ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಬ್ಬಳ್ಳಿ, ವಿ.ನಿಲ್ದಾಣ ರಸ್ತೆಗೆ ಕಾಯಕಲ್ಪ:ಶೆಟ್ಟರ್

By Staff
|
Google Oneindia Kannada News

ಹುಬ್ಬಳ್ಳಿ, ಡಿ. 19 : ನಗರದ ಹೊಸೂರು ಕ್ರಾಸ್‌ದಿಂದ ವಿಮಾನ ನಿಲ್ದಾಣದವರೆಗೆ ಕೈಗೆತ್ತಿಕೊಳ್ಳಲಾಗಿರುವ ದ್ವಿಪಥ ರಸ್ತೆ ಅಗಲೀಕರಣ ಹಾಗೂ ಸುಧಾರಣೆ ಕಾರ್ಯ 2009ರ ಎಪ್ರಿಲ್ ಒಳಗಾಗಿ ಪೂರ್ಣಗೊಳ್ಳಲಿದೆಯೆಂದು ವಿಧಾನಸಭಾಧ್ಯಕ್ಷ ಜಗದೀಶ ಶೆಟ್ಟರ ಇಂದಿಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಈ ರಸ್ತೆ ಅಭಿವೃಧ್ಧಿ ಕಾರ್ಯವನ್ನು ಇಂದು ಪಾದಯಾತ್ರೆ ಕೈಕೊಳ್ಳುವ ಮೂಲಕ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ರಫ್ತು ಕಾರ್ಯಕ್ಕಾಗಿ ರಾಜ್ಯದ ಸಂಪನ್ಮೂಲ ಅಭಿವೃದ್ಧಿ ಯೋಜನೆಯಡಿ ( ಅಸೈಡ್ ) 12 ಕೋಟಿ ರೂ. ಗಳ ವೆಚ್ಚದಲ್ಲಿ ಐದು ಕಿ. ಮಿ. ಉದ್ದದ ಈ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ .

ಈಗಾಗಲೇ ದ್ವಿಪಥ ರಸ್ತೆ ಕಾಮಗಾರಿಗಳು ಪ್ರಾರಂಭವಾಗಿದ್ದು, ವಿವಿಧ ಇಲಾಖೆಗಳಲ್ಲಿಯ ಸಮನ್ವಯದ ಕೊರತೆಯಿಂದ ಮಂದಗತಿಯಲ್ಲಿ ಸಾಗಿದ್ದ ಈ ಕಾರ್ಯವನ್ನು ತ್ವರಿತಗೊಳಿಸಲು 2 ಹಂತದ ಸಭೆಗಳನ್ನು ಸಂಬಂಧಪಟ್ಟ ಅಧಿಕಾರಿಗಳೊಡನೆ ನಡೆಸಲಾಗಿದೆ. ಈಗ ಪಾದಯಾತ್ರೆಯ ಮೂಲಕ ಅಧಿಕಾರಿಗಳಿಗೆ ಸ್ಥಳದಲ್ಲೇ ಆಗಬೇಕಾದ ವಿವಿಧ ಕಾರ್ಯಗಳ ನಿರ್ವಹಣೆ ಸೂಚನೆ ನೀಡಲಾಗಿದೆಯೆಂದು ಜಗದೀಶ ಶೆಟ್ಟರ ತಿಳಿಸಿದರು.

