಸು ಕ್ಷೇತ್ರಕ್ಕೆ 2009ರಲ್ಲಿ ಕೂಡ ಭಾರಿ ಪೆಟ್ಟು ಬೀಳುವ ಸಾಧ್ಯತೆಗಳಿವೆ. ಸದ್ಯದ ಪರಿಸ್ಥಿತಿ ಅವಲೋಕಿಸಿದರೆ, 2009 ನಿಜವಾಗಲೂ ಹಣಕಾಸು ಕ್ಷೇತ್ರಕ್ಕೆ ತುಂಬಾ ಅಪಾಯಕಾರಿ ವರ್ಷವೇ ಆಗಿದೆ ಎಂದು ಸ್ಟ್ರಾಸ್ ಹೇಳಿದರು.
ಇಂದಿನ ಆರ್ಥಿಕ ಪರಿಸ್ಥಿತಿಯನ್ನು ಸಮರ್ಥವಾಗಿ ಹೋಗಲಾಡಿಸಲು 1.2 ಟ್ರಲಿಯನ್ ಡಾಲರ್ ಹಣದ ಅವಶ್ಯಕತೆ ಇದೆ. ಇದೀಗ ಹಣಕಾಸು ಕ್ಷೇತ್ರದಲ್ಲಿ ಉಂಟಾಗಿರುವ ಅಲ್ಲೋಲಕಲ್ಲೋಲಕ್ಕೆ ತೆಗೆದುಕೊಂಡಿರುವ ಕ್ರಮಗಳು ಸಾಕಾಗುವುದಿಲ್ಲ ಎಂದು ಸ್ಟ್ರಾಸ್ ಹೇಳಿದರು.
(ಏಜನ್ಸೀಸ್)


Click it and Unblock the Notifications
