ನೈಸ್ ರಸ್ತೆಯ ದುಬಾರಿ ಶುಲ್ಕಕ್ಕೆ ಆಕ್ರೋಶ

ಬೆಂಗಳೂರು, ಡಿ. 19 : ಬೆಂಗಳೂರು-ಮೈಸೂರು ಕಾರಿಡಾರ್ ಪೆರಿಫೆರಲ್ ರಸ್ತೆ ವಾಹನ ಸಂಚಾರಕ್ಕೆ ಬುಧವಾರ ಅಧಿಕೃತವಾಗಿ ಮುಕ್ತವಾಗಿರುವುದು ಸರಿಯಾದರೂ ಅಲ್ಲಿ ವಿಧಿಸುತ್ತಿರುವ ಶುಲ್ಕಕ್ಕೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಹೊಸೂರು ರಸ್ತೆಯಿಂದ ತುಮಕೂರು ರಸ್ತೆಗೆ ಸಂಪರ್ಕಿಸುವ ಅರ್ಧಚಂದ್ರಾಕಾರದ 41 ಕಿಮೀ ಉದ್ದದ ರಸ್ತೆಯಲ್ಲಿ ಸಂಚರಿಸಲು ಸೈಕಲ್ ಹಾಗೂ ಅಟೋ ಹೊರತುಪಡಿಸಿ ಉಳಿದೆಲ್ಲಾ ದ್ವಿಚಕ್ರ ವಾಹನ ಸಂಚಾರಕ್ಕೂ ಶುಲ್ಕ ವಿಧಿಸಿರುವುದು ಮಧ್ಯಮ ವರ್ಗದ ಆಕ್ರೋಶಕ್ಕೆ ಕಾರಣವಾಗಿದೆ.

ನೈಸ್ ಕಂಪನಿ ದಿಢೀರ್ ನೆ ಶುಲ್ಕ ಸಂಗ್ರಹಕ್ಕೆ ಮುಂದಾಗಿದೆ. ಶುಲ್ಕ ಸಂಗ್ರಹ ಬಗ್ಗೆ ಪೂರ್ವಭಾವಿಯಾಗಿ ಯಾವುದೇ ಮಾಹಿತಿಯನ್ನು ಚಾಲಕರಿಗೆ ನೀಡಿದ ಕಾರಣ ಕೆಲಕಾಲ ಗೊಂದಲಕ್ಕೆ ಕಾರಣವಾಯಿತು. ಮಾಗಡಿ ರಸ್ತೆಯ ಟೋಲ್ ಬಳಿ ಹಲವು ವಾಹನ ಚಾಲಕರು ನೈಸ್ ಸಿಬ್ಬಂದಿ ಜತೆಗೆ ವಾಗ್ವಾದಕ್ಕೆ ಇಳಿದ ಘಟನೆಯೂ ಗುರುವಾರ ರಾತ್ರಿ ನಡೆದಿದೆ. ವಾಹನ ಸವಾರರಲ್ಲಿ ಇದು ಅಶ್ಚರ್ಯ ತರಿಸಿದೆ.

ಒಟ್ಟು 41 ಕಿಮೀ ಉದ್ದದ ಪೆರಿಫರಲ್ ರಸ್ತೆ ಹಾಗೂ 9.8 ಕಿಮೀ ಉದ್ದದ ಸಂಪರ್ಕ ರಸ್ತೆ ನಿರ್ಮಾಣ ಕಾರ್ಯ ಇನ್ನು ಪೂರ್ಣಗೊಂಡಿಲ್ಲ. ಆದರೂ ದೇಶದಲ್ಲೇ ಅತಿ ಹೆಚ್ಚು ರಸ್ತೆ ಬಳಕೆ ಶುಲ್ಕವನ್ನು ನಿಗದಿ ಮಾಡಿದೆ. ಇದು 2008ರ ಸಾಲಿನ ದರ ಎನ್ನುವ ಮೂಲಕ ಇನ್ನು ಎರಡು ವಾರಗಳ ಕಾಲ ಶುಲ್ಕ ಪರಿಷ್ಕರಣೆಯ ಅವಕಾಶವನ್ನು ಮುಕ್ತವಾಗಿರಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಂದ ಪಡೆಯು ಶುಲ್ಕಕ್ಕಿಂತಲೂ ಹೆಚ್ಚಿನ ದರವನ್ನು ನೈಸ್ ಪೆರಿಫೆರಲ್ ರಸ್ತೆಯಲ್ಲಿ ವಸೂಲಿ ಮಾಡತೊಡಗಿದೆ.

ರಾಷ್ಟ್ರೀಯ ಹೆದ್ದಾರಿ ನಿಯಮ (ಶುಲ್ಕ ದರ) ಪ್ರಕಾರ ಕೇಂದ್ರ ಹೆದ್ದಾರಿ ಸಚಿವಾಲಯವು ವಾಹನಗಳನ್ನು ನಾಲ್ಕು ವರ್ಗಗಳನ್ನಾಗಿ ವಿಂಗಡಿಸಿ ಶುಲ್ಕ ನಿಗದಿ ಮಾಡುತ್ತದೆ. ಆದರೆ ನೈಸ್ ಕಂಪನಿಯು ಆರು ವರ್ಗಗಳಾಗಿ ವಿಂಗಡಿಸಿ ಶುಲ್ಕ ನಿಗದಿ ಮಾಡಿದೆ ಎನ್ನುವುದು ಜನರ ಆಕ್ರೋಶ ಕಾರಣವಾಗಿದೆ. ಒಟ್ಟಿನಲ್ಲಿ ನೈಸ್ ಕಂಪನಿ ನಿಗದಿಪಡಿಸಿರುವ ರಸ್ತೆ ಬಳಕೆ ಶುಲ್ಕ ದರ ಹೆಚ್ಚಾಗಿದೆ ಎನ್ನುವುದು ಎಲ್ಲರ ಆರೋಪವಾಗಿದೆ. ಸರ್ಕಾರ ಇದಕ್ಕೆ ಯಾವ ರೀತಿ ಸ್ಪಂದಿಸಲಿದೆ ಎನ್ನುವುದು ಮಹತ್ವದ ವಿಷಯವಾಗಿದೆ.

(ದಟ್ಸ್ ಕನ್ನಡ ವಾರ್ತೆ)
ನೈಸ್ ಕಾರಿಡಾರ್ ರಸ್ತೆ ತೆರಿಗೆ ಸಂಗ್ರಹ ವಿವರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+