ಬಂಗಾಲ ಗಡಿಯಲ್ಲಿ ಉಗ್ರರಿದ್ದಾರೆ ಎಚ್ಚರ

ಪಶ್ಚಿಮ ಬಂಗಾಲ, ಡಿ , 19 : ಮುಂಬೈ ಭಯೋತ್ಪಾದನೆಯ ಬೆನ್ನಲ್ಲೇ ಮತ್ತೊಂದು ಅನಾಹುತ ಸೃಷ್ಟಿಸಲು ಉಗ್ರ ಹೊಂಚು ಹಾಕಿರುವ ಪ್ರಕರಣವನ್ನು Subsidiary Intelligence Branch (SIB) ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ. ಪಾಕಿಸ್ತಾನ ಕೃಪಾಪೋಷಿತ 8 ಮಂದಿ ಉಗ್ರರ ತಂಡ ಬಾಂಗ್ಲಾ ಗಡಿ ಭಾಗದಿಂದ ಭಾರತದೊಳಗೆ ನುಸುಳುವ ಯತ್ನ ನಡೆಸಿದೆ ಎನ್ನುವ ಎಚ್ಚರಿಕೆಯ ಕರೆ ಗಂಟೆಯೊಂದನ್ನು ಇಂಗ್ಲಿಷ್ ದೈನಿಕ ಟೈಮ್ಸ್ ಅಫ್ ಇಂಡಿಯಾ ವರದಿ ಮಾಡಿದೆ.

ವಿಷಯ ತಿಳಿದ ತಕ್ಷಣ ಎಚ್ಚೆತ್ತುಕೊಂಡ ಪಶ್ಚಿನ ಬಂಗಾಲ ಸರ್ಕಾರ, ಬಾಂಗ್ಲಾ ದೇಶದ ಗಡಿ ಪ್ರದೇಶದ ಸುತ್ತಮುತ್ತ ಭಾರಿ ಬಿಗಿ ಬಂದೋಬಸ್ತ್ ನಿಯೋಜಿಸಿದೆ. ಗಡಿ ಪ್ರದೇಶದ ಸುತ್ತ ಅನುಮಾನಾಸ್ಪದವಾಗಿ ತಿರುಗಾಡುವ ವ್ಯಕ್ತಿಗಳನ್ನು ತಪಾಸಣೆ ನಡೆಸತೊಡಗಿದೆ. ಪಾಕಿಸ್ತಾನ ಪೋಷಿತ ಬಾಂಗ್ಲಾ ದೇಶದ ಹುಜಿ ಉಗ್ರರು ಭಾರತದೊಳಗೆ ನುಸುಳಲು ಪ್ರಯತ್ನ ನಡೆಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಪಶ್ಚಿನ ಬಂಗಾಲ ಸರ್ಕಾರಕ್ಕೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಲ ಗೃಹ ಸಚಿವ ಅಶೋಕ್ ಮೋಹನ್ ಚಕ್ರಬರ್ತಿ, ಪೊಲೀಸ್ ಹಾಗೂ ಬಿಎಸ್ಎಫ್ ಪಡೆಯನ್ನು ಗಡಿ ಕಾವಲಿಗೆ ನಿಯೋಜಿಸಲಾಗಿದೆ. ಸಾಕಷ್ಟು ಭದ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಕಳೆದ ಡಿ 15 ರಂದೆ 8 ಮಂದಿ ಇರುವ ಉಗ್ರರ ಗುಂಪೊಂದು ಭಾರತದೊಳಗೆ ನುಗ್ಗಲು ಪ್ರಯತ್ನ ನಡೆಸಿದೆ ಎನ್ನುವ ಅಂಶ ತಿಳಿದ ಕೂಡಲೇ ಜಾಗೃತರಾಗಿ ಉಗ್ರ ಬಂಧನಕ್ಕೆ ವ್ಯಾಪಕ ಬಂದೋಬಸ್ತ್ ನಿರ್ಮಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬಾಂಗ್ಲಾ ದೇಶದ ರಣಸಿಲ್ ಕೋಚ್ ಎಂಬ ಪ್ರದೇಶದ ಹೈದರ್ ಅಲಿ ಎಂಬುವವರ ಮನೆಯೊಂದರಲ್ಲಿ ಉಗ್ರರು ಬಾಡಿಗೆ ಮನೆಯಲ್ಲಿ ಇದ್ದಾರೆ. ತಿಂಗಳಿಗೆ ಎರಡು ಸಾವಿರ ರುಪಾಯಿಗಳನ್ನು ನೀಡಿ ಮನೆಯನ್ನು ಬಾಡಿಗೆ ಪಡೆದಿದ್ದಾರೆ. ಎಂದು ಗುಪ್ತಚರ ಇಲಾಖೆ ತಿಳಿಸಿದೆ.

(ದಟ್ಸ್ ಕನ್ನಡ ವಾರ್ತೆ)
ಮುಂಬೈ ದಾಳಿಯಲ್ಲಿ ದಾವೂದ್ ಕೈವಾಡ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+