ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ.15ರ ವೇಳೆಗೆ ಗುಲಬರ್ಗಾ-ಒನ್ ಶುರು

By Staff
|
Google Oneindia Kannada News

ಗುಲಬರ್ಗಾ, ಡಿ. 19 : ವ್ಯಾಪಕ ಯಶಸ್ಸು ಗಳಿಸಿರುವ ಬೆಂಗಳೂರು-ಒನ್ ಮಾದರಿಯಲ್ಲಿ ಗುಲಬರ್ಗಾದಲ್ಲಿ ಗುಲಬರ್ಗಾ-ಒನ್ ಆರಂಭಿಸಲಾಗುತ್ತಿದೆ. ಗುಲಬರ್ಗಾ ಒನ್‌ನಲ್ಲಿ ಮಹಾನಗರ ಪಾಲಿಕೆಗೆ ಸಂಬಂಧಿಸಿದ 5 ಸೇವೆಗಳು ಸೇರಿದಂತೆ ಒಟ್ಟು 9 ಸೇವೆಗಳನ್ನು ಆರಂಭಿಕವಾಗಿ ನೀಡಲಾಗುವುದು. 2009ರ ಫೆಬ್ರವರಿ 15ರ ವೇಳೆಗೆ ಯೋಜನೆ ಜಾರಿಗೆ ಬರಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ.ಕೆ ಜಿ ಜಗದೀಶ್ ಅವರು ಹೇಳಿದರು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಕರೆದಿದ್ದ ಕರ್ನಾಟಕ ರಾಜ್ಯ ವಿಸ್ತಾರ ಪ್ರದೇಶ ಸಂಪರ್ಕಜಾಲ (ಕರ್ನಾಟಕ ಸ್ಟೇಟ್ ವೈಡ್ ಏರಿಯಾ ನೆಟ್‌ವರ್ಕ್) ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರದ ವಿವಿಧ ಸೇವೆಗಳು ಈ ಕೇಂದ್ರಗಳ ಮೂಲಕ ಲಭ್ಯವಾಗುತ್ತಿದ್ದು, ಸರತಿ ಸಾಲಿನಲ್ಲಿ ನಿಲ್ಲುವ ಪ್ರಮೇಯ ಇದರಿಂದ ತಪ್ಪುತ್ತದೆ. ಬಿಸಿನೆಸ್ ಲೈಸನ್ಸ್‌ಗಳನ್ನು ಸಹ ಈ ಕೇಂದ್ರದ ಮೂಲಕ ನೀಡಲಾಗುವುದು ಎಂದು ಅವರು ಹೇಳಿದರು.

ಕಳೆದ ಮೂರು ವರ್ಷಗಳಿಂದ ಬೆಂಗಳೂರು-ಒನ್ ಕಾರ್ಯ ನಿರ್ವಹಿಸುತ್ತಿದ್ದು, ವ್ಯಾಪಕವಾಗಿ ಯಶಸ್ವಿಯಾಗಿದೆ. ಬೆಂಗಳೂರು-ಒನ್ ಕೇಂದ್ರವು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಬಿಲ್‌ಗಳ ಪಾವತಿ, ರೈಲು ಟಿಕೆಟ್ ಕಾಯ್ದಿರಿಸುವಿಕೆ ಮುಂತಾದ 28 ಸೇವೆಗಳನ್ನು ಈ ಕೇಂದ್ರದ ಮೂಲಕ ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಗುಲಬರ್ಗಾ-ಒನ್‌ನಿಂದ ಸಾರ್ವಜನಿಕರಿಗೆ ಅನುಕೂಲವಾಗುವುದರಿಂದ ಈ ಯೋಜನೆಗೆ ಬೇಕಾದ ಹಣವನ್ನು ಒದಗಿಸಲಾಗುವುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಶ್ರೀಧರ್ ಅವರು ಭರವಸೆ ನೀಡಿದರು.

(ದಟ್ಸ್ ಕನ್ನಡ ವಾರ್ತೆ)
ಗುರುವಾರ(ಡಿ.19) ಸಚಿವ ಸಂಪುಟದ ನಿರ್ಣಯಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X