ಮದ್ದೂರು: ಬಿಜೆಪಿಯ ಅಕ್ರಮ ಸೀರೆಗಳು ವಶ
ಮದ್ದೂರು, ಡಿ. 22 : ಉಪಚುನಾವಣೆಗಳು ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಅನೇಕ ಅಮಿಷಗಳನ್ನು ಒಡ್ಡತೊಡಗಿವೆ. ಚುನಾವಣಾ ಆಯೋಗ ಅಕ್ರಮಗಳ ಮೇಲೆ ಹದ್ದಿನ ಕಣ್ಣಿರಿಸಿದ್ದರೂ ರಾಜಕೀಯ ಪಕ್ಷಗಳು ಮಾತ್ರ ಹಗ್ಗ ಕಡಿಯುವ ಚಾಳಿಯನ್ನು ಬಿಡುತ್ತಿಲ್ಲ.
ಭಾನುವಾರ ಮಧುಗಿರಿಯಲ್ಲಿ ಬಹಿರಂಗವಾಗಿ ಮದ್ಯವನ್ನು ಹಂಚಿದ್ದ ಬಿಜೆಪಿ ಮುಖಂಡರು ಸೋಮವಾರ ಮದ್ದೂರಿನ ಕಬಕನಹಳ್ಳಿಯಲ್ಲಿ ಮತದಾರರಿಗೆ ಹಂಚಲು ದಾಸ್ತಾನು ಮಾಡಿದ್ದ ಸುಮಾರು 5200 ಸೀರೆಗಳನ್ನು ಚುನಾವಣೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಚುನಾವಣಾ ಅಧಿಕಾರಿಗಳು ಮದ್ದೂರಿನ ಬಿಜೆಪಿ ಮುಖಂಡ ರವಿಶಂಕರ ಅವರ ಮನೆಯಲ್ಲಿ ಈ ಸೀರೆಗಳು ದೊರೆತಿವೆ.
ಭಾನುವಾರ ಕೂಡ ಮದ್ದೂರಿನ ಬೆಸಗರಹಳ್ಳಿಯಲ್ಲಿ 5000 ಸೀರೆಗಳನ್ನು ವಶಪಡಿಸಿಕೊಂಡಿದ್ದರು. ಆ ಸೀರೆಗಳು ಕೂಡ ಬಿಜೆಪಿಗೆ ಸಂಬಂಧಿಸಿದ್ದು ಎಂದು ಚುನಾವಣಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಅಮಿಷ ಒಡ್ಡುವುದರಲ್ಲಿ ಹಿಂದೆ ಬಿದ್ದಿಲ್ಲ. ಸದ್ದು ಗದ್ದಲವಿಲ್ಲದೇ ಮತದಾರರ ಓಲೈಕೆಯ ಕೆಲಸ ನಿರಂತರವಾಗಿ ನಡೆದಿದೆ.
(ದಟ್ಸ್ ಕನ್ನಡ ವಾರ್ತೆ)
ಉಪಚುನಾವಣಾ ಕಣ : ಚೂರು-ಪಾರು
ಬಿಜೆಪಿಗೆ ಸಿದ್ದು ಬಂದರೆ ಸ್ವಾಗತ: ಶ್ರೀರಾಮುಲು


Click it and Unblock the Notifications
