ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಾಪ ನುಂಗಿದ ಅಂತುಳೆ ಪ್ರಕರಣದ ಗಲಾಟೆ

By Staff
|
Google Oneindia Kannada News

ನವದೆಹಲಿ. ಡಿ. 22 : ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಸಾವಿನ ಕುರಿತಾದ ವಿವಾದಾತ್ಮಕ ಹೇಳಿಕೆ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸದನ ಕಲಾಪ ನುಂಗಿ ಹಾಕಿತಲ್ಲದೆ, ತೀವ್ರ ಕೋಲಾಹಲವನ್ನೇ ಸೃಷ್ಟಿಸಿತು. ಬಿಜೆಪಿ ಮತ್ತು ಶಿವಸೇನೆ ಸಂಸದರು ಕೇಂದ್ರ ಸಚಿವ ಎ.ಆರ್ ಅಂತುಳೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕೇಂದ್ರ ಅಲ್ಪಸಂಖ್ಯಾತರ ಇಲಾಖೆ ಸಚಿವ ಅಬ್ಧುಲ್ ರೆಹೆಮಾನ್ ಅಂತುಳೆ ಅವರ ಸಂಸತ್ತಿನಿಂದ ವಜಾಗೊಳಿಸಬೇಕು ಎಂದು ಪ್ರತಿಭಟನೆ ನಡೆಸಿದರು. ಇದರಿಂದ ಉಭಯ ಸದನಗಳಲ್ಲಿ ಕಾರ್ಯಕಲಾಪಗಳು ಎರೆಡೆರಡು ಬಾರಿ ಮುಂದೂಡಲಾಯಿತು. ಕಳೆದು ತಿಂಗಳು ಮುಂಬೈನಲ್ಲಿ ನಡೆದ ಭಯೋತ್ಪಾದನೆಯಲ್ಲಿ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಕೇಂದ್ರ ಸಚಿವ ಎ ಆರ್ ಅಂತುಳೆ, ಮಾಲೇಗಾಂವ್ ಸ್ಫೋಟಕ್ಕೂ ಮುಂಬೈ ಭಯೋತ್ಪಾದನೆಗೂ ಸಂಬಂದ ಕಲ್ಪಿಸಿ ಮಾತನಾಡಿದ್ದರು.

ಅಂತುಳೆ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ಟೀಕೆಗೆ ವ್ಯಕ್ತವಾಗಿತ್ತು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಭಾರಿ ಒತ್ತಡ ಹೆಚ್ಚಿದ್ದರಿಂದ ಅಂತುಳೆ ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಮಂತ್ರಿ ಸಲ್ಲಿಸಿದ್ದರು. ಆದರೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ರಾಜೀನಾಮೆ ಪತ್ರವನ್ನು ಸ್ವೀಕರಿಸಿರಲಿಲ್ಲ. ಇಂದು ಸಂಸತ್ತಿನ ಉಭಯ ಸದನಗಳಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಯಿತು.

ಇಂದು ಬೆಳಗ್ಗೆ ಲೋಕಸಭೆ ಮತ್ತು ರಾಜ್ಯಸಭೆ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಮತ್ತು ಶಿವಸೇನೆ ಸಂಸದರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶದ ಸಾರ್ವಭೌಮತೆಗೆ ದಕ್ಕೆ ತರುವಂತಹ ಮಾತುಗಳನ್ನಾಡಿರುವ ಅಂತುಳೆ ಅವರನ್ನು ಸಂಸತ್ತಿನಿಂದಲೇ ವಜಾಗೊಳಿಸಬೇಕು ಎಂದು ಪಟ್ಟುಹಿಡಿದರು. ಅದರಿಂದ ಸಂಸತ್ತಿನಲ್ಲಿ ತೀವ್ರ ಕೋಲಾಹಲ, ಗೊಂದಲ ಉಂಟಾಯಿತು. ಇದರಿಂದ ಲೋಕಸಭೆಯ ಕಲಾಪವನ್ನು ಒಂದು ಬಾರಿ ಮುಂದೂಡಿದರೆ, ಎರಡು ಬಾರಿ ರಾಜ್ಯಸಭೆಯ ಕಲಾಪವನ್ನು ಮುಂದೂಡಲಾಯಿತು.

(ದಟ್ಸ್ ಕನ್ನಡ ವಾರ್ತೆ)
ಎಟಿಎಸ್ ನ ಕರ್ಕರೆ ಕೊಂದಿದ್ದು ಹಿಂದುಗಳೆ ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X