• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾಗ್ಯಲಕ್ಷ್ಮಿ ನಮ್ಮ ಮನೆಗೂ ಬಾರಮ್ಮ

By Staff
|

ಪ್ರಸಕ್ತ ಸರ್ಕಾರದ ಅಚ್ಚುಮೆಚ್ಚಿನ ಕಾರ್ಯಕ್ರಮ ಬಡಕುಟುಂಬದ ಹೆಣ್ಣುಮಕ್ಕಳಿಗಾಗಿ ರೂಪಿಸಿರುವ ಭಾಗ್ಯ ಲಕ್ಷ್ಮಿ ಯೋಜನೆ. ಕಳೆದ ಎರಡು ವರ್ಷಗಳ ಕೆಳಗೆ ರೂಪಿಸಿದ ಈ ಯೋಜನೆಗೆ ಜನಸಾಮಾನ್ಯರಿಂದ ಅತಿ ಉತ್ತಮ ಪ್ರತಿಕ್ರಿಯೆ ದೊರಕಿದೆ.

ಹೆಣ್ಣುಮಕ್ಕಳನ್ನು ಕುರಿತಂತೆ, ಅವರ ಶಿಕ್ಷಣ, ಆರೋಗ್ಯಪೂರ್ಣ ಬೆಳವಣಿಗೆ ಬಗ್ಗೆ ಇರುವ .ಸಮಾಜದ ತಾತ್ಸಾರಭಾವನೆಯನ್ನು ದೂರಮಾಡುವುದು, ಬಾಲಕಾರ್ಮಿಕ, ಹೆಣ್ಣುಭ್ರೂಣ ಹತ್ಯೆ,ಮಕ್ಕಳ ಮಾರಾಟ, ಬಾಲ್ಯ ವಿವಾಹ ಮುಂತಾದ ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನ ಮಾಡುವ ಆಶಯ ಈ ಯೋಜನೆಯ ಹಿಂದಿದೆ.

ಹಾಗಾಗಿಯೇ ಸರ್ಕಾರವು ಈ ವರ್ಷ ಈಯೋಜನೆಯಡಿ 2 ಲಕ್ಷ ಹೆಣ್ಣುಮಕ್ಕಳ ಹೆಸರಿನಲ್ಲಿ ಠೇವಣಿ ಹೂಡಿ ಬಾಂಡ್ ವಿತರಿಸಲು ರು.266 ಕೋಟಿ ಆಯವ್ಯಯದಲ್ಲಿ ಒದಗಿಸಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ 01.08.2008 ರ ನಂತರ ಜನಿಸಿದ ಹೆಣ್ಣು ಮಗುವಿಗೆ ಈ ಸೌಲಭ್ಯನೀಡಲಾಗುತ್ತದೆ.

ಸರ್ಕಾರವು ರು.10,000 ಗಳನ್ನು ಭಾರತೀಯ ಜೀವ ವಿಮಾ ನಿಗಮಕ್ಕೆ ಪಾವತಿಸುತ್ತಿದ್ದು ಮಗುವಿಗೆ 18 ವರ್ಷ ತುಂಬಿದಾಗ ಬಡ್ಡಿ ಹಣವೂ ಸೇರಿ 1ಲಕ್ಷ ರುಗಳಮೊತ್ತವು ಮಗುವಿಗೆ ದೊರೆಯುತ್ತದೆ.

ಯಾರು ಈ ಸೌಲಭ್ಯ ಪಡೆಯಲು ಅರ್ಹರು?

31.03.2006 ರ ನಂತರ ಬಡತನ ರೇಖೆಯಕೆಳಗಿರುವ ಕುಟುಂಬದಲ್ಲಿ ಜನಿಸಿದ ಯಾವುದೇ ಹೆಣ್ಣುಮಗು. ಅಂತಹ ಹೆಣ್ಣುಮಗುವಿನ ಜನನ ವಿವರ ಕಡ್ಡಾಯವಾಗಿ ನೋಂದಣಿಯಾಗಿರಬೇಕು.

ಆರೋಗ್ಯ ಇಲಾಖೆಯ ಕಾರ್ಯಕ್ರಮದನ್ವಯ ಎಲ್ಲಾ ರೋಗನಿರೋಧಕ ಲಸಿಕೆಗಳನ್ನೂ ನೀಡಿರಬೇಕು. ಅಂಗನವಾಡಿ ಕೇಂದ್ರದಲ್ಲಿ 6ವರ್ಷದವರೆಗೆ ದಾಖಲಾಗಿರಬೇಕು. ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ ದಾಖಲಾಗಿರಬೇಕು. ಹೆಣ್ಣುಮಗುವಿನ ತಂದೆತಾಯಿ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿರಬೇಕಲ್ಲದೆ ಮಕ್ಕಳ ಸಂಖ್ಯೆ ಮೂರನ್ನು ಮೀರಿರಬಾರದು. ಮಗುವು ಬಾಲಕಾರ್ಮಿಕರಾಗುವಂತಿಲ್ಲ. 18 ವರ್ಷ ತುಂಬುವವರೆಗೂ ಮದುವೆಯಾಗುವಂತಿಲ್ಲ.

ಫಲಾನುಭವಿಗಳನ್ನು ಗುರ್ತಿಸುವವರಾರು?

