ಮುಂಬೈ ದಾಳಿಯಲ್ಲಿ ದಾವೂದ್ ಕೈವಾಡ

ದಾವೂದ್ ಇಬ್ರಾಹಿಂ ವಿರುದ್ಧ ವಿದೇಶವೊಂದು ಈ ರೀತಿ ನೇರ ಆರೋಪ ಮಾಡಿರುವುದು ಇದೇ ಮೊದಲು . ಉಗ್ರರು ದಾವೂದ್ ಕಳ್ಳಸಾಗಣಿಯಿಂದ ಬಂದ ಹಣದಿಂದ ಮುಂಬೈ ದಾಳಿಯನ್ನು ನಡೆಸಿದ್ದಾರೆ. ದಾವೂದ್ ಬಂಟರು ಈ ದಾಳಿಗೆ ಸಹಾಯ ಮಾಡಿದ್ದಾರೆ ಎಂದು ಭಾರತ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ರಷ್ಯಾದ ಮಾದಕ ವಸ್ತು ನಿಗ್ರಹ ಸಂಸ್ಥೆ ನಿರ್ದೇಶಕ ವಿಕ್ಟರ್ ಇವಾನೋವ್ ಹೇಳಿದ್ದಾರೆ.
ಆಪ್ಘಾನಿಸ್ತಾನದ ಮೂಲಕ ನಡೆಯುವ ಮಾದಕ ವಸ್ತು ವ್ಯವಹಾರದಿಂದ ಭಾರಿ ಲಾಭವಿದೆ. ಇದನ್ನು ಉಗ್ರರಿಗೆ ನೆರವು ನೀಡಲು ಮತ್ತು ಏಷ್ಯಾದ ರಾಜಕೀಯ ವ್ಯವಸ್ಥೆ ಅಸ್ಥಿರಗೊಳಿಸಲು ಬಳಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ. ಇದೇ ವೇಳೆ ಲಷ್ಕರ್ ಇ ತೊಯ್ಬಾ ಸಂಘಟನೆಗೆ ನಿಧಿ ಸಂಗ್ರಹಕ್ಕೂ ದಾವೂದ್ ನೆರವಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
(ಏಜೆನ್ಸೀಸ್)


Click it and Unblock the Notifications
