ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಸ್ ಶುಲ್ಕ, ಇಂದು ಇಳಿಕೆ ಸಾಧ್ಯತೆ

By Staff
|
Google Oneindia Kannada News

ಬೆಂಗಳೂರು ಡಿ. 22 : ಸಾರ್ವಜನಿಕರ ಪ್ರತಿಭಟನೆ ಸೇರಿದಂತೆ ರಾಜಕೀಯ ಪಕ್ಷಗಳ ಮುಖಂಡರ ಬೀದಿ ಕಾಳಗಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಪೆರಿಫೆರಲ್ ರಸ್ತೆಯಲ್ಲಿ ವಿಧಿಸುತ್ತಿದ್ದ ದುಬಾರಿ ಶುಲ್ಕವನ್ನು ಇಳಿಕೆ ಮಾಡಲು ಉದ್ದೇಶಿಸಲಾಗಿದ್ದು. ಇಂದು ಸಂಜೆ ವೇಳೆಗೆ ನೈಸ್ ಕಂಪನಿಯಿಂದ ಇನ್ನೊಂದು ಪರಿಷ್ಕರಣೆಯ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಶುಲ್ಕ ಎಷ್ಟು ಇಳಿಕೆ ಮಾಡಲಾಗುತ್ತಿದೆ ಎನ್ನುವುದು ತಿಳಿದು ಬಂದಿಲ್ಲ, ಒಟ್ಟಿನಲ್ಲಿ ಇಳಿಕೆ ಖಚಿತ, ಸಂಜೆ ವೇಳೆಗೆ ಈ ಕುರಿತು ಅಧಿಕೃತವಾಗಿ ಘೋಷಿಸಲಾಗುವುದು ಎಂದು ನೈಸ್ ಕಂಪನಿಯ ಮೂಲಗಳು ತಿಳಿಸಿವೆ. ಪೆರಿಫೆರಲ್ ರಸ್ತೆಗೆ ನೈಸ್ ಕಂಪನಿ ವಿಧಿಸಿರುವ ಶುಲ್ಕದ ಬಗ್ಗೆ ಭಾರಿ ಅಪಸ್ವರ ಎದ್ದಿವೆ. ಸಾರ್ವಜನಿಕರು ಈಗಾಗಲೇ ಟೋಲ್ ಕಚೇರಿಯನ್ನು ಧ್ವಂಸಗೊಳಿಸಿದರೆ, ಪ್ರತಿಪಕ್ಷಗಳು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ.

ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಂತೂ ಒಂದು ಹೆಜ್ಜೆ ಮುಂದೆ ಹೋಗಿ ಈ ಪ್ರಕರಣವನ್ನು ಬೇರೆಯದೆ ದಿಕ್ಕಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎನ್ನುವ ಆರೋಪಗಳು ಸರ್ಕಾರದ ವಲಯದಿಂದ ಕೇಳಬರತೊಡಗಿದೆ. ಭಾನುವಾರ ಕನ್ನಡ ಸೇನೆ ಹಾಗೂ ಭಾರತ ಲಾರಿ ಕ್ಲಿನರ್ ಸಂಘಗಳು ಪ್ರತಿಭಟನೆ ನಡೆಸಿವೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ದೇವೇಗೌಡರು ಮಾಡಿರುವ ನೇರ ಆರೋಪ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದರೆ, ಯಡಿಯೂರಪ್ಪ ಅವರಿಗೆ ಮಾನವೆಲ್ಲದೆ ಮಾನನಷ್ಟ ಮೊಕದ್ದಮೆ ಹೂಡಲು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ನೈಸ್ ರಸ್ತೆ ದುಬಾರಿ ಶುಲ್ಕಕ್ಕೆ ಜನರ ಆಕ್ರೋಶ
ನೈಸ್ ಕಾರಿಡಾರ್ ರಸ್ತೆ ತೆರಿಗೆ ಸಂಗ್ರಹ ವಿವರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X