ಕಸಬ್ ಪಾಕಿಸ್ತಾನದವನೇ: ನವಾಜ್ ಷರೀಫ್
ಇಸ್ಲಾಮಾಬಾದ್, ಡಿ. 19 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪಾಕಿಸ್ತಾನದ ಮೂಲದವನಲ್ಲ ಎಂದು ಪಾಕ್ ಸರ್ಕಾರ ಸ್ಪಷ್ಟಪಡಿಸಿದ ಬೆನ್ನಲ್ಲೇ ಪಾಕ್ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಪ್ರತ್ಯಕ್ಷರಾಗಿದ್ದಾರೆ. ಮುಂಬೈ ದಾಳಿಯಲ್ಲಿ ಸಿಕ್ಕಿಬಿದ್ದಿರುವ ವ್ಯಕ್ತಿ ಪಾಕಿಸ್ತಾನದ ಪಂಜಾಬ ಪ್ರಾಂತ್ಯದವನು ಎಂದು ಹೇಳಿಕೆ ನೀಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಭಾರತದ ಕೈಗೆ ಸಿಕ್ಕಿಬಿದ್ದಿರುವ ಅಜ್ಮಲ್ ಅಮೀರ್ ಕಸಬ್ ಪಾಕ್ ನ ಪಂಜಾಬ ಪ್ರಾಂತ್ಯದ ಪರೀದಕೋಟ್ ಗ್ರಾಮದವನು. ಅಜ್ಮಲ್ ತಂದೆ ಅಮೀರ್ ಕಸಬ್ ಅದೊಂದು ದಿನ ವಾರ್ತಾ ವಾಹಿನಿಗೆ ಭಾರತದಲ್ಲಿ ಸಿಕ್ಕಿಬಿದ್ದಿರುವ ವ್ಯಕ್ತಿ ತನ್ನ ಮಗನೇ ಎಂದು ಹೇಳಿಕೆ ನೀಡಿದ್ದ. ತಕ್ಷಣ ಪಾಕ್ ಸರ್ಕಾರ ಆತನ ಗ್ರಾಮವನ್ನು ವಶಕ್ಕೆ ತೆಗೆದುಕೊಂಡು ಭಾರಿ ಭದ್ರತೆಯನ್ನು ನಿಯೋಜಿಸಿತು. ಅಲ್ಲದೇ ಈ ಗ್ರಾಮದೊಳಗೆ ಯಾರನ್ನು ಬಿಟ್ಟುಕೊಂಡಿರಲಿಲ್ಲ. ಆತನ ತಂದೆ ತಾಯಿಗಳನ್ನು ಭೇಟಿ ಮಾಡಲು ಯಾರಿಗೂ ಅವಕಾಶ ನೀಡಿಲ್ಲ. ಪಾಕ್ ಸರ್ಕಾರ ಏಕೆ ಹೀಗೆ ಮಾಡಿತು ಎಂದು ಷರೀಫ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ನ. 26 ರ ಮುಂಬೈ ದಾಳಿ ನಡೆಸಿದವರು ಲಷ್ಕರ್ ಇ ತೊಯ್ಬಾ ಸಂಘಟನೆಯ ಬೆಂಬಲಿತ ಪಾಕಿಸ್ತಾನದ ಮೂಲದವರು ಎಂದು ಭಾರತ ಹೇಳುತ್ತಲೇ ಬಂದಿದೆ. ಆದರೆ ಪಾಕ್ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಹಾಗೂ ಪ್ರಧಾನಮಂತ್ರಿ ಯೂಸೆಫ್ ರಾಜಾ ಗಿಲಾನಿ ಭಾರತದ ಆರೋಪವನ್ನು ಸ್ಪಷ್ಟವಾಗಿ ತಳ್ಳಹಾಕುತ್ತಲೇ ಬಂದಿದ್ದರು. ಇದೀಗ ಮಾಜಿ ಪ್ರಧಾನಮಂತ್ರಿಯೊಬ್ಬರು ಇದಕ್ಕೆ ಸಾಕ್ಷಿ ಆಗಿರುವುದು ಭಾರತದ ಆರೋಪಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಬಂಗಾಲ ಗಡಿಯಲ್ಲಿ ಉಗ್ರರಿದ್ದಾರೆ ಎಚ್ಚರ
ಕಸಬ್ ಕೇಸ್ : ವಕೀಲರಿಗೆ ಠಾಕ್ರೆ ಎಚ್ಚರಿಕೆ


Click it and Unblock the Notifications
