ಗುರುವಾರದ ಸಚಿವ ಸಂಪುಟದ ನಿರ್ಣಯಗಳು

ಬೆಂಗಳೂರು, ಡಿ. 18 : ಮುಖ್ಯಮಂತ್ರಿ ಡಾ. ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟದಲ್ಲಿ ತೆಗೆದುಕೊಳ್ಳಲಾಗಿರುವ ಪ್ರಮುಖ ನಿರ್ಧಾರಗಳು.

ಕರ್ನಾಟಕ ಭೂ ಸುಧಾರಣಾ ಕಾಯಿದೆಯಡಿಯಲ್ಲಿ ಖಾಸಗಿ ಭೂಮಿಯನ್ನು ಕೊಳ್ಳುವವರಿಗೆ ಭೂ ಉಪಯೋಗ ಪರಿವರ್ತನೆಗೆ ಅನುಮತಿಸಲು ನಿರ್ಧರಿಸಲಾಗಿದ್ದು ಈಸಂಬಂಧ ಚಿಕ್ಕನಾಳ ಸಿಮೆಂಟ್ ಕಾರ್ಪೋರೇಷನ್, ವಿವೇಕಾನಂದ ಆಶ್ರಮ, ಹುಬ್ಬಳ್ಳಿ ಡಾಲ್ಮಿಯ ಸಿಮೆಂಟ್ ವೆಂಚರ್, ಮುರಳಿ ಇಂಡಸ್ಟ್ರೀಸ್ ನಾಗಪುರ, ಶಾಮನೂರು ಸಕ್ಕರೆ ಕಂಪನಿ, ಸವರೀನ್ ಡಿಸ್ಟಲರಿಸ್ ಇವರಿಗೆ ಅನುಮತಿ ನೀಡಲಾಯಿತು.

ಭಾಗ್ಯ ಲಕ್ಷ್ಮಿ ಯೋಜನೆಯಡಿ ಮೊದಲನೆ ಹೆಣ್ಣು ಮಗುವಿಗೆ ಸರ್ಕಾರವು ರೂ. 19,300 ಕಟ್ಟುತ್ತಿದ್ದು ಮಗುವಿಗೆ 18 ವರ್ಷವಾದ ನಂತರ 1 ಲಕ್ಷ 90 ಸಾವಿರ ರೂ ದೊರೆಯುತ್ತದೆ. ಹಾಗೆಯೇ ಎರಡನೇ ಹೆಣ್ಣು ಮಗುವಿಗೆ ಸರ್ಕಾರವು ರೂ. 19,000 ಕಟ್ಟುತ್ತಿದ್ದು ಮಗುವಿಗೆ 18 ವರ್ಷವಾದಾಗ ರೂ 1 ಲಕ್ಷ 62 ಸಾವಿರ ನೀಡಲಾಗುತ್ತದೆ. ಜೊತೆಗೆ ಮಗುವಿಗೆ 15 ವರ್ಷವಾದಾಗ ಕಾಲೇಜು ಶಿಕ್ಷಣಕ್ಕಾಗಿ ರೂ. 50,000 ನೀಡಲು ಮತ್ತು ಮಗುವಿನ ತಂದೆ ತಾಯಿಗಳು ಮೃತರಾದಲ್ಲಿ ರೂ.75,000 ನೀಡುವ ನಿರ್ಧಾರವನ್ನು ಸಚಿವ ಸಂಪುಟ ಕೈಗೊಂಡಿದೆ. ಈ ಬಗ್ಗೆ ಜೀವವಿಮಾ ನಿಗಮದೊಂದಿಗೆ ಸರ್ಕಾರವು ಒಪ್ಪಂದ ಮಾಡಿಕೊಡಿದೆ. 2006-07ಮತ್ತು 2007-08 ನೇ ಅವಧಿಯಲ್ಲಿ 3.2 ಲಕ್ಷ ಮಕ್ಕಳಿಗೆ ಮತ್ತು ಅನಂತರ 2.6 ಲಕ್ಷ ಮಕ್ಕಳಿಗೆ ಈ ಜೀವ ವಿಮಾ ಸೌಲಭ್ಯ ವಿತರಣೆ ಮಾಡಲಾಗಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶೋಭಾ ಕರಂದ್ಲಾಜೆ ಅವರು ಸಂಪುಟ ಸಭೆಯ ನಿರ್ಣಯಗಳ ಮಾಹಿತಿ ಪತ್ರಕರ್ತರಿಗೆ ತಿಳಿಸಿದರು.

