ತಾಜ್, ಒಬೆರಾಯ್ ಡಿ.21 ಕ್ಕೆ ಪುನರಾರಂಭ

Taj, Oberoi reopen on Sunday Dec 21
ಮುಂಬೈ, ಡಿ. 19 : ಕಳೆದ ತಿಂಗಳು ಉಗ್ರರ ಅಟ್ಟಹಾಸಕ್ಕೆ ತುತ್ತಾಗಿದ್ದ ಐಷಾರಾಮಿ ತಾಜ್ ಹೋಟೆಲ್ ಹಾಗೂ ಹೋಟೆಲ್ ಟ್ರೈಡೆಂಟ್ ಒಬೆರಾಯ್ ಇದೀಗ ಮತ್ತೆ ಸಾರ್ವಜನಿಕ ಬಳಕೆ ರೆಡಿಯಾಗುತ್ತಿದೆ. ಡಿ. 21 ರಿಂದ ವಿದ್ಯುಕ್ತವಾಗಿ ಜನರ ಬಳಕೆಗೆ ನೀಡಲಾಗುವುದು ಎಂದು ಉಭಯ ಸಂಸ್ಥೆಯ ಮೂಲಗಳು ತಿಳಿಸಿವೆ. ತಾಜ್ ಹೋಟೆಲ್ ಎಂದರೆ ಅನೇಕರಿಗೆ ಸ್ವರ್ಗ, ಈ ಹೋಟೆಲ್ ನಲ್ಲಿ ಕುಣಿದು ಕುಪ್ಪಳಿಸುವುದೆಂದರೆ ಹೆಮ್ಮೆಯ ಸಂಕೇತ.

ತಾಜ್ ಮತ್ತು ಒಬೆರಾಯ್ ಆಡಳಿತ ಮಂಡಳಿ ಇದೇ 21 ರಂದು ತಾಜ್ ಹಾಗೂ ಒಬೆರಾಯ್ ಹೋಟೆಲ್ ನ್ನು ಮತ್ತೆ ಸಾರ್ವಜನಿಕ ಬಳಕೆಗೆ ನೀಡಲಾಗುತ್ತಿದೆ ಎಂದು ಪ್ರಕಟಣೆ ನೀಡಿದ ಬೆನ್ನಲ್ಲೇ ಮುಂಬೈನ ಹಣದ ಥೈಲಿಯ ಮಂದಿ ಕುಣಿದಾಡುತ್ತಿದ್ದಾರೆ. ತಾಜ್ ಮತ್ತು ಒಬೆರಾಯ್ ಇವೆರಡು ನಮ್ಮ ಮನೆ ಇದ್ದ ಹಾಗೆ, ಈ ಹೋಟೆಲ್ ನಲ್ಲಿ ತಂಗಿ ವಿಶ್ರಾಂತಿ ಪಡೆದರೆ ಎಂಥದೂ ನಿರಾಳ ಭಾವನೆ ಎನ್ನುವ ಮಾತುಗಳನ್ನಾಡುತ್ತಾರೆ.

ಉಗ್ರರ ಹಿಂಸಾಚಾರದಿಂದ ನಲುಗಿದ್ದ ತಾಜ್ ಮತ್ತು ಒಬೆರಾಯ್ ಹೋಟೆಲ್ ಸುಣ್ಣ ಬಣ್ಣ ಬಡಿದುಕೊಂಡು ಮತ್ತೆ ಸೇವೆಗೆ ಸಜ್ಜಾಗಿವೆ. ತಾಜ್ ಹೋಟೆಲ್ ಇದೇ 21 ರಂದು ಕೆಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಮುಖ್ಯವಾಗಿ ಕಾರ್ಪೊರೇಟ್ ಧಣಿಗಳಾದ ಐಸಿಐಸಿಐ ಬ್ಯಾಂಕ್ ನ ಸಿಇಒ ಕೆ ವಿ ಕಾಮತ್, ಮುಖೇಶ ಅಂಬಾನಿ, ದೀಪಕ್ ಪಾರೆಕ್, ಆನಂದ ಮಾನ್ವಾನಿ, ರಾಣಾ ಕಪೂರ್, ಪತ್ರಕರ್ತೆ ಶೋಭಾ ಡೇ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.

ತಾಜ್ ಹೋಟೆಲ್ ನ ಎಲ್ಲ 565 ಕೊಠಡಿಗಳು ಸದ್ಯಕ್ಕೆ ಸಾರ್ವಜನಿಕ ಸೇವೆಗೆ ಲಭ್ಯವಿಲ್ಲ. ಇನ್ನು ಕಾಮಗಾರಿಗೆ ನಡೆಯತೊಡಗಿದೆ. ಒಟ್ಟು ತಾಜ್ ಹೋಟೆಲ್ ನಲ್ಲಿ 1800 ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು, ಇಂದಿನ ಮಟ್ಟಿಗೆ ಎಲ್ಲರಿಗೂ ಕೆಲಸ ನೀಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ತಾಜ್ ಆಡಳಿತ ಮಂಡಳಿ ತಿಳಿಸಿದೆ.

(ದಟ್ಸ್ ಕನ್ನಡ ವಾರ್ತೆ)
ಟಾಟಾರಿಂದ ಭಯೋತ್ಪಾದಕ ನಿಗ್ರಹ ಪಡೆ ರಚನೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+