ಗ್ರಾಮ ಮಟ್ಟದಲ್ಲಿ ಅಂಗನವಾಡಿಗಳು ಫಲಾನುಭವಿಗಳನ್ನು ಗುತಿಸುವ ಸಂಸ್ಥೆಗಳಾಗಿವೆ. ಮಹಿಳೆ ಮತ್ತು ಮಕ್ಕಳ ಆಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅಂಗನವಾಡಿಗಳ ಮುಖಾಂತರ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಾರೆ. ತಂದೆತಾಯಿಗಳು ಅಥವಾ ಮಗುವಿನ ಸಹಜ ಪೋಷಕರು ಅರ್ಜಿಯನ್ನು ಸಂಬಂಧಿಸಿದ ಇಲಾಖೆಗಳಿಂದ ಪಡೆದ ಜನನ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣಪತ್ರದೊಂದಿಗೆ (ಬಡತನ ರೇಖೆಯಿಂದ ಕೆಳಗಿರುವ ಬಗ್ಗೆ) ನೀಡಬೇಕು. ಈವಿವರಗಳನ್ನು ಪರಿಶೀಲಿಸಿದ ನಂತರ ಇಲಾಖೆಯ ಮೇಲಧಿಕಾರಿಗಳಿಗೆ ಕಳುಹಿಸುತ್ತಾರೆ. ಅವರು ಭಾರತೀಯ ಜೀವ ವಿಮಾ ನಿಗಮಕ್ಕೆ ಮೊತ್ತ ಭರ್ತಿ ಮಾಡಲು ಕಳಿಸಿ ಕೊಡುತ್ತಾರೆ.

01.08.2008 ರ ನಂತರ ಜನಿಸಿದ ಮಕ್ಕಳಿಗೆ ಅನ್ವಯಿಸುವಂತೆ ಹೆಚ್ಚಿನ ಅನುಕೂಲತೆಗಳನ್ನು ದೊರಕಿಸುವ ರೀತಿಯಲ್ಲಿ ಸರ್ಕಾರವು ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಜಾರಿ ಮಾಡಿದೆ. ಜೀವವಿಮಾ ನಿಗಮವು ಹಲವಾರು ಹೊಸ ಕೊಡುಗೆಗಳನ್ನು ಇದರಡಿ ನೀಡುವಂತೆ ಸರ್ಕಾರವು ಹೊಂದಾಣಿಕೆ ಮಾಡಿಕೊಂಡಿದೆ. 18 ವರ್ಷ ತುಂಬಿದ ನಂತರ ಮಗುವಿಗೆ 1 ಲಕ್ಷ ರು ಗಳ ಇಡಿ ಮೊತ್ತವನ್ನು ನೀಡುವುದು; ಮಗುವಿಗೆ 15 ವರ್ಷವಾಗಿದ್ದು ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತೀರ್ಣರಾಗಿ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಉದ್ದೇಶವಿದ್ದಲ್ಲಿ 50,000ರು ಗಳನ್ನು ಬಿಡುಗಡೆ ಮಾಡಲಾಗುತ್ತದೆ.

ತಂದೆ/ತಾಯಿ, ಪೋಷಕರು/ಭೂರಹಿತ ಗ್ರಾಮೀಣ ಕುಟುಂಬವಾಗಿದ್ದಲ್ಲಿ ಅವರಿಗೆ ಜನಶ್ರೀ ಜೀವವಿಮಾ ಯೋಜನೆಯಡಿಯಲ್ಲಿ ರಕ್ಷಣೆ ಒದಗಿಸುವುದಲ್ಲದೆ ಮಗುವಿನ ತಂದೆ/ತಾಯಿ ಮರಣ ಹೊಂದಿದಲ್ಲಿ ರು 75,000 ಗಳ ವಿಮಾ ರಕ್ಷಣಾ ಮೊತ್ತವು ಮಗುವಿಗೆ ದೊರೆಯುತ್ತದೆ.

ಒಂದನೇ ಮಗುವಿಗೆ ಸರ್ಕಾರವು 19,300 ರು ಗಳ ಠೇವಣಿಯನ್ನು ಜೀವವಿಮಾ ನಿಗಮಕ್ಕೆ ಕಟ್ಟುತ್ತಿದ್ದು ಅಂತಿಮ ಠೇವಣಿ ಮೊತ್ತ ರು 1,00,090 ದೊರಯುತ್ತದೆ. ಎರಡನೇ ಮಗುವಿಗೆ ಸರ್ಕಾರ 19,100 ರು ಗಳನ್ನು ಕಟ್ಟುತ್ತಿದ್ದು ಒಟ್ಟು 1,00,062ರು ಗಳನ್ನು ಅಂತಿಮ ಠೇವಣಿ ದೊರೆಯಲಿದೆ.2006-07 ರಲ್ಲಿ 302 ಲಕ್ಷ ಮಕ್ಕಳಿಗೆ 2007-08 ನೇ ಸಾಲಿನಲ್ಲಿ 2.6 ಲಕ್ಷ ಮಕ್ಕಳನ್ನು ಈ ಸೌಲಭ್ಯದಡಿ ಗುರುತಿಸಿ ವಿತರಣೆ ಮಾಡಿದೆ. ಪ್ರಸಕ್ತ ವರ್ಷ ಈವರೆಗೆ 19,000 ಮಕ್ಕಳನ್ನು ಗುರುತಿಸಲಾಗಿದೆ.

ಮಾಹಿತಿ: ಟಿ.ಸಿ. ಕಾತ್ಯಾಯಿನಿ, ಹಿರಿಯ ಸಹಾಯಕ ನಿರ್ದೇಶಕರು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more