ಗೋಕುಲ ರಸ್ತೆ ಪ್ರಾರಂಭದಲ್ಲಿರುವ ನಾಲಾ ಸೇತುವೆ ಬಲಪಡಿಸುವುದು ಹಾಗೂ ಸಮಾಂತರವಾಗಿ ಮತ್ತೊಂದು ಸೇತುವೆ ನಿರ್ಮಿಸುವ ಕಾರ್ಯ, ಕುಡಿಯುವ ನೀರಿನ ಪೈಪ್ ಹಾಗೂ ದೂರ ಸಂಪರ್ಕ ಲೈನ್ ಸ್ಥಳಾಂತರದ ವಿಳಂಬದಿಂದ ಸಾಧ್ಯವಾಗಿರಲಿಲ್ಲ. ಈಗ ನೀರಿನ ಪೈಪ್ ಸ್ಥಳಾಂತರಿಸಲಾಗಿದೆ ಹಾಗೂ ದೂರ ಸಂಪರ್ಕ ಲೈನ್ ಸ್ಥಳಾಂತರವನ್ನು ಮೂರು ನಾಲ್ಕು ದಿನಗಳಲ್ಲಿ ಮಾಡಲು ತಿಳಿಸಲಾಗಿದ್ದು, ಕೂಡಲೇ ಸಮಾಂತರ ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು.
ಈ ರಸ್ತೆ ಕಾಮಗಾರಿಗಾಗಿ ಕೈಗೊಂಡ ಭೂ ಸ್ವಾಧೀನಕ್ಕಾಗಿ ಪರಿಹಾರ ಧನ ನೀಡಲು 2.86 ಕೋಟಿ ರೂ. ಗಳ ಅನುದಾನದ ಅಗತ್ಯವಿದೆ. ಈ ಬಗ್ಗೆ ಸಹ ಲೋಕೋಪಯೋಗಿ ಕಾರ್ಯದರ್ಶಿಗಳೊಡನೆ ಸಮಾಲೋಚನೆ ಮಾಡಲಾಗಿದ್ದು , ಶೀಘ್ರವೇ ಕ್ರಮಕೈಕೊಳ್ಳಲು ಅಧಿಕಾರಿಗಳಿಗೆ ತಿಳಿಸಿರುವುದಾಗಿ ಅವರು ಹೇಳಿದರು.
ನಗರದಲ್ಲಿ ಸುಸಜ್ಜಿತ ವಿಮಾನ ನಿಲ್ದಾಣಕ್ಕಾಗಿ 700 ಎಕರೆ ಭೂಮಿ ಸ್ವಾಧೀನಕ್ಕಾಗಿ ಈಗಾಗಲೇ ಉನ್ನತ ಅಧಿಕಾರಿಗಳು ಹಾಗೂ ಶಾಸಕರೊಂದಿಗೆ ಸಭೆ ನಡೆಸಲಾಗಿದ್ದು, ಭೂ ಸ್ವಾಧೀನ ಕಾರ್ಯಕ್ಕೆ ಒತ್ತು ನೀಡಲಾಗಿದೆ. ಈ ಪ್ರದೇಶದಲ್ಲಿರುವ 88 ಮನೆಗಾಳಿಗಾಗಿ ಪರಿಹಾರ ಧನ ನೀಡುವ ಬಗ್ಗೆ ಜಿಲ್ಲಾಡಳಿತದ ದರ ನಿಗದಿಗೆ ಒಪ್ಪಂದವಾಗಿದೆ. ಇನ್ನೂಳಿದಂತೆ ಕೃಷಿಯೇತರ ಭೂಮಿ ಹಾಗೂ ಕೃಷಿ ಭೂಮಿ ಮಾಲೀಕರೊಂದಿಗೆ ಪರಸ್ಪರ ಚರ್ಚಿಸಿ ಪರಿಹಾರ ಧನ ನಿರ್ಧರಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆಂದು ಅವರು ಹೇಳಿದರು.

ಬಿಜಾಪುರ - ಗದಗ ಹಾಗೂ ಬಿಡ್ನಾಳ ಬಳಿ ರಾಷ್ಟ್ರೀಯ ಹೆದ್ದಾರಿಗೆ ಸೇರುವ ರಿಂಗ್ ರೋಡ್ ನಿರ್ಮಿಸುವ ಬೈಪಾಸ್ ಯೋಜನೆಗೆ ಅನುಮತಿ ದೊರೆತಿದ್ದು, ಭೂ ಸ್ವಾಧೀನಕ್ಕಾಗಿ ಸರ್ವೆ ಕಾರ್ಯ ಪ್ರಾರಂಭವಾಗಿದೆ ಎಂದು ಶೆಟ್ಟರ್ ಹೇಳಿದರು

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X