ಸರ್ಕಾರಿ ಕಾಲೇಜುಗಳಲ್ಲಿ ಸಹ ಶಿಕ್ಷಕರುಗಳ ಹುದ್ದೆಗಳು ಖಾಲಿಯಿದ್ದು 700 ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜು ಶಿಕ್ಷಕರಾಗಿ ಬಡ್ತಿ ನೀಡಲಾಗಿದೆ. 2,500 ಸಹ ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ಹೊಸ ಅಥವಾ ನಿವೃತ್ತ ಶಿಕ್ಷಕರುಗಳನ್ನ ರೂ 4,000 ಗಳ ಗೌರವ ಧನ ನೀಡಿ ಮಾರ್ಚ್ ವರೆಗೆ ನೇಮಕಾತಿ ಮಾಡಲು ಒಪ್ಪಿಗೆ ನೀಡಲಾಗಿದೆ.

ಜನವರಿ 16 ರಿಂದ ಬೆಳಗಾವಿಯಲ್ಲಿ 10 ದಿನಗಳ ಅಧಿವೇಶನ ನಡೆಯಲಿದೆ. ಆರಂಭದಲ್ಲಿ ಜಂಟಿ ಅಧಿವೇಶನವನ್ನು ರಾಜ್ಯಪಾಲರು ಉದ್ದೇಶಿಸಿ ಮಾತನಾಡಲಿದ್ದಾರೆ. ನ್ಯಾಯಮೂರ್ತಿ ಬಿ.ಕೆ. ಸೋಮಶೇಖರ್ ವಿಚಾರಣಾ ಆಯೋಗದ ಅವಧಿಯನ್ನು ಮತ್ತೆ ಮೂರು ತಿಂಗಳ ಕಾಲ 19-3-2009 ರವರೆಗೆ ವಿಸ್ತರಿಸಲಾಗಿದೆ.

ದಾವಣಗೆರೆ ತಾಲ್ಲೂಕು ಹರಪನಹಳ್ಳಿ ತುಂಗಭದ್ರಾ ನದಿಗೆ ಗರ್ಭಗುಡಿ ಸೇತುವೆ ಹತ್ತಿರ ಬ್ಯಾರೇಜ್ ನಿರ್ಮಾಣ ಮಾಡಲು ಬೃಹತ್ ನೀರಾವರಿ ಇಲಾಖೆಗೆ ವಹಿಸಲು ತೀರ್ಮಾನಿಸಲಾಗಿದ್ದು ಈ ಯೋಜನಾ ವೆಚ್ಚ 36.75 ಕೋಟಿ ರೂ.ಗಳು. ಬಾಗಲಕೋಟೆ ತಾಲ್ಲೂಕು ಹುನಗುಂದ ತಾಲ್ಲೂಕು ಸಿಕ್ಕಸಂಗಳಗುತ್ತಿಗ್ರಾಮ ಮುಳಗಡೆಯಾಗಲಿದ್ದು ಇದರ ಪುನರ್ವಸತಿ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಭಾಷಾಂತರ ನಿರ್ದೇಶನಾಲಯದ ನೇರ ನೇಮಕಾತಿ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ ಪ್ರಕ್ರಿಯೆಗೆ ವಹಿಸಲು ನಿರ್ಧರಿಸಲಾಯಿತು.

(ದಟ್ಸ್ ಕನ್ನಡ ವಾರ್ತೆ)
ಬೆಂಗಳೂರಿಗೆ ಮತ್ತೊಂದು 5 ಸ್ಟಾರ್ ಹೋಟೆಲ್
ಜ.1 ರೊಳಗೆ ನಾಮಫಲಕದಲ್ಲಿ ಕನ್ನಡ ಕಡ್ಡಾಯ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+