ಸೋನಿಯಾ ಭಾರತ ಆಳಬಹುದು, ಕಾಂಗ್ರೆಸ್
ನವದೆಹಲಿ. ಡಿ. 19 : ಸೋನಿಯಾ ಗಾಂಧಿ ಅವರು ಭಾರತದ ಸಂವಿಧಾನದತ್ತ ಅಧಿಕಾರ ಪಡೆಯಬಹುದು ಎಂದು ಕಾಂಗ್ರೆಸ್ ಪಕ್ಷ ಶುಕ್ರವಾರ ಸರ್ವೋಚ್ಛ ನಾಯ್ಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದೆ.
ಭಾರತದಲ್ಲಿ ಸೋನಿಯಾಗಾಂಧಿ ನೆಲೆಸಿ 35 ವರ್ಷಗಳು ಕಳೆದಿರುವುದರಿಂದ ಅವರು ಭಾರತೀಯರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಭಾರತದ ಸಂವಿಧಾನಾತ್ಮಕ ಹುದ್ದೆಗಳನ್ನು ಅಲಂಕರಿಸಬಹುದು ಎಂದು ಪತ್ರದಲ್ಲಿ ಹೇಳಲಾಗಿದೆ ಎಂದು ರಿಡಿಫ್ ಡಾಟ್ ಕಾಂ ತನ್ನ ಶುಕ್ರವಾರ ಸಂಜೆಯ ಸುದ್ಧಿ ಸ್ಫೋಟದಲ್ಲಿ ಹೇಳಿದೆ.
ಸೋನಿಯಾ ಅವರನ್ನು ಭಾರತೀಯರು ಎಂದು ಪರಿಗಣಿಸಬೇಕು ಎಂದು ಕಾಂಗ್ರೆಸ್ ಈ ಹಿಂದೆ ಸುಪ್ರಿಂಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ಆದರೆ, ಪ್ರತಿಪಕ್ಷಗಳಾದ ಬಿಜೆಪಿ ಸೇರಿದಂತೆ ಎನ್ ಡಿಎ ಪಕ್ಷಗಳು ಸೋನಿಯಾಗಾಂಧಿ ಅವರು ಭಾರತದ ಸಂವಿಧಾನಾತ್ಮಕ ಹುದ್ದೆಗಳನ್ನು ಅಲಂಕರಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಸೋನಿಯಾ ಭಾರತೀಯರೆ? ಅಥವ ಇನ್ನೂ ವಿದೇಶೀ ಪ್ರಜೆಯೇ? ಅಥವಾ ಎಂದೆಂದಿಗೂ ವಿದೇಶೀ ಪ್ರಜೆಯಾಗಿಯೇ ಉಳಿಯುತ್ತಾರೆಯೇ? ಅವರು ಸರಕಾರಿ ಹುದ್ದೆ ಅಲಂಕರಿಸಬಹುದೇ? ಚರ್ಚಿಸಿ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
